ಕೊರಟಗೆರೆ : ಪಟ್ಟಣದ ಮಧ್ಯ ಭಾಗದಲ್ಲಿ ನೆಲೆಸಿರುವ ಗ್ರಾಮ ದೇವತೆಯಾದ ಕೋಟೆ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವವು ಜುಲೈ 23 , 24 , 25 ರವರೆಗೆ ಅದ್ದೂರಿಯಾಗಿ ನಡೆಯಲಿದೆ.
ಪ್ರತೀ ವರ್ಷದಂತೆ ಈ ವರ್ಷವೂ ಸಹ ಅಷಾಡ ಮಾಸದಲ್ಲಿ ಜಾತ್ರೆ ನಡೆಯುತ್ತದೆ.ಈ ತಾಲೂಕಿನಲ್ಲಿ ಅನೇಕ ರಾಜರಾಳಿದ ಕಲಿಗಳ ಬೀಡಾಗಿದೆ.
ಕೊರಟಗೆರೆಯಲ್ಲಿ ಜನಿಸಿದ ಮತ್ತು ಬೇರೆಡೆಯಿಂದ ಬಂದು ನೆಲೆಸಿದ ಎಲ್ಲಾ ಜನರನ್ನು ರೋಗಗಳಿಂದ , ದುಷ್ಟ ಶಕ್ತಿಗಳಿಂದ ರಕ್ಷಿಸುವ ಮಾತೆಯೇ ಗ್ರಾಮದೇವತೆಯರು , ಈ ಪಾಳೆಯ ಪಟ್ಟಿನ ಸೈನಿಕರೇ ಕಾವಲುಗಾರರು (ತಳವಾರರು) ಎಂದು ಕರೆಸಿಕೊಂಡು ಕೋಟೆ ಪ್ರದೇಶದಲ್ಲಿ ವಾಸವಾಗಿದ್ದು. ತಮ್ಮ ದೇವತೆಯಾದ ಕೋಟೆ ಮಾರಮ್ಮನಿಗೆ ತವರು ಮನೆ ನಡೆಸುವ ರೂಢಿ ಈಗಲೂ ಸಂಪ್ರದಾಯ ಬದ್ದವಾಗಿ ನಡೆದುಕೊಂಡು ಬಂದಿದೆ. ಜಾತ್ರೆಯ ಸಮಯದಲ್ಲಿ ಕೋಟೆ ಮಾರಮ್ಮ ತಾಯಿಯನ್ನು ತವರು ಮನೆಗೆ ( ಕೋಟೆ ಪ್ರದೇಶಕ್ಕೆ ) ಕರೆಸಿಕೊಂಡು ಮಡಿಲು ತುಂಬುವ ಶಾಸ್ತ್ರ ಮಾಡುತ್ತಾರೆ .
ನೂತನವಾಗಿ ದೇವಿಯವರ ಕಟ್ಟಡವು ನಿರ್ಮಾಣ ಹಂತದಲ್ಲಿ ಇರುವುದರಿಂದ ತಾಯಿಯವರಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ , ಆರತಿ ಮಾತ್ರ ಇರುತ್ತದೆ.
- ಕಳೆದ ವರ್ಷದಂತೆ ಈ ವರ್ಷವೂ ಸಹ ಕಣ್ಣಪ್ಪ ದೇವಾಲಯದಲ್ಲಿ ದೇವಿಗೆ ವಿಶೇಷ ಅಲಂಕಾರದೊಂದಿಗೆ ವಿಶೇಷ ಪೂಜೆ , ಆರತಿ ಜರುಗಲಿದೆ.
ಕೆಲ ವರ್ಷಗಳ ಹಿಂದೆ ಪಟ್ಟಣದ ಹೊರವಲಯದ ರೈತರು ಪ್ರತೀ ಮಂಗಳವಾರ ಹಾಗೂ ಶುಕ್ರವಾರದಂದು ಪಟ್ಟಣದ ಹೊರವಲಯದ ಹೊಲಗದ್ದೆಗಳಿಗೆ ಹೊರಡಿಸಿಕೊಂಡು ಹೋಗಿ ತಾಯಿಗೆ ರೈತರು ಬೆಳೆದಿರುವ ಬೆಳೆಯ ದರ್ಶನ ಮಾಡಿಸಿ ವಿಶೇಷ ಪೂಜೆ ಮಾಡಿ ಸಂತೋಷಪಡುತ್ತಿದ್ದರು.
ಕೋಟೆ ಮಾರಮ್ಮ ದೇವಿ ಮತ್ತು ಕೊಲ್ಲಾಪುರಮ್ಮ ದೇವಿಯವರಿಗೆ ಪ್ರತೀ ಮಂಗಳವಾರ ಮತ್ತು ಶುಕ್ರವಾರದಂದು ವಿಶೇಷ ಪೂಜೆಗಳು ಶ್ರದ್ದಾ ಭಕ್ತಿಯಿಂದ ನಡೆಯುತ್ತವೆ.
ಜಾತ್ರೆಯ ಸಮಯದಲ್ಲಿ ಮಾರಮ್ಮನ ಗದ್ದುಗೆಗಳಿಗೆ ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸುತ್ತಾರೆ.
ಪಟ್ಟಣದ ಸರ್ಕಾರಿ ಆಸ್ಪತ್ರೆಯ ಹಿಂಭಾಗದ ಸಾದರ ಬೀದಿಯಲ್ಲಿ ನೆಲೆಸಿರುವ ಹಳೇ ಮಾರಮ್ಮ ದೇವಿಗೂ ಸಹ ವಿಶೇಷ ಪೂಜೆ ಹಾಗೂ ಆರತಿ ನಡೆಯುತ್ತದೆ.
ಕಟ್ಟಡಕ್ಕೆ ನೆರವು:
ಕೊರಟಗೆರೆ ಪಟ್ಟಣದ ಗ್ರಾಮದೇವತೆಗಳಾದ ಮಾರಮ್ಮ ದೇವಿ ಮತ್ತು ಕೊಲ್ಲಾಪುರದಮ್ಮ ದೇವಿಯವರ ಕಟ್ಟಡವು ನೂತನವಾಗಿ ನಿರ್ಮಿಸಲಾಗುತ್ತಿದ್ದು ಈ ಕಟ್ಟಡಕ್ಕೆ ಧನ ಸಹಾಯವನ್ನು ಪಟ್ಟಣದ ಜನತೆ ಹಾಗೂ ಬೇರೆ ಬೇರೆ ಕಡೆ ನೆಲೆಸಿರುವ ಭಕ್ತಾದಿಗಳು ಸಹ ಧನ ಸಹಾಯ ಮಾಡುತ್ತಿದ್ದಾರೆ.
ಇನ್ನು ಧನ ಸಹಾಯ ಮಾಡಲು ಇಚ್ಚಿಸುವವರು ಕಟ್ಟಡ ನಿರ್ಮಾಣ ಸಮಿತಿ ವತಿಯಿಂದ ಅಕೌಂಟ್ ಅನ್ನು ತೆರೆದಿದೆ ಅಕೌಂಟ್ ನಂ – ಈ ಕೆಳಗಿನಂತಿದೆ.
AC NO : 4112500102478901