ಪುನಶ್ಚೇತನಗೊಂಡ ಕೆರೆ ಹಸ್ತಾಂತರಗೊಳಿಸಿದ ಮಾಜಿ ಉಪಮೂಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್
ಕೊರಟಗೆರೆ : ತಾಲೂಕಿನ ಕೋಳಾಲ ಹೋಬಳಿಯ ಎ. ವೆಂಕಟಾಪುರ ಗ್ರಾಮದ ಎ ವೆಂಕಟಾಪುರ ಕೆರೆಯನ್ನು 2020-21 ನೇ ಸಾಲಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕರ್ನಾಟಕ ರಾಜ್ಯ ಸರಕಾರದ ಕೆರೆ ಸಂಜೀವಿನಿ ಯೋಜನೆ ಅಡಿ ಸುಮಾರು 11 ಲಕ್ಷ ವೆಚ್ಚದಲ್ಲಿ ಪುನಶ್ಚೇತನಗೊಂಡ ಕೆರೆಯ ಹಸ್ತಾಂತರ ಮತ್ತು ಬಾಗಿನ ಅರ್ಪಣೆ ಕಾರ್ಯಕ್ರಮ ನಡೆಯಿತು.
ಮಾಜಿ ಉಪಮುಖ್ಯಮಂತ್ರಿ ಹಾಗು ಶಾಸಕ ಡಾ.ಜಿ.ಪರಮೇಶ್ವರ್ ಕಾರ್ಯಕ್ರಮದಲ್ಲಿ ಕೆರೆಗೆ ಬಾಗಿನವನ್ನು ಅರ್ಪಿಸಿ ಗ್ರಾಮಸ್ಥರಿಗೆ ಕೆರೆ ಅಸ್ತಾಂತರಿಸಿ ಮಾತನಾಡಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯದ ಅನೇಕ ಕೆರೆಗಳನ್ನು ಪುನಶ್ಚೇತನಗೊಳಿಸಿದ್ದು ಇದರಿಂದ ಜನರಿಗೆ ಕುಡಿಯುವ ನೀರು.ಜಾನುವಾರುಗಳಿಗೆ.ರೈತರಿಗೆ ತಮ್ಮ ಹೊಲಗಳಲ್ಲಿ ಅಂತರ್ಜಲ ಹೆಚ್ಚಲು ಸಹಕಾರಿಯಾಗಿದ್ದು ಕೆರೆಯ ಪಾವಿತ್ರತೆಯನ್ನು ಕಾಪಾಡುವುದರ ಜೊತೆಗೆ ಗ್ರಾಮದ ಮಾದರಿ ಕೆರೆಯನ್ನಾಗಿ ಇಟ್ಟುಕೊಳ್ಳವುದರ ಮೂಲಕ ಯೋಜನೆಯ ಲಾಭವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸೂಚಿಸಿದರು.
ಇಸ್ರೇಲ್ ಮಾದರಿಯಲ್ಲಿ ನೀರಿನ ಬಳಕೆಯನ್ನು ರೈತರು ಮಾಡಬೇಕು ಅದೇ ರೀತಿಯ ಕೃಷಿ ಪದ್ಧತಿಗಳನ್ನು ಅಳವಸಿಕೊಂಡು ನೀರಿನ ಮಿತ ಬಳಕೆ ಮಾಡಿಕೊಳ್ಳುವುದರೊಂದಿಗೆ ಸದಾ ಕಾಲ ಕೃಷಿಗೆ ನೀರಿನ ಅಭಾವ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಎಲೆರಾಂಪುರ ಕುಂಚಿಟಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಹನುಮಂತನಾಥಸ್ವಾಮೀಜಿ ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ದರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್, ನೀಲಗೊಂಡನಹಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಸುಮಂಗಲ, ಕೆರೆ ಸಮಿತಿ ಉಪಾಧ್ಯಕ್ಷ ಭೈರಪ್ಪ, ಕಾರ್ಯದರ್ಶಿ ಗಂಗಮ್ಮ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಎಲ್. ರಾಜಣ್ಣ, ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಎಂ., ವಲಯದ ಮೇಲ್ವಿಚಾರಕಿ ಕವಿತಾ, ವಲಯದ ಸೇವಾಪ್ರತಿನಿಧಿಗಳು, ಒಕ್ಕೂಟ ಪದಾಧಿಕಾರಿಗಳು, ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಇದ್ದರು.