ಶಿರಾ
ಕುಂಚಿಟಿಗರ ಓಬಿಸಿ ಮೀಸಲಾತಿಗಾಗಿ ಜನಜಾಗೃತಿ ಜಾಥ : ಗುಳಿಗೇನಹಳ್ಳಿ ನಾಗರಾಜು
ಶಿರಾ : ಕುಂಚಿಟಿಗರ ಕೇಂದ್ರ ಓಬಿಸಿ ಮೀಸಲಾತಿಗಾಗಿ ಜುಲೈ 31ರ ಭಾನುವಾರದಂದು ಜನಜಾಗೃತಿ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಕುಂಚಿಟಿಗರ ಸಂಘದ ಕಾರ್ಯದರ್ಶಿ ಗುಳಿಗೇನಹಳ್ಳಿ ನಾಗರಾಜು ಹೇಳಿದರು.
ಅವರು ನಗರದ ಕುಂಚಿಟಿಗರ ಸಂಘದ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜುಲೈ 31 ರಂದು ಬೆಳಿಗ್ಗೆ 8-30 ಕ್ಕೆ ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಮಟ್ಟದ ಓಬಿಸಿ ಮೀಸಲಾತಿ ಜನ ಜಾಗೃತಿ ಜಾಥವು ಚಿರತಹಳ್ಳಿ, ಕರಿದಾಸರಹಳ್ಳಿ, ಲಕ್ಕನಹಳ್ಳಿ, ತಡಕಲೂರು, ತಿಮ್ಮನಹಳ್ಳಿ, ಬೆಜ್ಜಿಹಳ್ಳಿಯಿಂದ ಪ್ರಾರಂಭವಾಗಿ ಪ್ರತಿ ಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಳಿಗಳನ್ನು ಪ್ರತಿ ಭಾನುವಾರ ಜಾಥ ತಲುಪಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಬಂಧುಗಳು ಭಾಗವಹಿಸಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಎಸ್.ಎಲ್.ಗೋವಿಂದರಾಜು, ಕರಿಯಣ್ಣ, ಸೇರಿದಂತೆ ಹಲವರು ಹಾಜರಿದ್ದರು.