ರಾಜ್ಯ
ಕನ್ನಡ ಶಾಲೆ ಉಳಿಸಲು ಪೋಷಕರ ಸಹಕಾರ ಅಗತ್ಯ : ಯುವಸಾಹಿತಿ ಗುರುಗೌತಮ್ ಹಳೇಪುರ
ಮೈಸೂರು : ನಂಜನಗೂಡು ತಾಲ್ಲೋಕು ಹಳೇಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮೃತ ಮಹೋತ್ಸವ 76ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು ಈ ಸಡಗರದ ಕಾರ್ಯಕ್ರಮದಲ್ಲಿ ಸ್ವಗ್ರಾಮದ ಯುವಸಾಹಿತಿ ಚಿಂತಕ ಗುರುಗೌತಮ್ ರವರು ಅತಿಥಿಯಾಗಿ ಭಾಗವಹಿಸಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸುಭಾಶಯಗಳನ್ನು ತಿಳಿಸುತ್ತಾ “ಸ್ವಾತಂತ್ರ್ಯದ ಹಿಂದೆ ಹಲವಾರು ಹಿರಿಯರ ಶ್ರಮ ಹಾಗೂ ಬಲಿದಾನ ಅಡಗಿದೆ, ಈ ಸ್ವಾತಂತ್ರ್ಯ ಹಾಗೇ ಸುಮ್ಮನೆ ಬಂದದ್ದಲ್ಲ ಅದಕ್ಕಾಗಿ ನೂರಾರು ಹೋರಾಟಗಾರರ ಉಪವಾಸ, ಸೆರೆವಾಸ, ಪ್ರಾಣತ್ಯಾಗವಾದಂತ ವೀರಗಥೆ ಇದೆ. ಅದನ್ನೆಲ್ಲಾ ನಾವು ನಿತ್ಯ ನೆನೆಯುತ್ತಾ ಸ್ವಾತಂತ್ರ್ಯ ಹೋರಾಟಗಾರರನ್ನು ನಮಿಸಿ ವಂದಿಸಿ ಬದುಕುವುದು ಆವಶ್ಯಕ. ಈ ಕಾರ್ಯ ಪ್ರಾಥಮಿಕ ಶಾಲಾ ಹಂತದಿಂದ ಸುಸಜ್ಜಿತವಾಗಿ ನಡೆದು ದೇಶಪ್ರೇಮ ಎಲ್ಲರ ಮನದಲ್ಲಿ ಉಕ್ಕಬೇಕು”, ಎಂದು ತಿಳಿಸುವುದರ ಜೊತೆಗೆ “ಕನ್ನಡ ಶಾಲೆ ಉಳಿಸಲು ಪೋಷಕರ ಸಹಕಾರ ಅಗತ್ಯ” ಎಂದು ತಿಳಿಸಿದರು ಇದೇ ಸಂಧರ್ಭದಲ್ಲಿ ಎಸ್.ಡಿ.ಎಂ.ಸಿ ಅದ್ಯಕ್ಷೆ ಶ್ರೀಮತಿ ಸವಿತ ಪುಟ್ಟರಾಜು ರಾಜಕೀಯ ಮುಖಂಡರಾದ ಎಚ್ ಆರ್ ರಂಗನಾಥ್ ಹಾಗೂ ಗೀರಿಶ್ ಮತ್ತು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯರಾದ ಶ್ರೀಮತಿ ಪುಷ್ಪನಿರಂಜನ್ ಮತ್ತು ಶಾಲೆ ಮುಖ್ಯೋಪಾದ್ಯಯ ಮರಳಸಿದ್ದಪ್ಪ ಹಾಗೂ ಗಣ್ಯರು ಹಾಜರಿದ್ದರು.
Attachments area