ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ಮಾತ್ರ ಬಡವರ ಆಶೋತ್ತರ ಈಡೇರಲು ಸಾಧ್ಯ : ಟಿ.ಬಿ.ಜಯಚಂದ್ರ
ಶಿರಾ : ಈ ದೇಶಕ್ಕೆ ಸ್ವಾತಂತ್ರö್ಯ ಬರಲು ಕಾರಣ ಕಾಂಗ್ರೆಸ್, ಕಾಂಗ್ರೆಸ್‌ನಿಂದ ಸ್ವಾತಂತ್ರ್ಯ ಬಂದಿದೆ. ಆದರೆ ಕೆಲವು ರಾಜಕೀಯ ಪಕ್ಷಗಳು ಇತಿಹಾಸವನ್ನು ತಿರುಚುವ ಕೆಲಸವನ್ನು ಮಾಡುತ್ತಿದ್ದಾರೆ. ಈಗಿನ ಯುವಕರಿಗೆ ಇತಿಹಾಸವನ್ನು ತಿಳಿಸಬೇಕಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಅವರು ನಗರದ ತಮ್ಮ ಗೃಹ ಕಚೇರಿಯಲ್ಲಿ ನಗರಸಭೆ ಚುನಾವಣೆ ಪ್ರಯುಕ್ತ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ಮಾತ್ರ ಬಡವರ ಆಶೋತ್ತರಗಳು ಈಡೇರಲು ಸಾಧ್ಯ. ದಕ್ಷ ಆಡಳಿತಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಮುಂದಾಗಬೇಕು. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಕಾಂಗ್ರೆಸ್ ಅವಧಿಯಲ್ಲಿ ಶಿರಾ ತಾಲೂಕಿನಲ್ಲಿ ಕೈಗಾರಿಕೆ, ಶಿಕ್ಷಣ ಹಾಗೂ ಆರೋಗ್ಯಕ್ಕೆ ಕ್ಷೇತ್ರ ದಲ್ಲಿ ಸರ್ವತೋಮುಖ ಅಭಿವೃದ್ಧಿ ಕಂಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ಕಾಂಗ್ರೆಸ್ ನಗರಸಭೆಯಾಗಲಿ: ಅಧಿಕಾರವಧಿಯಲ್ಲಿ ಮಾಡಿದಂತಹ ಅಭಿವೃದ್ದಿ ಕಾರ್ಯಗಳಿಂದ ಇಂದು ಶಿರಾ ನಗರಸಭೆಗೆ ಬೆಲೆ ಬಂದಿದೆ. ಇಂದು ತುಮಕೂರು ಬಿಟ್ಟರೆ ಒಳಚರಂಡಿ ವ್ಯವಸ್ಥೆ ಇರುವುದು ಶಿರಾದಲ್ಲಿ ತುಮಕೂರು ಬಿಟ್ಟರೆ ಶಿರಾದಲ್ಲಿ ಮಾತ್ರ. ಸುಮಾರು 79 ಕೋಟಿ ರೂ. ವೆಚ್ಚದಲ್ಲಿ ಉನ್ನತ ತಂತ್ರಜ್ಞಾನದಿಂದ ಮಾಡಲಾಗಿದೆ. ಈ ಘಟಕವನ್ನು ಎಲ್ಲರೂ ಒಮ್ಮೆ ನೋಡಿ ನಿಮಗೆ ತಿಳಿಯಲಿದೆ. ಶಿರಾ ಹೊರವಲಯದಲ್ಲಿರುವ ಮೊರಾರ್ಜಿ ವಸತಿ ಶಾಲೆಗಳ ಸಂಕೀರ್ಣವನ್ನು ನೋಡಿ, ಕೈಗಾರಿಕಾ ವಸಹತು ಪ್ರದೇಶಗಳನ್ನು ನೋಡಿ ಈ ಎಲ್ಲಾ ಅಭಿವೃದ್ದಿ ಕಾರ್ಯಗಳಿಂದ ಶಿರಾ ನಗರಸಭೆಗೆ ಒಂದು ಬೆಲೆ ಬಂದಿದೆ. ಈ ನಗರಸಭೆಗೆ ಮತದಾರರು ಸಮರ್ಥರನ್ನು ಆಯ್ಕೆ ಮಾಡಬೇಕು. ಊರಿನ ಭವಿಷ್ಯ ನೀವೇ ತೀರ್ಮಾನ ಮಾಡಬೇಕು. ನಗರಸಭೆ ಚುನಾವಣೆಯಲ್ಲಿ ಆಕಾಂಕ್ಷಿ ಅಭ್ಯರ್ಥಿಗಳು ಟಿಕೆಟ್ ಸಿಗದಿದ್ದರೂ ಸಹ ಪಕ್ಷ ಬಿ ಫಾರಂ ನೀಡುವ ಅಭ್ಯರ್ಥಿಯನ್ನು ಬೆಂಬಲಿಸಿ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲು ಕಾರ್ಯಕರ್ತರು ಶ್ರಮಿಸಬೇಕೆಂದು ಕರೆ ನೀಡಿದರು.
ನಿವೇಶನ ಕೊಟ್ಟಿದ್ದು ಕಾಂಗ್ರೆಸ್: ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ನಿವೇಶನ ಹಂಚುವ ಕಾರ್ಯ ಕೈಗೊಂಡಿತ್ತು, ಆದರೆ ಅರ್ಹ ಫಲಾನುಭವಿಗಳನ್ನು ಗುರುತಿಸುವ ಕೆಲಸ ವಿಳಂಬವಾದ ಕಾರಣ ನಿವೇಶನ ನೀಡಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಅಧಿಕಾರ ಬಿಟ್ಟುಕೊಟ್ಟು ಈಗಾಗಲೇ ನಾಲ್ಕು ವರ್ಷಗಳು ಕಳೆದಿದ್ದರೂ ಸಹ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಹಕ್ಕುಪತ್ರ ನೀಡಲು ಆಡಳಿತರೂಢ ಬಿಜೆಪಿ ಸರಕಾರ ಮುಂದಾಗಲಿಲ್ಲ. ಹಕ್ಕುಪತ್ರ ನೀಡುವ ವಿಷಯದಲ್ಲಿ ಭ್ರಷ್ಟಾಚಾರ ತುಂಬಿತುಳುಕುತ್ತಿದೆ, ಯಾವ ಅಧಿಕಾರಿಗಳು ಸಹ ಮಾತು ಕೇಳದ ಸನ್ನಿವೇಶ ಉಂಟಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಪ್ಪ, ಚುನಾವಣೆ ವೀಕ್ಷಕರಾದ ಹನುಮಂತಪ್ಪ, ಮುಖಂಡ ಕಲ್ಕೆರೆ ರವಿಕುಮಾರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಗ್ರಾಮಾಂತರ ಅಧ್ಯಕ್ಷ ನಟರಾಜ್ ಬರಗೂರು, ಮಹಿಳಾ ಅಧ್ಯಕ್ಷೆ ರೇಖಾ ರಾಘವೇಂದ್ರ, ಮಾಜಿ ನಗರಸಭಾ ಅಧ್ಯಕ್ಷ ಅಮಾನುಲ್ಲಾ ಖಾನ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ಮಾಜಿ ತಾ.ಪಂ. ಸದಸ್ಯೆ ಮಂಜುಳಾಬಾಯಿ ಶೇಷಾನಾಯ್ಕ, ಡಿ.ಸಿ.ಅಶೋಕ್, ಕೋಟೆ ಲಿಂಗರಾಜ್, ಸೇರಿದಂತೆ ಹಲವರು ಹಾಜರಿದ್ದರು.