ಸಂಚಾರಿ ಜನಸೇವೆ ಕಾರ್ಯಕ್ರಮದಡಿ ಜನರ ಮನೆಬಾಗಿಲಿಗೆ ಸೇವೆ; ಡಾ.ಸಿ.ಎಂ.ರಾಜೇಶ್ ಗೌಡ
ಮದಲೂರು ಗ್ರಾಮದಲ್ಲಿ ಆಯುಷ್ಮಾನ್ ಕಾರ್ಡ್, ಈ-ಶ್ರಮ್ ಕಾರ್ಡ್ ವಿತರಣೆ

ಶಿರಾ : ಕ್ಷೇತ್ರದ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಂಚಾರಿ ಜನಸೇವೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಡಿ ಗ್ರಾಮಗಳಲ್ಲಿಯೇ ಜನರಿಗೆ ಒದಗಿಸಲಾಗುತ್ತಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ಮದಲೂರು ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಶಾಸಕರ ಸಂಚಾರಿ ಜನಸೇವೆ ಕಾರ್ಯಕ್ರಮದಡಿ ಈ ಶ್ರಮ್ ಹಾಗೂ ಆಯುಷ್ಮಾನ್ ಕಾರ್ಡ್ ವಿತರಿಸಿ ಮಾತನಾಡಿದರು. ಸರಕಾರದದಿಂದ ಕಾರ್ಮಿಕರಿಗೆ ನೀಡುವ ಸೌಲಭ್ಯಗಳನ್ನು ಪಡೆಯಲು ಈ ಶ್ರಮ್ ಕಾರ್ಡ್ ಹಾಗೂ ಆಯುಷ್ಮಾನ್ ಕರ್ನಾಟಕ ಕಾರ್ಡ್ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ತಂಡವು ತಾಲ್ಲೂಕಿನ ಗ್ರಾಮಗಳಿಗೆ ತೆರಳಿ ಕ್ಷೇತ್ರದಾದ್ಯಂತ ಪ್ರತಿಗ್ರಾಮದಲ್ಲಿ ಉಚಿತವಾಗಿ ಮಾಡಿಕೊಡಲಿದ್ದು, ಕ್ಷೇತ್ರದ ಪ್ರತಿಯೊಬ್ಬ ಸಾರ್ವಜನಿಕರು ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಮುಖಂಡ ಮೂರ್ತಿ ಮಾಸ್ಟರ್, ಮಾಜಿ ಗ್ರಾ.ಪಂ. ಅಧ್ಯಕ್ಷ ಶಂಕರ್ ಎಂ.ಆರ್, ಸದಸ್ಯರಾದ ಶಿವಣ್ಣ, ಮಧುಸುಧನ್, ಗೋವಿಂದ ರಾಜು, ಆನಂದ, ನರಸಿಂಹಮೂರ್ತಿ, ಅಡವಿಷ್, ಅಮ್ಮಾಜೀ ಸಿದ್ದೇಶ್, ಲೋಕೇಶ್, ಮಂಜುನಾಥ್, ಪುಟ್ಟರಂಗೆ ಗೌಡ ಸೇರಿದಂತೆ ಹಲವರು ಹಾಜರಿದ್ದರು.