ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ನಗರಕ್ಕೆ 1450 ಮನೆಗಳ ಮಂಜೂರು ನಿರ್ಮಾಣಕ್ಕೆ ಶಾಸಕ ಜ್ಯೋತಿಗಣೇಶ್ ಚಾಲನೆ
ತುಮಕೂರು: ಕರ್ನಾಟಕ ಸರಕಾರ ವಸತಿ ಇಲಾಖೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ
ಮಂಡಳಿ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ 28 ಘೋಷಿತ ಕೊಳಚೆ ಪ್ರದೇಶಗಳಲ್ಲಿ
ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 1450 ಮನೆಗಳ ಮಂಜೂರಾಗಿದ್ದು ನಿರ್ಮಾಣದ ಶಂಕು
ಸ್ಥಾಪನೆಯನ್ನು ಇಂದು ದೇವರಾಯಪಟ್ಟಣ ಎ.ಕೆ ಕಾಲೋನಿಯಲ್ಲಿ ಶಾಸಕರಾದ ಜಿ.ಬಿ ಜ್ಯೋತಿ
ಗಣೇಶ್ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಕೋವಿಡ್ ನಿಂದಾಗಿ 2 ವರ್ಷ ತಡವಾಗಿ ಪ್ರಧಾನಮಂತ್ರಿ
ಆವಾಸ್ ಯೋಜನೆಯಲ್ಲಿ ಘೋಷಿತ ಕೊಳಚೆ ಪ್ರದೇಶಗಳಲ್ಲಿ ನಿವೇಶನ ಹೊಂದಿರುವ
ಕುಟುಂಬಗಳಿಗೆ 3.5 ಚದುರ ಮನೆಯನ್ನು 6.5 ಲಕ್ಷ ವೆಚ್ಚದಲ್ಲಿ ಕೇಂದ್ರ, ರಾಜ್ಯ ಸರಕಾರಗಳ ಅನುಧಾನ
ಇತರೆ ಇಲಾಖೆಗಳ ಸಂಪನ್ಮೂಲ ಕ್ರೂಡಿಕರಿಸಿ ಬ್ಯಾಂಕ್ ಸಾಲ ಹಾಗೂ ಫಲಾನುಭವಿಗಳ ವಂತಿಕೆ
ಯಿಂದ ಮನೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ತುಮಕೂರು ನಗರಕ್ಕೆ ವಸತಿ ಸಚಿವರಾದ ವಿ.ಸೋಮಣ್ಣ 1450 ಮನೆಗಳನ್ನು ಮಂಜೂರು ಮಾಡಿದ್ದು
ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಈಗಿನ ಮುಖ್ಯಮಂತ್ರಿಗಳಾದ ಬಸವರಾಜು
ಬೊಮ್ಮಾಯಿರವರ ಪರಿಶ್ರಮದಿಂದ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯಂತೆ
ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಅಂಗವಾಗಿ ಸರ್ವರಿಗೂ ಸೂರು ಒದಗಿಸುವುದು
ಸರಕಾರಗಳ ಕನಸಾಗಿದೆ, ಇದು ಸಕಾರಗೊಳ್ಳಲು ಜನರ ಸಹಕಾರ ಅಗತ್ಯ.ಹಾಗಾಗಿ ಯೋಜನೆ
ಪಡೆಯಲು ಎಸ್‌ಸಿ,ಎಸ್‌ಟಿಗಳು ಶೇ 10 ರಷ್ಟು ಹಾಗೂ ಸಾಮಾನ್ಯ ಮತ್ತು ಇತರೆ ವರ್ಗದವರು
ಶೇ 15 ರಷ್ಟು ಪಲಾನುಭವಿ ವಂತಿಕೆ ಪಾವತಿಸಿ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ
ಮಾಡಿದರು.
ಪಾಲಿಕೆಯ ಮೇಯರ್ ಬಿ.ಜಿ.ಕೃಷ್ಣಪ್ಪ ಮಾತನಾಡಿ,ಬಡವರಿಗೆ ಮನೆ ದೊರಕಿಸುವ ಕೆಲಸ ಸಂವಿಧಾನದ
ಆಶಯವಾಗಿದೆ ದೇವರು ಮೆಚ್ಚುವ ಈ ಕೆಲಸಕ್ಕೆ ನಗರಪಾಲಿಕೆಯಿಂದ ಎಲ್ಲಾ ತರಹದ ಸಾಕಾರ
ನೀಡಲಾಗುವುದು.ಕೊಳಚೆ ಪ್ರದೇಶಗಳಲ್ಲಿರುವ ಕೆಲವೊಂದು ಆಶಕ್ತ ಕುಟುಂಬಗಳಿಗೆ ಪಲಾನುಭವಿ
ವಂತಿಕೆ ಪಾವತಿಸಲು ಮಹಾತ್ಮಗಾಂಧಿ ಯೋಜನೆಯಲ್ಲಿ ಅವಕಾಶವಿದ್ದು ಹಣ ನೀಡುವ ಬಗ್ಗೆ
ಸದಸ್ಯರೊಂದಿಗೆ ಚರ್ಚಿಸಿ ಕೌನ್ಸಿಲ್‌ನಿಂದ ಕ್ರಮ
ವಹಿಸಿ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳಿಸಿಕೊಡಲಾಗುವುದು. ಶಾಸಕರ ಆಸಕ್ತಿಯಿಂದ ನಗರಕ್ಕೆ
ಮತ್ತು ಸ್ಲಂಗಳಲ್ಲಿರುವ ಬಡವರಿಗೆ ಈ ಯೋಜನೆ ಬಂದಿರುವುದು ಸಂತಸ ತಂದಿದೆ ಎಂದರು.
ಸ್ಲಂ ಜನಾಂದೋಲನಾ ಕರ್ನಾಟಕದ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ,ದೇಶದಲ್ಲಿ
4 ಟ್ರಿಲಿಯನ್ ಜನರಿಗೆ ವಸತಿಯಿಲ್ಲ.2022ರಲ್ಲಿ ಸ್ವತಂತ್ರ ಭಾರತಕ್ಕೆ 75 ವರ್ಷ ತುಂಬುವ
ನೆನಪಿಗಾಗಿ ಭಾರತ ಸರಕಾರ ಸರ್ವರಿಗೂ ಸೂರು ಯೋಜನ ಘೋಷಿಸಿದ್ದು ರಾಜ್ಯದಲ್ಲಿ
ಸ್ಲಂ ನಿವಾಸಿಗಳಿಗೆ 97 ಸಾವಿರ ಮನೆಗಳು ಮಂಜೂರಾಗಿದ್ದು ಸ್ಲಂ ನಿವಾಸಿಗಳಿಗೆ ವಸತಿ ಘನ
ತೆಯ ಸಂಕೇತವಾಗಿದೆ.ಸಂವಿಧಾನದ ಆಶಯದಂತೆ ಘನತೆಯ ಬದುಕಿಗೆ ಸರಕಾರಗಳ ಜವಾಬ್ದಾರಿ
ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಕೇಂದ್ರ ರಾಜ್ಯ ಮತ್ತು ಸ್ಥಳೀಯ ಸರಕಾರಗಳು ಸಮಾನತೆಯಿಂದ
ಕಾರ್ಯನಿರ್ವಸಬೇಕೆಂದು ಇದಕ್ಕಾಗಿ ಸಂಘಟನೆ ಒಂದು ದಶಕದಿಂದ ನಿರಂತರ ಹೋರಾಟ
ಮಾಡುತ್ತಿದೆ. ಕೋವಿಡ್ ನಿಂದ ಕೆಲಸಗಳಿಲ್ಲದ ಕುಟುಂಬಗಳಿಗೆ ಪಲಾನುಭವಿ ವಂತಿಕೆ ಪಾವತಿಸಲು
ಶಾಸಕರು,ಮೇಯರ್, ಮತ್ತು ಆಯುಕ್ತರು ಕ್ರಮ ವಹಿಸುವಂತೆ ಕೋರಿದರು.
ಕಾರ್ಯಕ್ರಮದಲ್ಲಿ 35 ನೇ ವಾರ್ಡಿನ ಸದಸ್ಯರಾದ ನಿರ್ಮಲ ಶಿವಕುಮಾರ್,ಮಹಾನಗರ ಪಾಲಿಕೆಯ
ಆಯುಕ್ತರಾದ ರೇಣುಕಾ, ದೇವರಾಯಪಟ್ಟಣ ವಾರ್ಡಿನ ಮಾಜಿ ಪಾಲಿಕೆ ಸದಸ್ಯರಾದ ಬಸವ
ರಾಜು, ಮುನಿಯಪ್ಪ, ಲೋಕೇಶ್, ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ
ಕಾರ್ಯಪಾಲಕ ಅಭಿಯಂತರರಾದ ರವಿಕುಮಾರ್,ಸಹಾಯಕ ಅಭಿಯಂತರರಾದ ಲೋಕೇಶ್ವರಪ್ಪ,
ಚೇತನ್, ಹೊಂಬಾಳೆ ಕನ್ಸ್ಸ್ಟçಕ್ಷನ್‌ನ ವಿಜಯಕುಮಾರ್, ಪ್ರತಾಪ್,ರವಿ, ತುಮಕೂರು ಕೊಳ
ಗೇರಿ ಸಮಿತಿಯ ಕಾರ್ಯದರ್ಶಿ ಅರುಣ್, ಪದಾಧಿಕಾರಿಗಳಾದ ತಿರುಮಲಯ್ಯ, ಮೋಹನ್,
ಮುಂತಾದವರು ಪಾಲ್ಗೊಂಡಿದ್ದರು