ಸಿದ್ದರಾಮಯ್ಯ ಒಬ್ಬ ಸಿವಿಲ್ ತಾಲಿಬಾನ್, ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ…? : ಸೊಗಡು ಶಿವಣ್ಣ
ತುಮಕೂರು : ಆರ್.ಎಸ್.ಎಸ್. ಬಗ್ಗೆ ಮಾತನಾಡುವ ಯೋಗ್ಯತೆ ಸಿದ್ದರಾಮಯ್ಯನಂತಹ ಮೀರ್ ಸಾದಿಕ್ಗೆ ಇಲ್ಲ ಎಂದು ಹೇಳುವ ಮೂಲಕ ವಿಪಕ್ಷ ನಾಯಕನ ತಾಲಿಬಾನ್ ಹೇಳಿಕೆಗೆ ಸೊಗಡು ಶಿವಣ್ಣ ತಿರುಗೇಟು ನೀಡಿದ್ದಾರೆ. ತುಮಕೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು 1925 ರಲ್ಲಿ ಆರ್.ಎಸ್. ಎಸ್. ಸಂಘಟನೆ ಹುಟ್ಟಿದ್ದಾಗ ಸಿದ್ದರಾಮಯ್ಯ ಇನ್ನೂ ಹುಟ್ಟಿರಲೇ ಇಲ್ಲ ಎಂದು ತರಾಟೆ ತೆಗೆದು ಕೊಂಡರು.
ಸ್ವಾತಂತ್ರ್ಯ ಸಮಯದಲ್ಲಿ ಆರ್.ಎಸ್.ಎಸ್.ನವರೂ ಜೈಲಿಗೆ ಹೋಗಿದ್ದರು. ಸ್ವಾತಂತ್ರ್ಯ ಬಂದ ಮೂರೇ ತಿಂಗಳಲ್ಲಿ ಪಾಕಿಸ್ತಾನದವರು ಕಾಶ್ಮೀರ ನಮ್ಮದು ಎಂದರು. ರಾಜಾ ಹರಿಸಿಂಗ್ ಇನ್ನೂ ಬಿಟ್ಟುಕೊಟ್ಟಿರಲಿಲ್ಲ. ಅಷ್ಟರಲ್ಲೇ ಸ್ವಯಂ ಸೇವಕರು ಅಲ್ಲಿಗೆ ಹೋಗಿದ್ದರು. ದೇಶದಲ್ಲಿ ಆಪತ್ತು ಬಂದಾಗಲೆಲ್ಲ ಆರ್.ಎಸ್.ಎಸ್.ನವರು ಕೆಲಸ ಮಾಡಿದ್ದಾರೆ ಎಂದು ಗುಡುಗಿದರು.
ಮೀರ್ ಸಾದಿಕ್ ಸಿದ್ದರಾಮಯ್ಯಗೆ ಮಾನ ಮರ್ಯಾದೆ ಏನಾದರೂ ಇದ್ದಿದ್ದರೆ ದೇಶ ಭಕ್ತರ ಬಗ್ಗೆ ಇಂತಹ ಮಾತುಗಳನ್ನು ಆಡುತ್ತಿರಲಿಲ್ಲ. ದೇಶ ವಿಭಜನೆ ಇನ್ನೂ ಎಷ್ಟು ದಿನ ಮಾಡುತ್ತೀರಾ..? ಮಾನ ಮರ್ಯಾದೆ ಇದ್ದರೆ ಬಾಯಿ ಮುಚ್ಚಿಕೊಂಡಿರಬೇಕು ಎಂದು ಹೇಳಿದರು.ಸಿದ್ದರಾಮಯ್ಯ ಕ್ಷಮೆಗೆ ನಾನು ಆಗ್ರಹಿಸಲ್ಲ. ಏಕೆಂದರೆ ಆತ ಮನುಷ್ಯನೇ ಅಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಹೋಗುವ ಮುನ್ನ ಕೋಳಿ ಮಾಂಸ ತಿಂದು ಹೋದರೆ ಭಕ್ತರು ಹೇಗೆ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿದ ಅವರು ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ ಆಗ ನಾನು ಒಪ್ಪುತ್ತೇನೆ ಎಂದರು. ಮುಸ್ಲಿಮರನ್ನು ಒಲೈಸುವ ಬದಲು ಕನ್ವರ್ಟ್ ಆಗಲಿ ಎನ್ನುತ್ತಾ, ಸಿದ್ದರಾಮಯ್ಯ ಒಬ್ಬ ಸಿವಿಲ್ ತಾಲಿಬಾನ್ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.