ಕೊರಟಗೆರೆ

ಮಾರಮ್ಮದೇವಿಯ ನೂತನ ದೇವಾಲಯದ ಉದ್ಘಾಟನೆ, ಶಿರ ಕಳಸ ಸ್ಥಾಪನೆ : ಮಾ.13 ರಿಂದ 15 ವರೆಗೆ ದೇವಿಗೆ ವಿವಿಧ ಪೂಜಾವಿಧಾನಗಳು ನೆರವೇರಲಿವೆ

ಕೊರಟಗೆರೆ : ತಾಲೂಕಿನ ಕೋಳಾಲ ಹೋಬಳಿಯ ಇರಕಸಂದ್ರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ   ಗ್ರಾಮದೇವತೆಯಾದ  ಮಾರಮ್ಮದೇವಿಯ ನೂತನ ದೇವಾಲಯದ ಉದ್ಘಾಟನಾ ಪ್ರಾರಂಭೋತ್ಸವ ಮಹೋತ್ಸವ ಹಾಗೂ ಶಿರ ಕಳಸ ಸ್ಥಾಪನೆ ಮಾಡಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಮಾರಮ್ಮ ದೇವಿಯ ದೇವಾಲಯದಲ್ಲಿ ಮೂರು ದಿನಗಳ ಕಾಲ ವಿಶೇಷ ಪೂಜಾ ವಿಧಾನಗಳನ್ನು ನೆರವೇರಿಸಲಾಗಿದೆ.
ಮೊದಲನೆಯ ದಿನ ಮಾ – 13 ರ ಭಾನುವಾರದಂದು  ಪುಣ್ಯಾಹ, ನಾಂದಿ, ಗಣಪತಿ ಪೂಜೆ, ಮಂಡಲಾರಾಧನೆ, ಕಳಸಸ್ಥಾಪನೆ ಮತ್ತು ರಾಕ್ಷೋಘ್ನ ಅಘೋರಾಸ್ತ್ರ ಹೋಮ, ಪುಣ್ಯಹುತಿ, ದಿಗ್ ಬಲಿ, ಮಹಾಮಂಗಳಾರತಿ ಅನಿವಾಸಗಳು ಇತ್ಯಾದಿ ಪೂಜಾವಿಧಾನಗಳು ನಡೆದವು .
 ಎರಡನೆಯ ದಿನ ಮಾ – 14 ರ ಸೋಮವಾರದಂದು ಗಂಗೆಪೂಜೆ,ಗೋ ಪೂಜೆ, ಪ್ರವೇಶ,ಕಳಸರಾಧನೆ,   ಗಣಪತಿ ಹೋಮ,ಕಲಾಹೋಮ,ದುರ್ಗಾಹೋಮ,ಲಕ್ಷ್ಮೀಹೋಮ,ಪುಣ್ಯಾಹುತಿ,ನೇತ್ರೊನಿಲ್ಮನ,ವಿಮಾನ ಗೋಪುರ ಪ್ರತಿಷ್ಟಾಪನೆ,ಕುಂಭಾಭಿಷೇಕ,ಪಂಚಾಮೃತ ಅಭಿಷೇಕ,ಅಲಂಕಾರ,ಮಹಾಮಂಗಳಾರತಿ, ಗ್ರಾಮಸ್ಥರಿಂದ ಮಾರಮ್ಮದೇವಿಗೆ ಆರತಿ ಕಾರ್ಯಕ್ರಮವಿರುತ್ತದೆ.ಮೂರನೆಯ ದಿನ ಮಾ- 15 ರ ಮಂಗಳವಾರದಂದು ದೇವಿಗೆ ಪಂಚಾಮೃತ ಅಭಿಷೇಕ,ಕುಂಕುಮಾರ್ಚನೆ,ಅಲಂಕಾರ,ಮಂಗಳಾರತಿ,ಗ್ರಾಮಸ್ಥರಿಂದ ಮಾರಮ್ಮ ದೇವಿಗೆ ಆರತಿ,ಅನ್ನ ಸಂತರ್ಪಣೆ ಪ್ರಸಾದ ವಿನಿಯೋಗವಿರುತ್ತದೆ.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮದ ನಿವಾಸಿ ಕುಮಾರಸ್ವಾಮಿ ಮಾತನಾಡಿ ಸುಮಾರು 400 ಜನ ವಾಸವಿರುವ ಈ ಪುಟ್ಟದಾದ ಗ್ರಾಮದಲ್ಲಿ ಪುಟ್ಟದಾದ ಪುರಾತನ ಕಾಲದ ಮಾರಮ್ಮ ದೇವಿಯ ದೇವಾಲಯವಿತ್ತು. ಗ್ರಾಮದ ಎಲ್ಲಾ ಮುಖಂಡರ ಒಪ್ಪಿಗೆ ಪಡೆದು ಪುರಾತನ ಕಾಲದ ಪುಟ್ಟದಾದ ದೇವಾಲಯವನ್ನು ಕೆಡವಿ ದೊಡ್ಡದಾಗಿ .ಹೊಸದಾಗಿ ನಿರ್ಮಿಸಲು ಯೋಜನೆ ಮಾಡಿಕೊಂಡೆವು ಆದರೆ ಆ ದೇವಿಯ ಒಪ್ಪಿಗೆಯಂತೆ ಹೊಸದಾಗಿ ದೊಡ್ಡದಾಗಿ ಕಲ್ಲಿನ ಕಟ್ಟಡದ ಕೆತ್ತನೆಯಿಂದ ನಿರ್ಮಿಸಲಾಗಿದೆ.ಈ ದೇವಾಲಯದ ನಿರ್ಮಾಣಕ್ಕೆ ನಮ್ಮ ಗ್ರಾಮದ ಅಕ್ಕ ಪಕ್ಕದವರ ಗ್ರಾಮದವರು ಸಹಾಯ ಮಾಡಿದ್ದಾರೆ. ಮುಖ್ಯವಾಗಿ ನಮ್ಮ ಇರಕಸಂದ್ರ ಗ್ರಾಮದ ಕಿರಿಯರ ಸಹಾಯದಿಂದ ಹಿಡಿದು ಹಿರಿಯರ ಸಹಾಯದಿಂದ  ಮತ್ತು ಜಾತಿ-ಮತ ,ಭೇದ-ಭಾವ,ಬಡವ-ಶ್ರೀಮಂತ ಎನ್ನದೇ ಎಲ್ಲಾರೂ ಒಗ್ಗಟಾಗಿ ದೇವಾಲಯವನ್ನು ನಿರ್ಮಿಸಿದೆವು ಎಂದು ತಿಳಿಸಿದರು.
ಪ್ರಧಾನ ಅರ್ಚಕರಾದ ಗಿರೀಶ್ ಮಾತನಾಡಿ ಈ ಗ್ರಾಮಸ್ಥರ ನೆರವಿನಿಂದ ಯಾವುದೇ ರೀತಿಯ ತೊಂದರೆಗಳಿಲ್ಲದೆ ಮಾರಮ್ಮ ದೇವಿಯ ಎಲ್ಲಾ ಪೂಜಾ ಕಾರ್ಯಗಳು ನಡೆದವು.ಈ ದೇವಾಲವು ದೊಡ್ಡದಾಗಿದ್ದು ಸಂಪೂರ್ಣ ಕಲ್ಲಿನ ದೇವಾಲಯವಾಗಿದೆ.
ಗ್ರಾಮಸ್ಥರ ರಕ್ಷಣೆಗೆ ಈ ತಾಯಿಯು ಇಲ್ಲಿ ನೆಲೆಸಿದ್ದಾಳೆ.ಮಾರಮ್ಮ ದೇವಿ ಎಲ್ಲಾ ಜನರಿಗೆ ಆಯುಷ್ಯ ಆರೋಗ್ಯ ಕೊಟ್ಟು ಮಹಾ ಮಾರಿ ಕರೋನಾ ರೋಗವು ನಿವಾರಣೆಯಾಗಲಿ .ಹೆಚ್ಚಿನ ಭಕ್ತಾದಿಗಳು ಇರಕಸಂದ್ರ ಗ್ರಾಮಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆಯಲು ತಿಳಿಸಿದರು.
ಅರ್ಚಕರಾದ ಗಿರೀಶ್ ,ಪ್ರಶಾಂತ್ ಶರ್ಮಾ,ದತ್ತಾತ್ರೇಯ ಹಾಜರಿದ್ದರು.
ಈ ಸಂದರ್ಭದಲ್ಲಿ ಲೆಗ್ಗೆರೆ ಕುಮಾರ್,ಪೋಲೀಸ್ ಇಲಾಖೆಯ ನಿವೃತ್ತಿ ನಾಗರಾಜು, ಉಮೇಶ್,ಶಿವಣ್ಣ,ಹೋಟೆಲ್ ಪ್ರಕಾಶ್,ಟ್ರಾಕ್ಟರ್ ಕುಮಾರ್,ರಾಮಕೃಷ್ಣಪ್ಪ,ರಾಮಸ್ವಾಮಿ, ರಾಜಣ್ಣ (ಗುಟ್ಟೆ) ಗ್ರಾ.ಪಂ ಸದಸ್ಯ ಕುಮಾರ್,ಮಾಜಿ ಗ್ರಾ.ಪಂ ಸದಸ್ಯ ಮಧು,ಸಿ ರಾಜಣ್ಣ ,ರುದ್ರೇಶ್ ಮತ್ತಿತರರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker