ಜಾನಪದ ಸಂಸ್ಕೃತಿ ಉಳಿಸಲು ಸಾಂಸ್ಕೃತಿಕ ಟ್ರಸ್ಟ್ ಸಹಕಾರಿ : ಸಂಗೀತ ನಿರ್ದೇಶಕ ವಿ.ಮನೋಹರ್
ಶಿರಾದಲ್ಲಿ ಕರ್ನಾಟಕ ಕಾಡುಗೊಲ್ಲ ಸಾಂಸ್ಕೃತಿಕ ಟ್ರಸ್ಟ್ ಉದ್ಘಾಟನೆ
ಶಿರಾ : ಮೂಲ ಜಾನಪದ ಸೊಗಡು ಅಳಿವಿನಂಚಿನಲ್ಲಿದೆ ಬುಡಕಟ್ಟು ಸಂಸ್ಕೃತಿ, ಕಲೆಗಳನ್ನು ಮುಂದಿನ ತಲೆಮಾರಿಗೆ ಪಸರಿಸುತ್ತಿರುವ ಕಾರ್ಯಕ್ಕೆ ಮುಂದಾಗಿರುವ ಕಾಡುಗೊಲ್ಲ ಸಾಂಸ್ಕೃತಿಕ ಟ್ರಸ್ಟ್ಗೆ ಶುಭವಾಗಲಿ ಎಂದು ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ಹೇಳಿದರು.
ಅವರು ನಗರದ ಶ್ರೀವತ್ಸ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾಡುಗೊಲ್ಲ ಸಾಂಸ್ಕೃತಿಕ ಟ್ರಸ್ಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾಡುಗೊಲ್ಲ ಸಾಂಸ್ಕೃತಿಕ ಟ್ರಸ್ಟ್ ಮೂಲಕ ಸಮುದಾಯದ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಹಾಗೂ ಬುಡಕಟ್ಟು ಸಂಸ್ಕೃತಿ ಉಳಿಯಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜಸೇವಕ ಶ್ರೀರಾಮೇಗೌಡ ಅವರು ಮಾತನಾಡಿ ಅತ್ಯಂತ ಶ್ರೀಮಂತ ಪರಂಪರೆಯ ಕಾಡುಗೊಲ್ಲ ಸಮುದಾಯದ ಬುಡಕಟ್ಟು ಕಲಾವಿದ ಮೋಹನ್ ಕುಮಾರ್ ಅವರು ಅವಿರತವಾಗಿ ಸಮುದಾಯದ ಪರವಾಗಿ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ಅವರ ಹಾಡುಗಳನ್ನು ನೋಡಿ ನನ್ನ ತಾಯಿ ಅಜ್ಜಿ ಎಲ್ಲಾ ನೆನಪಾಯಿತು , ಮುಂದಿನ ಪೀಳಿಗೆಗೂ ಈ ಸಂಸ್ಕೃತಿ ಉಳಿಯುವಂತಾಗಬೇಕು , ಅತ್ಯಂತ ಭಾವನಾತ್ಮಕ ಸಂಬಂಧ ನನ್ನ ಮತ್ತು ಕಾಡುಗೊಲ್ಲ ಸಮುದಾಯಕ್ಕಿದೆ ಮೋಹನ್ ಕುಮಾರ್ ಅವರ ಟ್ರಸ್ಟ್ಗೆ ಒಂದು ಎಕರೆ ಭೂಮಿಯನ್ನು ದಾನ ನೀಡುವುದಾಗಿ ತಿಳಿಸಿದರು. ಅಲ್ಲಿ ಸಾಂಸ್ಕೃತಿಕ ಚಟುವಟಿಕೆ ನಡೆಸಲಿ ನಮ್ಮ ಸಂಸ್ಕೃತಿ ಉಳಿಯುವಂತಾಗಲಿ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನು ವಿವಿಧ ಕಲಾತಂಡಗಳಿಂದ ಪ್ರದರ್ಶನದೊಂದಿಗೆ ನಗರದ ಅಂಬೇಡ್ಕರ್ ವೃತ್ತದಿಂದ ಶ್ರೀವತ್ಸ ಕಲ್ಯಾಣಮಂಟಪದವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಕೇಂದ್ರ ಸಾಮಾಜಿಕ ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಹಾಗೂ ಶಾಸಕ ಡಾ.ಸಿಎಂ ರಾಜೇಶ್ ಗೌಡ ಅವರು ಭಾಗವಹಿಸಿದ್ದರು, ಅಳಿವಿನಂಚಿನಲ್ಲಿದ್ದ ವಿವಿಧ ಕಲಾ ತಂಡಗಳಿಂದ ಕಲಾ ಪ್ರದರ್ಶನ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹೆಚ್.ಮಾರುತೀಶ್, ಮುಖಂಡ ಮದಲೂರು ಮೂರ್ತಿ ಮಾಸ್ಟರ್, ಕರ್ನಾಟಕ ಕಾಡುಗೊಲ್ಲ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಮೋಹನ್‌ಕುಮಾರ್, ಸದಸ್ಯ ವೀರುಪಾಟೀಲ್, ಕರ್ನಾಟಕ ಬಂಜಾರ ರಕ್ಷಣಾ ವೇದಿಕೆಯ ಅಧ್ಯಕ್ಷ ತಿಪ್ಪಾ ಸರ್ ನಾಯ್ಕ್ ಸೇರಿದಂತೆ ಹಲವರು ಹಾಜರಿದ್ದರು.