ಮೋಜಿನಿ ತಂತ್ರಾಂಷದ ಪಹಣಿ ತಿದ್ದುಪಡಿ ಕೊರಟಗೆರೆ ರಾಜ್ಯದಲ್ಲಿಯೇ ಪ್ರಥಮ : ಡಾ.ಜಿ.ಪರಮೇಶ್ವರ್

ಕೊರಟಗೆರೆ : ತಾಲೂಕಿನಲ್ಲಿ ಸುಮಾರು 10 ವರ್ಷಗಳಿಂದ ನೆನೆಗುದಿಯಲ್ಲಿದ್ದ ಮೊಜಿನಿ ತಂತ್ರಾಂಷದ ಪಹಣಿ ತಿದ್ದುಪಡಿ ಬಾಕಿ ಅರ್ಜಿಗಳನ್ನು ಒಂದೇ ದಿನದಲ್ಲಿ ಕಂದಾಯ ಮತ್ತು ಭೂಮಾಪನಾ ಇಲಾಖೆ ಇತ್ಯರ್ಥ ಗೊಳಿಸುವ ಕಾರ್ಯದಲ್ಲಿ ಕೊರಟಗೆರೆ ತಾಲೂಕು ರಾಜ್ಯದಲ್ಲಿ ಮುಂಚೂಣಿಯಲ್ಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರು ಪತ್ರಿಕಾ ಗೊಷ್ಠಿಯಲ್ಲಿ ಮಾತನಾಡಿ ರಾಜ್ಯ ಕಂದಾಯ ಇಲಾಖೆ ಮೋಜಿಣಿ ತಂತ್ರಾಂಷದ ಬಾಕಿ ಅರ್ಜಿಗಳನ್ನು ಕೋಡಲೆ ವಿಲೆವಾರಿ ಮಾಡುವಂತೆ ಅದೇಶಿಸಿದೆ, ತುಮಕೂರು ಜಿಲ್ಲಾಧಿಕಾರಿಗಳ ಸೂಚನೆ ಯಂತೆ, ಭೂ ದಾಖಲೆಗಳ ಉಪನಿರ್ದೇಶಕರ ಮತ್ತು ಮಧುಗಿರಿ ಉಪವಿಭಾಗಾಧಿಕರಿಗಳ ನಿರ್ದೇಶನದಂತೆ ಕೊರಟಗೆರೆ ತಾಲೂಕನ್ನು ಈ ಕಾರ್ಯದಲ್ಲಿ ಪ್ರಯೋಗಿಕ ಯೋಜನೆ (ಪೈಲೆಟ್ ಪ್ರಾಜೆಕ್ಟ್) ಯಾಗಿ ಆಯ್ಕೆ ಮಾಡಿಕೊಂಡು ಸುಮಾರು 10 ವರ್ಷಗಳಿಂದ 11ಇ ನಕ್ಷೆಗಾಗಿ ಅರ್ಜಿ ಸಲ್ಲಸಿ ಕಂದಾಯ ಮತ್ತು ಭೂಮಾಪನ ಇಲಾಖೆಯಲ್ಲಿ ಪಹಣಿ ತಿದ್ದುಪಡಿ ಬಾಕಿ ಅರ್ಜಿಗಳನ್ನು ತಹಶೀಲ್ದಾರ್ ನಾಹೀದಾ ಜಮ್ ಜಮ್ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳು ಮತ್ತು ಭೂಮಾಪನ ಸಹಾಯಕ ನಿರ್ದೇಶಕ ನಂಜಯ್ಯ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳು ಒಂದೇ ದಿನದಲ್ಲಿ 340 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದಾರೆ, ಇದರಲ್ಲಿ ಅ ಮತ್ತು ಬ ಕರಾಬು ತಿದ್ದುಪಡಿ, ದಾನ, ತತ್ಕಾಲ್ ಪೊಡಿ, ವಿಭಾಗ ಮತ್ತು ಕ್ರಯದ ಅರ್ಜಿಗಳಿದ್ದು ಹಲವು ವರ್ಷಗಳಿಂದ ಇದಕ್ಕಾಗಿ ಇಲಾಖೆಗೆ ಅಲೆದಾಡುತ್ತಿದ್ದ ಅರ್ಜಿದಾರರಿಗೆ ನೆಮ್ಮದಿ ಸಿಕ್ಕಾಂತ್ತಾಗಿದೆ, ಈ ಕಾರ್ಯವು ತ್ವರಿತ ಇತ್ಯರ್ಥದಲ್ಲಿ ರಾಜ್ಯಕ್ಕೆ ಕೊರಟಗೆರೆ ತಾಲೂಕು ಮಾದರಿಯಾಗಿದೆ, ಇಂತಹ ಅನೇಕ ರೈತರ ಪಹಣಿ ತಿದ್ದುಪಡಿ ಪ್ರಕರಣಗಳನ್ನು ಮುಂದಿನ ದಿನಗಳಲ್ಲಿ ಕಂದಾಯ ಮತ್ತು ಭೂಮಾಪನ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಿ ತೊಡಕುಗಳನ್ನು ಇತ್ಯರ್ಥಗಳಿಸುವಂತೆ ಸೂಚಿಸಲಾಗಿದೆ, ಉಳಿದ ಇತ್ಯರ್ಥಗೊಳಿಸ ಬೇಕಾದ ಅರ್ಜಿಗಳಾದ ಕಾಲಂ ನಂಬರ್ 3 ಮತ್ತು 9 ಪ್ರಕರಣಗಳು ಮತ್ತು ಹಿಸ್ಸಾ ತಿದ್ದುಪಡಿ ಪ್ರಕರಣಗಳ ತಾಂತ್ರಿಕದೊಷಗಳನ್ನು ಸರಿ ಪಡಸಿ ಅವುಗಳನ್ನು ಸಹ ಇತ್ಯರ್ಥಗೊಳಿಸಿ ಈ ಯೋಜನೆಯ ಕಾರ್ಯವನ್ನು ಸಂಪೂರ್ಣಗೊಳಿಸುವಂತೆ ತಹಶೀಲ್ದಾರ್‌ಗೆ ಸೂಚಿಸಿದರು.
ಮೋಜಿನಿ ತಂತ್ರಾಂಶವಲ್ಲದೆ ತಾಲೂಕಿನಲ್ಲಿ ಅರ್ಜಿ ಸಲ್ಲಿಸದ ರೈತರ ಪಹಣಿ ತಿದ್ದಪಡಿ ಪ್ರಕರಣಗಳು ಸಾಕಷ್ಟಿದ್ದು ಇಲಾಖೆಗಳಿಗೆ ಸುತ್ತಲಾರದೆ ರೈತರು ತಿದ್ದುಪಡಿಗೆ ಅರ್ಜಿ ಹಾಕದೆ ಸುಮ್ಮನಿದ್ದಾರೆ, ಈ ತಿದ್ದುಪಡಿ ಪ್ರಕರಣಗಳು ಕಂದಾಯ ಮತ್ತು ಭೂಮಾಪನಾ ಇಲಾಖೆಗೆ ಜಂಟಿಯಾಗಿ ಸಂಬಂದಿಸಿದ್ದು ಇಲಾಖಾ ದಾಖಲಾತಿ ಮತ್ತು ಕಡತಗಳ ತಾಂತ್ರಿಕತೆ ಆಧಾರದ ಮೇಲೆ ಮುಂಬರುವ ದಿನಗಳಲ್ಲಿ ಎರಡು ಇಲಾಖೆಗಳು ಜಂಟಿಯಾಗಿ ಈ ತಿದ್ದುಪಡಿ ಪ್ರಕರಣಗಳನ್ನು ಗ್ರಾಮವಾರು ವಿಂಗಡಿಸಿ ಸಂಪೂರ್ಣ ಪಹಣಿ ಇಂಡಿಕರಣ ಮಾಡಿದಲ್ಲಿ ರೈತರ ಬಹಳಷ್ಟು ಸಮಸ್ಯೆಗಳಿಗೆ ಸ್ಪಂದಿಸಿದಂತ್ತಾಗುತ್ತದೆ, ಈ ಸಂಬಂಧ ರಾಜ್ಯ ಕಂದಾಯ ಇಲಾಖೆ ಮತ್ತು ಜಿಲ್ಲಾಧಿಕಾರಿಗಳು ತಾಲೂಕು ಅಧಿಕಾರಿಗಳಿಗೆ ನಿರ್ದೇಶಕ ನೀಡಬೇಕು ಎಂದರು. ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ಬಾಕಿ ಇರುವ ಬಗರ್ ಹುಕುಂ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು, ಅರ್ಹತೆ, ಮಾನದಂಡ, ಇಲಾಖಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಮತ್ತು ಭೂಮಿ ಇಲ್ಲದ ರೈತನಿಗೆ ಭೂಮಿ ದೊರೆಯುವಂತೆ ಮಾಡಲಾಗುದರೊಂದಿಗೆ ನಿಯಮ ಮೀರಿ ಮಂಜೂರು ಮಾಡುವ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ತಿಳಿಸಿದರು. ಪ್ರತಿಕಾ ಗೊಷ್ಠಿಯಲ್ಲಿ ತಾಹಶೀಲ್ದಾರ್ ನಾಹೀದಾ ಜಮ್ ಜಮ್ ಉಪಸ್ಥಿತರಿದ್ದರು.