ಶಿರಾ

ಜಾನುವಾರುಗಳ ರಕ್ಷಣೆಗೆ ಜಿಲ್ಲೆಗೊಂದು ಗೋಶಾಲೆ ಸ್ಥಾಪನೆ : ಸಚಿವ ಜೆ.ಸಿ.ಮಾಧುಸ್ವಾಮಿ

ದೊಡ್ಡಗಾಣಗೆರೆಯಲ್ಲಿ ಸರ್ಕಾರಿ ಗೋಶಾಲೆ ಪ್ರಾರಂಭೋತ್ಸವಕ್ಕೆ ಭೂಮಿ ಪೂಜೆ

ಶಿರಾ : ಗೋವುಗಳ ಸಂತತಿ ಉಳಿಯಬೇಕಾಗಿದ್ದು, ಗೋವಿಗಳ ರಕ್ಷಣೆ ಮತ್ತು ಆರೈಕೆಗಾಗಿ ಗೋಶಾಲೆಗಳ ನಿರ್ಮಾಣ ಅವಶ್ಯಕವಾಗಿದೆ ಎಂಬುದನ್ನು ಮನಗಂಡು ಸರ್ಕಾರಿ ಜಾನುವಾರುಗಳನ್ನು ಸಂರಕ್ಷಿಸಲು ಪ್ರತಿ ಜಿಲ್ಲೆಗೆ ಒಂದರಂತೆ ಸರ್ಕಾರಿ ಗೋಶಾಲೆಯನ್ನು ಸ್ಥಾಪಿಸಲು ಘೋಷಣೆ ಮಾಡಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದರು.
ಅವರು ಸೋಮವಾರ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಚಿಕ್ಕಬಾಣಗೆರೆ ಗ್ರಾಮದಲ್ಲಿ ಸರ್ಕಾರಿ ಗೋಶಾಲೆ ಪ್ರಾರಂಭೋತ್ಸವದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಗೋವುಗಳು ನಮ್ಮ ಹಿಂದೂ ಸಂಸ್ಕೃತಿಯ ಭಾಗವಾಗಿದ್ದು, ಅವುಗಳ ರಕ್ಷಣೆ ಹಾಗೂ ಪೋಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಅದಕ್ಕೆ ಪೂರಕ ಎಂಬಂತೆ ಬಿಜೆಪಿ ಸರಕಾರವು ಸಹ ಗೋವುಗಳ ರಕ್ಷಣೆಗೆ ಹಲವು ಕಾಯ್ದೆಗಳನ್ನು ರೂಪಿಸಿದೆ.
ಅರ್ಥಿಕವಾಗಿ ಹಿಂದುಳಿದ ರೈತರು ವಯಸ್ಸಾದ ಗೋವುಗಳನ್ನು ಸಾಕಲು ಸಾಧ್ಯವಾಗದಿದ್ದರೆ ಗೋ ಶಾಲೆಗೆ ಸೇರಿಸಿ, ನಮ್ಮ ಕುಟುಂಬಕ್ಕೆ ಹಾಲು ನೀಡಿದೆ ಅದನ್ನು ಸಾಯುವವರೆಗೂ ನಾವು ಸಾಕುತ್ತೇವೆ ಎಂಬುವರು ಖಂಡಿತ ಸಾಕಿ ನಿಮಗೆ ಪುಣ್ಯ ಬರುತ್ತದೆ, ಗೋಶಾಲೆ ರಕ್ಷಣೆ ಕೇವಲ ಸರ್ಕಾರದ ಕೆಲಸವಲ್ಲ ಇದಕ್ಕೆ ಸಾರ್ವಜನಿಕರು ಸಹಕರಿಸಿದರೆ ಮಾತ್ರ ಯಶಸ್ವಿ ಸಾಧ್ಯ ಎಂದರು.
ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಮಾತನಾಡಿ ರೈತರ ಹಿತಕಾಯುವ ಉದ್ದೇಶದಿಂದ
ಚಿಕ್ಕಬಾಣಗೆರೆ ಗ್ರಾಮದಲ್ಲಿ ಸರ್ಕಾರಿ ಗೋಶಾಲೆಯನ್ನು ಪ್ರಾರಂಭಿಸಲು ಮುಂದಾಗಿದ್ದೇವೆ ಇದರಿಂದ ನೆರೆಯ ಆಂಧ್ರಪ್ರದೇಶಕ್ಕೆ ಮಾರಾಟಕ್ಕೆ ಹೋಗುವಂತಹ ಗೋವುಗಳ ನಿಯಂತ್ರಣವಾಗಲಿದೆ. ಗೋವು ಸಂಕುಲವನ್ನು ಕಾಪಾಡುವ ದೃಷ್ಟಿಯಿಂದ ಎಲ್ಲರೂ ಒಗ್ಗೂಡಿ ಸಹಕರಿಸಬೇಕಿದೆ ಕೃಷಿ ಚಟುವಟಿಕೆ ಮಾಡಲು ಸಾಧ್ಯವಲ್ಲದ ಗೋವುಗಳನ್ನು ಇಂತಹ ಶಾಲೆಗಳಲ್ಲಿ ಬಿಡಲು ರೈತರು ಮುಂದಾಗಬೇಕು ಎಂದರು.
ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಮಾತನಾಡಿ ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯಲ್ಲಿ ಗೋವುಗಳಿಗೆ ಪೂಜ್ಯನೀಯ ಸ್ಥಾನವಿದೆ, ಇವುಗಳ ರಕ್ಷಣೆ ಸರಕಾರದ ಹೊಣೆಗಾರಿಕೆ ಆಗಿದ್ದು ಈ ಗೋಶಾಲೆ ಅನ್ನದಾತರಿಗೆ ಹೆಚ್ಚು ಸಹಕಾರಿಯಾಗಿದ್ದು ಜಾನುವಾರುಗಳ ಬಗ್ಗೆ ಆಸಕ್ತಿ ಹೊಂದಿರುವ ಸಮಾನಮನಸ್ಕರು ಎಲ್ಲವೂ ಸರಕಾರ ನೋಡಿಕೊಳ್ಳುತ್ತದೆ ಎಂಬ ಮನಸ್ಥಿತಿ ಬಿಟ್ಟು ತಾವು ಸಹ ಮೇವು ನೀಡುವ ಮೂಲಕ ಜಾನುವಾರುಗಳ ರಕ್ಷಣೆಗೆ ಕೈಜೋಡಿಸಿ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಮತಾ.ಎಂ., ಪಶುಪಾಲನಾ ಉಪನಿರ್ದೇಶಕ ಜಯಣ್ಣ, ಮುಖ್ಯ ಪಶುವೈದ್ಯಾಧಿಕಾರಿ ಸಿ.ಎಸ್.ರಮೇಶ್, ಚಂಗಾವರಂ ಮಾರಣ್ಣ, ಪ್ರಕಾಶ್ ಗೌಡ, ಡಾ ಕೆ. ನಾಗಣ್ಣ, ಮಧುಸೂಧನ್ ರಾವ್, ಲಕ್ಕನಹಳ್ಳಿ ಮಂಜುನಾಥ್, ದೊಡ್ಡಬಾಣಗೆರೆ ಗ್ರಾ.ಪಂ. ಅಧ್ಯಕ್ಷೆ ಗೌರಮ್ಮ ನರಸಿಂಹಪ್ಪ, ಸದಸ್ಯ ರಂಗನಾಥ್, ರವಿಕುಮಾರ್, ದೊಡ್ಡಬಾಣಗೆರೆ ನರಸಪ್ಪ ಸೇರಿದಂತೆ ಹಲವರು ಹಾಜರಿದ್ದರು.
ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ ಸಚಿವರು ಮತ್ತು ಶಾಸಕರುಗಳು:
ತಾಲ್ಲೂಕಿನ ಹುಚ್ಚಗೀರನಹಳ್ಳಿ ಗೇಟ್ ಬಳಿ ರಸ್ತೆ ಅಪಘಾತವಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ಇದೇ ಮಾರ್ಗವಾಗಿ ಚಿಕ್ಕಬಾಣಗೆರೆ ಗ್ರಾಮದಲ್ಲಿನ ಕಾರ್ಯಕ್ರಮಕ್ಕೆ ಭಾಗವಹಿಸಲು ತೆರಳುತ್ತಿದ್ದ ಸಚಿವ ಜೆ ಸಿ ಮಾಧುಸ್ವಾಮಿ, ಶಾಸಕ ಡಾ ಸಿ.ಎಂ ರಾಜೇಶ್ ಗೌಡ ಹಾಗೂ ವಿಧಾನಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಅವರು ಕೂಡಲೇ ತಮ್ಮ ವಾಹನದಿಂದ ಇಳಿದು ಬಂದು ಗಾಯಾಳುಗಳನ್ನು ಉಪಚರಿಸಿ ಶಿರಾ ಸರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲು ತಮ್ಮ ಬೆಂಗಾವಲು ವಾಹನದಲ್ಲೇ ಕಳಿಸಿಕೊಟ್ಟು ತಕ್ಷಣ ಚಿಕಿತ್ಸೆ ದೊರಕುವಂತೆ ಮಾಡಿ ಮಾನವೀಯತೆ ಮೆರೆದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker