ಶ್ರೀಕೊಲ್ಲಾಪುರದಮ್ಮ ಮತ್ತು ಶ್ರೀಕರುಗಲ್ಲಮ್ಮ ದೇವಾಲಯ ಉದ್ಘಾಟನಾ ಸಮಾರಂಭ : ಇಂದಿನಿಂದ ಎರಡು ದಿನ ಪೂಜಾ ಕೈಂಕರ್ಯ
ತುಮಕೂರು: ಜೀರ್ಣೋದ್ದಾರಗೊಂಡಿರುವ ಶ್ರೀಕೊಲ್ಲಾಪುರದಮ್ಮ ಮತ್ತು ಶ್ರೀಕರುಗಲ್ಲಮ್ಮ ದೇವಾಲಯಗಳ ಉದ್ಘಾಟನಾ ಸಮಾರಂಭ ಮಾರ್ಚ್ 06 ಮತ್ತು 07 ರಂದು ಶ್ರೀರಾಮನಗರದ ಶ್ರೀಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ನಡೆಯಲಿದೆ.
ಮಾರ್ಚ್ 06ರ ಭಾನುವಾರು ಬೆಳಗ್ಗೆ ಎಂಟು ಗಂಟೆಗೆ ಗಂಗಾಪೂಜೆಯೊಂದಿಗೆ ಆರಂಭವಾಗುವ ಧಾರ್ಮಿಕ ವಿಧಿವಿಧಾನಗಳು ಇಡಿ ದಿನ ನಡೆಯಲಿವೆ.ಅದೇ ದಿನ 3;30 ಗಂಟೆಗೆ ಹನುಮಂತಪುರದಿಂದ ಉತ್ಸವಮೂರ್ತಿಗಳ ಮೆರವಣಿಗೆ ನಡೆಯಲಿದೆ. ಮಾರ್ಚ್ 07 ರ ಸೋಮವಾರ ಬೆಳಗ್ಗೆ ಬ್ರಾಹ್ಮಿ ಮೂಹರ್ತ ಕಲಶಾರಾಧನೆ, ಗೋಪುರ ಕಲಶ ಪ್ರತಿಷ್ಠಾನೆ, ಕುಂಭಾಭೀಷೇಕ ಸೇರಿದಂತೆ ಹಲವರು ಪೂಜಾ ಕೈಂಕರ್ಯಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀ ನಿರ್ಮಲಾನಂದಸ್ವಾಮೀಜಿಗಳು, ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯಸ್ವಾಮೀಜಿಗಳು,ಅಬ್ಬೂರುಗೇಟ್‌ನ ಶ್ರೀಸೋಮೇಶ್ವರ ಮಹಾಸ್ವಾಮೀಜಿಗಳು ದಿವ್ಯಸಾನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ಕುಂಭೀನರಸಯ್ಯ ವಹಿಸುವರು.ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಎಸ್.ಆರ್.ಶ್ರೀನಿವಾಸ್, ಜಿ.ಬಿ.ಜೋತಿಗಣೇಶ್, ಆರ್.ರಾಜೇಂದ್ರ, ಡಿ.ಸಿ.ಗೌರಿಶಂಕರ್, ಕೆ.ಎನ್.ರಾಜಣ್ಣ,ಪತ್ರಕರ್ತರಾದ ಎಸ್.ನಾಗಣ್ಣ,ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ,ಮಾಜಿ ಸಚಿವ ಸೊಗಡು ಶಿವಣ್ಣ,ಪಾಲಿಕೆ ಸದಸ್ಯರಾದ ಟಿ.ಎಂ.ಮಹೇಶ್,ಎ.ಶ್ರೀನಿವಾಸ್,ಮುಖಂಡರಾದ ಟಿ.ಪಿ.ರೆಡ್ಡಿ ಚಿನ್ನಯಲ್ಲಪ್ಪ,ಟಿ.ಪಿ.ಮುಂಜುನಾಥ್,ಟಿ.ಹೆಚ್.ಜಯರಾಮ್, ಟಿ.ಹೆಚ್.ವಾಸುದೇವ್, ಪೊಲೀಸ್ ಅಧಿಕಾರಿಗಳಾದ ಡಿವೈಎಸ್ಪಿ ಶ್ರೀನಿವಾಸ್, ವೃತ್ತ ನಿರೀಕ್ಷಕರಾದ ನವೀನ್, ಮುನಿರಾಜು, ರಾಮಕೃಷ್ಣಯ್ಯ, ಇನ್ಸ್ಪೆಕ್ಟರ್ ನವೀನ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಅಧ್ಯಕ್ಷರಾದ ಡಿ.ಕುಂಭಿನರಸಯ್ಯ, ಉಪಾಧ್ಯಕ್ಷ ಟಿ.ಎಲ್.ಕುಂಭಯ್ಯ, ಕಾರ್ಯದರ್ಶಿ ಎಲ್.ನರಸಿಂಹಮೂರ್ತಿ ಅವರುಗಳು ತಿಳಿಸಿದ್ದಾರೆ.