ಶಿರಾ ತಾಲ್ಲೂಕಿನ ಚೆಕ್‌ಡ್ಯಾಂ, ಬ್ಯಾರೇಜ್‌ಗಳು ತುಂಬಿರುವುದು ಅತೀವ ಸಂತೋಷವಾಗಿದೆ : ಟಿ.ಬಿ.ಜಯಚಂದ್ರ
ಶಿರಾ : ಅಂತರ್ಜಲ ಅಭಿವೃದ್ಧಿ, ಜನ ಜಾನುವಾರುಗಳಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಬಾಗದೆAಬ ದೂರದೃಷ್ಟಿಯಿಂದ ಶಿರಾ ತಾಲ್ಲೂಕಿನಾದ್ಯಂತ ಸುಮಾರು 121ಕ್ಕೂ ಹೆಚ್ಚಿನ ಚೆಕ್ ಡ್ಯಾಂ ಕಂ ಬ್ಯಾರೇಜ್‌ಗಳನ್ನು ನನ್ನ ಅಧಿಕಾರದ ಅವಧಿಯಲ್ಲಿ ನಿರ್ಮಾಣ ಮಾಡಿದ್ದು ಇಂದು ಸುಮಾರು 90ಕ್ಕೂ ಹೆಚ್ಚು ಬ್ಯಾರೇಜ್‌ಗಳು ಭರ್ತಿಯಾಗಿರುವುದು ನನಗೆ ಅತೀವ ಸಂತೋವಾಗಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಅವರು ಮಂಗಳವಾರ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಕೆರೆ, ಬಸರಿಹಳ್ಳಿ, ಉಮಾಪತಿ ಹಳ್ಳಿ, ಮಲ್ಲಶೆಟ್ಟಿಹಳ್ಳಿ, ಹುಂಜಿನಾಳು, ಅಮಲಗೊಂದಿ ಸೇರಿದಂತೆ ಹಲವು ಕಡೆ ಮಳೆಯಿಂದ ತುಂಬಿ ಹರಿಯುತ್ತಿರುವ ಚೆಕ್ ಡ್ಯಾಂ ಕಂ ಬ್ಯಾರೇಜ್ ವೀಕ್ಷಣೆ ಮಾಡಿ ಮಾತನಾಡಿದರು. ಶಿರಾ ತಾಲ್ಲೂಕು ಬಯಲುಸೀಮೆ ಪ್ರದೇಶವಾಗಿರುವುದರಿಂದ ಬಂದ ಮಳೆಯ ನೀರನ್ನು ಪೋಲಾಗದಂತೆ ಚೆಕ್‌ಡ್ಯಾಂ, ಬ್ಯಾರೇಜ್ ಪಿಕಪ್ ನಿರ್ಮಿಸಿದ ಕಾರಣ ಹರಿಯುವ ನೀರು ನಿಂತು ಅಂತರ್ಜಲ ಮಟ್ಟ ಹೆಚ್ಚುತ್ತದೆ.ಭೂತದ ಬಾಯಲ್ಲಿ ಭಗವದ್ಗೀತೆ: ಇಷ್ಟು ದಿನ ಯಾವುದೇ ಕಾರಣಕ್ಕೂ ಮದಲೂರು ಕೆರೆಗೆ ಹೇಮಾವತಿ ನೀರನ್ನು ಹರಿಸಲು ಸಾಧ್ಯವಿಲ್ಲ, ಆ ಕೆರೆಗೆ ಅಲೊಕೇಷನ್ ಇಲ್ಲ, ಕೆರೆಗೆ ನೀರು ಹರಿಸಿದರೆ ಅಧಿಕಾರಿಗಳನ್ನು ಜೈಲಿಗೆ ಕಳಿಸಬೇಕಾಗುತ್ತದೆ ಎಂದು ಹಲವಾರು ಕಾರಣ ಹೇಳುತ್ತಿದ್ದ ಮಂತ್ರಿ ಮಹಾಶಯರೊಬ್ಬರು ನಿನ್ನೆ ನಡೆದ ಕಾರ್ಯಕ್ರಮ ಒಂದರಲ್ಲಿ ಮದಲೂರು ಕೆರೆಗೆ ಬಿಡಲಾಗುವುದು. ಕುಡಿಯುವ ನೀರನ್ನು ಯಾವ ಕೊಳ್ಳದಿಂದ ಯಾವ ಕೊಳ್ಳಕಾದರೂ ತೆಗೆದುಕೊಂಡು ಹೋಗಬಹುದು ಎಂದು ಹೇಳಿದ್ದಾರೆ.ಕೊನೆಗೂ ಆ ಮಂತ್ರಿ ಮಹಾಶಯನಿಗೆ ತಡವಾಗಿಯಾದರೂ ಜ್ಞಾನೋದಯವಾಗಿದೆ, ಇದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಷ್ಟು ಸಂತೋಷವಾಯಿತು ಎಂದು ಕುಟುಕಿದ ಅವರು ನಿಜವಾಗಿಯೂ ಜಿಲ್ಲಾ ಮಂತ್ರಿಗೆ ಇಚ್ಚಾಶಕ್ತಿ ಇದ್ದರೆ ತುಮಕೂರು ಜಿಲ್ಲೆಗೆ ಹರಿಯಬೇಕಾಗಿರುವ 25 ಟಿ.ಎಂ.ಸಿ ನೀರನ್ನು ಹಾಸನದವರಿಂದ ಬಿಡಿಸಿಕೊಂಡು ಬರಲಿ ಎಂದು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹನುಮಂತಯ್ಯ, ಮುಖಂಡರಾದ ಬಾಲೇನಹಳ್ಳಿ ಪ್ರಕಾಶ್, ಹಾಲೇನಹಳ್ಳಿ ಶಶಿಧರ್, ಕೆ.ಎಲ್.ದಿವಾಕರ್ ಗೌಡ, ನಟರಾಜ್, ಪಂಜಿಗನಹಳ್ಳಿ ತಿಪ್ಪೇಸ್ವಾಮಿ, ವಕೀಲ ರಾಕೇಶ್, ಅಜಯ್ ಕುಮಾರ್ ಗಾಳಿ ಮತ್ತಿತರರು ಹಾಜರಿದ್ದರು.