ಈ ದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹುಟ್ಟಿರುವುದು ನಮ್ಮೆಲ್ಲರ ಭಾಗ್ಯ : ಹುಣಸೇಹಳ್ಳಿ ಶಿವಕುಮಾರ್

ಶಿರಾ : ಅಂಬೇಡ್ಕರ್ ಅವರ ಸಂವಿಧಾನವು ಸಂಪೂರ್ಣವಾಗಿ ಜಾರಿಯಾದಾಗ ಮಾತ್ರ ಭಾರತವು ಭವ್ಯ ಭಾರತ ಆಗಲಿಕ್ಕೆ ಸಾಧ್ಯ. ಅಂಬೇಡ್ಕರ್ ಅವರು ದೀನದಲಿತರ ಮಹಾಚೇತನವಾಗಿದ್ದಾರೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷರಾದ ಹುಣಸೇಹಳ್ಳಿ ಎಚ್‌ಆರ್ ಶಿವಕುಮಾರ್ ಹೇಳಿದರು.
ಅವರು ತಾಲ್ಲೂಕಿನ ಹುಣಸೆಹಳ್ಳಿಯಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದಂದು ಭಾಗವಹಿಸಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಈ ದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹುಟ್ಟಿರುವುದು ನಮ್ಮ-ನಿಮ್ಮೆಲ್ಲರ ಭಾಗ್ಯ, ಇಂದು ಮೀಸಲಾತಿಯನ್ನು ಕೇವಲ ಕೆಲವೇ ಪರಿಶಿಷ್ಟ ಜಾತಿ ರವರು ಪಡೆದುಕೊಳ್ಳುತ್ತಿದ್ದಾರೆ ಆದರೆ ಮೂಲ ಪರಿಶಿಷ್ಟರು ಇಂದಿಗೂ ಕೂಡ ಮೀಸಲಾತಿ ವಂಚಿತರಾಗಿ ಅಲೆಮಾರಿಗಳಾಗಿ, ಅರೆ ಅಲೆಮಾರಿಗಳಾಗಿ. ಗುಳೇ ಹೋಗುತ್ತಾ ಬದುಕುತ್ತಿದ್ದಾರೆ ಎಂದ ಅವರು ನಾನು ಮುಂದಿನ ವರ್ಷದಿಂದಲೇ ನಮ್ಮ ಹಳ್ಳಿಯಲ್ಲಿ ಶಾಲೆಯೊಂದು ಪ್ರಾರಂಭಿಸುತ್ತಿದ್ದೇನೆ ಆ ಶಾಲೆಯಲ್ಲಿ ಎಲ್ಲಾ ವರ್ಗದ ಎಲ್ಲ ಜಾತಿಯ ಹೆಣ್ಣುಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ದ್ವಿತೀಯ ಪಿಯುಸಿಯವರಿಗೆ ಉಚಿತವಾಗಿ ಶಿಕ್ಷಣ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ಭಾಗದ ಅಧ್ಯಕ್ಷ ಹುಣಸೆಹಳ್ಳಿ ಭಾರ್ಗವ್ ಸೇನ್, ಹುಣಸೆಹಳ್ಳಿ ಗ್ರಾ.ಪಂ. ಸದಸ್ಯರಾದ ಇಂದ್ರಮ್ಮ ನರಸಿಂಹಮೂರ್ತಿ, ಹುಣಸೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪಾರ್ವತಮ್ಮ ನಾಗರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.