ಪ್ರತಿ ಮನೆ ಮನೆಗಳಲ್ಲಿಯೂ ಕನ್ನಡ ಉಳಿಸುವ ಕೆಲಸ ಮಾಡಬೇಕಿದೆ: ಧನಿಯಾ ಕುಮಾರ್

ತುಮಕೂರು : ಪ್ರತಿಯೊಬ್ಬ ಕನ್ನಡಿಗರ ಮನ ಮನೆಗಳಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ ಎಂದು ತುಮಕೂರು ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಧನಿಯ ಕುಮಾರ ತಿಳಿಸಿದರು ಅವರು ನಗರದ ಚರ್ಚ್ ವೃತ್ತದಲ್ಲಿ ಕದಂಬ ಕನ್ನಡ ಯುವ ವೇದಿಕೆಯ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಕನ್ನಡ ರಾಜ್ಯೋತ್ಸವವನ್ನು ಪ್ರತಿದಿನ ಆಚರಿಸಬೇಕು ಕನ್ನಡಿಗರು ಭಾಷಾಭಿಮಾನವನ್ನು ಹೊಂದುವುದರ ಮೂಲಕ ಭಾಷೆ ನಾಡು- ನುಡಿಯ ರಕ್ಷಣೆಗಾಗಿ ಕಂಕಣಬದ್ಧರಾಗಬೇಕು
ಪ್ರತಿವರ್ಷ ನವೆಂಬರ್ 1ರಂದು ಆಟೋಗಳ ಮೇಲೆ ಕನ್ನಡ ಬಾವುಟ ರಾರಾಜಿಸುತ್ತಿದ್ದು ನಿಜವಾದ ಕನ್ನಡ ಉಳಿದಿರುವುದು ಆಟೋ ಚಾಲಕರಿಂದ, ಭಾಷೆಯ ರಾಯಭಾರಿಗಳಂತೆ ಅವರು ಕೆಲಸ ನಿರ್ವಹಿಸುತ್ತಿದ್ದು ಕನ್ನಡ ನಾಡು-ನುಡಿ ರಕ್ಷಣೆಗೆ ಅವರು ಕಂಕಣಬದ್ಧರಾಗಿದ್ದಾರೆ ಎಂದು ತಿಳಿಸಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಲಿಂಗಪ್ಪ ರಾಜ್ಯೋತ್ಸವ ಕಾರ್ಯಕ್ರಮಗಳು ವರ್ಷಪೂರ್ತಿ ಈ ನೆಲದಲ್ಲಿ ನಡೆಯಬೇಕು ನಿತ್ಯೋತ್ಸವ ಆಗಿ ಕನ್ನಡ ತಾಯಿಯ ತೇರನ್ನು ಎಳೆಯುವ ಮೂಲಕ ಭಾಷೆಯನ್ನು ಜೀವಂತವಾಗಿರಲು ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದರು ಈ ಸಂದರ್ಭದಲ್ಲಿ ಕದಂಬ ಕನ್ನಡ ವೇದಿಕೆಯ ಪದಾಧಿಕಾರಿಗಳು ಬಿಜೆಪಿ ಮುಖಂಡ ಕೊಪ್ಪಳ್ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು