ಕೊರಟಗೆರೆ

ಮುಖ್ಯಮಂತ್ರಿ ಎಂದರೆ ನನ್ನ ವಿರುದ್ದ ಒಳ ಕೂಯಿಲು ಪ್ರಾರಂಭವಾಗುತ್ತದೆ : ಡಾ.ಜಿ.ಪರಮೇಶ್ವರ್

ಕೊರಟಗೆರೆ : ಕ್ಷೇತ್ರದ ಜನರು ಭಾವೋದ್ರೇಕವಾಗಿ ಮುಖ್ಯಮಂತ್ರಿಯಾಬೇಕು ಎಂದು ಭಾಷಣ ಮಾಡಬೇಡಿ ನೀವು ಇಲ್ಲಿ ಕೂಗಿದರೆ ನನ್ನ ವಿರುದ್ದ ಒಳ ಕೂಯಿಲು ಅಲ್ಲಿ ಶುರುವಾಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ಪ್ರತಿಕ್ರಿಯಿಸಿದರು.
ಅವರು ಕೊರಟಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೋರಾ ಹೋಬಳಿಯ ಚಿಕ್ಕಗುಂಡಗಲ್ಲು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆದ ಸುಮಾರು 5 ಕೋಟಿ ರೂಗಳ ವೆಚ್ಚದ 17 ಕಾಮಗಾರಿಗಳನ್ನು ಶಂಕುಸ್ಥಾಪನೆ ಶನಿವಾರ ನೆರವೇರಿಸಿ ಮಾತನಾಡಿ ಕ್ಷೇತ್ರದ ಅಭಿವೃದಿಗೆ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದೇನೆ ಪ್ರತಿಯೋಬ್ಬ ಮತದಾರರ ಋಣ ತೀರುಸುವ ಕೆಲಸವನ್ನು ಸೇವೆಯನ್ನು ಪ್ರಮಾಣಿಕವಾಗಿ ಮಾಡುತ್ತೇನೆ. ಸರ್ಕಾರದಿಂದ ಹಣ ತರುವುದು ಕಷ್ಟ ಇತರ ಕ್ಷೇತ್ರಗಳನ್ನು ಗಮನಿಸಿ ನಮ್ಮ ಕ್ಷೇತ್ರವನ್ನು ಗಮನಿಸಿ ಅಭಿವೃಧಿ ಆಗ ತಿಳಿಯುತ್ತದೆ ಎಂದರು. ಕ್ಷೇತ್ರ ಜನರು ನನ್ನ ಮೇಲೆ ವಿಶ್ವಾಸಕ್ಕೆ ಪ್ರೀತಿಗೆ ಅಭಿಮಾನಕ್ಕೆ ಮುಖ್ಯಮಂತ್ರಿಯಾಗಲಿ ಎಂದು ಕೂಗುತ್ತೀರ ಅದು ನಮ್ಮ ಕೈಯಲ್ಲಿ ಇಲ್ಲ ಪಕ್ಷದ ವರಿಷ್ಠರು ಶಾಸಕರು ಸೇರಿದಂತೆ ಹಲವು ಹಂತಗಳಲ್ಲಿ ನಡೆಯುವ ಕೆಲಸ ಆದರೆ ನೀವುಗಳು ನನ್ನನು ರಾಜ್ಯದ ಒಬ್ಬ ನಾಯಕ ಎಂದು ಗುರುತಿಸಿ ಮತ ಹಾಕಿ ಎಂದರು.
ರಾಜ್ಯದಲ್ಲಿ ಸಮಿಶ್ರ ಸರ್ಕಾರದಲ್ಲಿ ನೀಡಿದಂತಹ ಆಶ್ರಯ ಮನೆಗಳಿಗೆ ಸರ್ಕಾರ ಇಲ್ಲಿಯವರೆಗೂ ಹಣ ಬಿಡುಗಡೆ ಮಾಡಿದೆ ಆದರೆ ಸರ್ಕಾರದಿಂದ ಯಾವುದೇ ಹೊಸ ಮನೆಯನ್ನು ಬಿಡುಗಡೆ ಮಾಡಿಲ್ಲ ನಾವುಗಳು ವಿದಾನ ಸಭೆಯಲ್ಲಿ ಒತ್ತಡ ಹಾಕಿದ ಮೇಲೆ ಸರ್ಕಾರವು ಪ್ರತೀ ಪಂಚಾಯ್ತಿಗೆ 40 ಮನೆಗಳನ್ನು ನೀಡಿದೆ, ಆದರೆ ವಿಶೇಷವಾಗಿ ವಸತಿ ಸಚಿವರಾದ ವಿ. ಸೋಮಣ್ಣನವರು ನನ್ನ ಮನವಿ ಮತ್ತು ವಿಶ್ವಾಸಕ್ಕೆ ಸ್ಪಂಧಿಸಿ ಕೊರಟಗೆರೆ ಕ್ಷೇತ್ರಕ್ಕೆ 3600 ಮನೆಗಳನ್ನು ವಿಶೇಷ ಆದ್ಯತೆಯ ಮೇಲೆ ಬಿಡುಗಡೆಗೊಳಿಸಿದ್ದಾರೆ ಈ ಹಿಂದೆಯೂ ನನಗೆ 8 ಸಾವಿರ ಮನೆಗಳನ್ನು ಮಂಜೂರು ವಸತಿ ಸಚಿವರಿಗೆ ಕ್ಷೇತ್ರದ ಜನರ ಪರವಾಗಿ ಹಾಗೂ ವೈಯಕ್ತಿಕವಾಗಿ ಅಭಿನಂದನೆ ಮತ್ತು ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಸರ್ಕಾರದಲ್ಲಿ ಭ್ರಷ್ಠಾಚಾರದ ಕೂಗು ಸಾಕಷ್ಟು ಕೇಳುತ್ತಿದೆ, ಸರ್ಕಾರದ ಕಾಮಗಾರಿ ಮತ್ತು ಕೆಲಸ ನಿರ್ವಹಿಸುವವರು, ಬಹಿರಂಗವಾಗಿಯೇ ಈ ಆರೋಪ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಯಾವುದೇ ಸರ್ಕಾರವಾಗಲಿ ಜನರ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಬೇಕಿದೆ ಎಂದ ಅವರು ಬರುವ ಆಯ ವ್ಯಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಕ್ಷೇತ್ರದ ಎತ್ತಿನ ಹೊಳೆ ಯೋಜನೆಗೆ ಸಾವಿರಾರು ಕೋಟಿ ರೂಗಳನ್ನು ಬಿಡುಗಡೆ ಮಾಡಲಿ ಇದರಿಂದ ಬಯಲು ಸೀಮೆಯ ಜನರಿಗೆ ನೀರಿನ ನೆರವಾಗುತ್ತದೆ ನನ್ನ ಕ್ಷೇತ್ರದಲ್ಲಿ 110 ಕೆರೆಗಳು ಈ ಯೋಜನೆಯಲ್ಲಿ ತುಂಬಲಿವೆ,ಅದೇ ರೀತಿಯಾಗಿ ತುಮಕೂರು-ರಾಯದುರ್ಗ-ಬಳ್ಳಾರಿ ರೈಲ್ವೇ ಮಾರ್ಗವು ಹಳ್ಳ ಹಿಡಿದಿದೆ, ಯಪಿಎ ಸರ್ಕಾರದಲ್ಲಿ ತಂದಂತಹ ಈ ಯೋಜನೆ ಅರ್ಧಕ್ಕೆ ನಿಂತಿರುವುದು ದುರದುಷ್ಠಕರ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ ಆದರೆ ಯೋಜನೆ ಮಾತ್ರ ಸಕಾರಗೊಂಡಿಲ್ಲ ನೆರೆಯ ಆಂದ್ರಪ್ರದೇಶದಲ್ಲಿ ಈ ಯೋಜನೆ ಅಂತಿಮ ಘಟ್ಟಕ್ಕೆ ಬಂದಿದೆ ಈ ಕೂಡಲೇ ರಾಜ್ಯದ ಮುಖ್ಯಂತ್ರಿಗಳು ಇದರ ಬಗ್ಗೆ ಒತ್ತು ನೀಡಿ ಹೆಚ್ಚಿನ ಹಣ ಬಿಡುಗಡೆಗೊಳಿಸಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಸುಜಾತ, ಸದಸ್ಯರಾದ ನಾಗರಾಜು, ಅಂಜನಪ್ಪ,
ಆನಂದ್,ರಾಜು ಕೆಪಿಸಿಸಿ ಕಾರ್ಯದರ್ಶಿ ಬಿ.ಎಸ್ ದಿನೇಶ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಅರಕೆರೆ ಶಂಕರ್, ಅಶ್ವ
ಥ್ ನಾರಾಯಣ,ಮಾಜಿ ಅಧ್ಯಕ್ಷ ಗಂಗಾಧರಪ್ಪ, ಮಹಿಳಾ ಅಧ್ಯಕ್ಷೆ ಜಯಮ್ಮ, ಯುವ ಕಾಂಗ್ರೇಸ್ ಅಧ್ಯಕ್ಷ ವಿನಯ್ ಕುಮಾರ್, ಮುಖಂಡರಾದ ಹನುಮಂತರಾಯಪ್ಪ, ನ್ಯಾತೇಗೌಡ, ನಂಜೀರ್, ಸುರೇ
ಶ್, ಸೇರಿದಂತೆ ಹಲವು ಸ್ಥಳೀಯ ಮುಖಂಡರುಗಳು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker