ಶಿರಾ
ಕೆ.ಎನ್.ರಾಜಣ್ಣ ಅವರು ಕೂಡಲೇ ಹೆಚ್.ಡಿ.ದೇವೇಗೌಡರ ಕ್ಷಮೆಯಾಚಿಸಲು ಸಿ.ಆರ್.ಉಮೇಶ್ ಒತ್ತಾಯ
ಶಿರಾ : ಮಾಜಿ ಶಾಸಕರಾದ ಕೆ ಎನ್ ರಾಜಣ್ಣ ಅವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಕೂಡಲೇ ಕೆ.ಎನ್.ರಾಜಣ್ಣ ಅವರು ಹೆಚ್.ಡಿ.ದೇವೇಗೌಡರಿಗೆ ಕ್ಷಮೆಯಾಚಿಸಬೇಕು ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಆರ್.ಉಮೇಶ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಪಕ್ಷ ಬದಿಗಿಟ್ಟು ಗೌರವ ಕೊಡುತ್ತಾರೆ. ಆದರೆ ಕೆ.ಎನ್.ರಾಜಣ್ಣ ಅವರು ಈ ನಾಡಿನ ಹಿರಿಯ ರಾಜಕಾರಣಿಗಳು ಹಾಗೂ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ರಾಜ್ಯಕ್ಕೆ ಅಪಮಾನ ಮಾಡಿದ ಹಾಗೆ. ಕೂಡಲೇ ಕ್ಷಮೆ ಯಾಚಿಸಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಿ ಅಣುಕು ಪ್ರದರ್ಶನ ಮಾಡಬೇಕಾಗುತ್ತೆ. ಕ್ಷಮೆ ಕೇಳದೆ ಇದ್ದಲ್ಲಿ ಮುಂದೆ ಶಿರಾ ವಿಧಾನಸಭಾ ವ್ಯಾಪ್ತಿ ಪ್ರತಿಭಟನೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.