ಚಿಕ್ಕನಾಯಕನಹಳ್ಳಿ
ಹುಳಿಯಾರು: ಮಳೆಗೆ ಮೂರು ಮನೆಗಳ ಗೋಡೆ ಕುಸಿತ
ಹುಳಿಯಾರು: ಎರಡ್ಮೂರು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಮತ್ತೆ ಬುಧವಾರ ರಾತ್ರಿ ಬಂದು ಮೂರು ಮನೆಗಳ ಗೋಡೆ ಕುಸಿತಕ್ಕೆ ಕಾರಣವಾಗಿದೆ.
ಹಂದನಕೆರೆ ಹೋಬಳಿಯ ಬೊಮ್ಮೇನಹಳ್ಳಿಯ ರಾಜಶೇಖರ್ ಎಂಬುವವರ ಮನೆಯ ಗೋಡೆ ಕುಸಿದು ಪಿಠೋಪಕರಣಗಳು, ದಿನಸಿ ಹಾಗೂ ಪಾತ್ರೆಗಳಿಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ.
ಹುಳಿಯಾರು ಹೋಬಳಿಯ ಗಾಣಧಾಳುವಿನಲ್ಲಿ ಮಲ್ಲಚಾರ್ ಅವರ ವಾಸದ ಮನೆಯ ಗೋಡೆ ಕುಸಿದು ಅಪಾರ ಹಾನಿಯಾಗಿದ್ದು ಯಾವುದೇ ಪ್ರಾಣಾಪಾಯವಾಗಿಲ್ಲ.
ಹುಳಿಯಾರು ಪಟ್ಟಣದ ಸುಣ್ಣದಗೂಡಿನ ಜಬ್ಬರ್‌ಸಾಬ್ ಅವರ ಮನೆಯ ಗೋಡೆ ಕುಸಿದಿದ್ದು ಯಾವುದೇ ವಸ್ತುಗಳ ಹಾನಿಯಾಗಿಲ್ಲ.
ಮಳೆ ವಿವರ: ಮಳೆ ಮಾಪನದ ಪ್ರಕಾರ ಬುಧವಾರ ಹುಳಿಯಾರು 8.2 ಮಿಮೀ, ಶೆಟ್ಟಿಕೆರೆ 10.2 ಮಿಮೀ, ಬೋರನಕಣಿವೆ 7.4 ಮಿಮೀ ಮಳೆ ಬಿದ್ದಿದೆ.