ಶಾಲಾ ಮಕ್ಕಳು ಸರಳವಾಗಿ ಇಂಗ್ಲಿಷ ಕಲಿಯಲು ಶಬ್ದಕೋಶ ವಿತರಣೆ

ತುಮಕೂರು : ನಗರದ ಕೋತಿ ತೋಪಿನಲ್ಲಿರುವ ಜಯಪ್ರಕಾಶ್ ನಾರಾಯಣ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸ್ಪೂರ್ತಿ ಡೇವಲಪ್ರ್ಸ್ ವತಿಯಿಂದ ಉಚಿತವಾಗಿ 150ಕ್ಕೂ ಹೆಚ್ಚು ಕನ್ನಡ-ಇಂಗ್ಲಿಷ್ ಶಬ್ದಕೋಶಗಳನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಸ್ಪೂರ್ತಿ ಡೆವಲ್ರ್ಸ್ನ ಎಸ್.ಪಿ.ಚಿದಾನಂದ,ಅತ್ಯಂತ ಸರಳವಾಗಿ ಇಂಗ್ಲಿಷ ಕಲಿಯಬಹುದಾದ ಶಬ್ದಕೋಶವನ್ನು ಇಂದು ನಮ್ಮ ಸಂಸ್ಥೆಯ ವತಿಯಿಂದ ಬಡಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಉಚಿತವಾಗಿ ಹಂಚಲಾಗುತ್ತಿದೆ.ಇದನ್ನು ಪ್ರತಿಯೊಬ್ಬರು ಓದಿ, ಅರ್ಥಕೊಂಡು, ತಾವುಗಳು ಸಹ ಇಂಗ್ಲಿಷನ್ನು ಚನ್ನಾಗಿ ಕಲಿತು ಮಾತನಾಡು ವಂತಾಗಬೇಕು ಎಂಬುದು ನಮ್ಮ ಆಶಯವಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು.
ಶಿಕ್ಷಣ ಇಂದು ಬಡವರಿಗೆ ಕೈಗೆಟುಕದಂತಾಗಿದೆ. ಹಾಗಾಗಿ ಉಳ್ಳುವರು ಬಡಮಕ್ಕಳ ಶಿಕ್ಷಣಕ್ಕೆ ನೆರವು ನೀಡುವಂತಹ ಉದಾರ ಗುಣವನ್ನು ಬೆಳೆಸಿಕೊಳ್ಳಬೇಕಿದೆ. ಕರೆಯ ನೀರನು ಕೆರೆಗೆ ಚಲ್ಲಿ ಎಂಬ ಹಿರಿಯ ನಾಣ್ನುಡಿಯಂತೆ ಸಮಾಜದಿಂದ ಪಡೆದುಕೊಂಡಿರುವುದನ್ನು ಮತ್ತೇ ಸಮಾಜಕ್ಕೆ ನೀಡುವ ಮೂಲಕ ಅದರ ಋಣ ತೀರಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ಎಸ್.ಪಿ.ಚಿದಾನಂದ ತಿಳಿಸಿದರು.
ಈ ವೇಳೆ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಮುರುಳಿ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.