ಕುಣಿಗಲ್

ಜಮೀನುಗಳ ದಾಖಲೆಗಳು ಕಳೆದು ಹೋದರೆ ಯಾರು ಜವಾಬ್ದಾರಿ…? : ಚಿಕ್ಕಣ್ಣಶೆಟ್ಟಿ ಆರೋಪ

ಕಚೇರಿಯ ಪಹಣಿ,ಎಂ,ಆರ್ ಹೊರಗೆ ಜೆರಾಕ್ಸ್, ತಹಶೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ

ಕುಣಿಗಲ್ : ತಾಲೂಕು ಕಚೇರಿಯಲ್ಲಿ ಪಹಣಿ,ಎಂ,ಆರ್, ಸರ್ವೆ ಕಚೇರಿಯಲ್ಲಿ ಜಮೀನುಗಳ ನಕ್ಷೆ ಸೇರಿದಂತೆ ಇತರೆ ಸರ್ಕಾರಿ
ದಾಖಲೆಗಳನ್ನು ಹೊರಗಡೆ ತೆಗೆದುಕೊಂಡುಹೋಗಿ ಜೆರಾಕ್ಸ್ ಮಾಡಿಸುತ್ತಿದ್ದಾರೆ ರೆಕಾರ್ಡ್
ಗಳು ಕಳೆದು ಹೋದರೆ ಯಾರು ಜವಾಬ್ದಾರಿಎಂದು ಮಾಜಿ ಸೈನಿಕ ಅಮೃತೂರು ಚಿಕ್ಕಣ್ಣಶೆಟ್ಟಿ ಆರೋಪಿಸಿದ್ದಾರೆ.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತುಮ್ಕೂರ್ ಎಸಿಬಿ ಅಧಿಕಾರಿಗಳು
ನಡೆಸಿದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ
ಕಂದಾಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಸಂಬಂಧಪಟ್ಟಂತಹ ಎಲ್ಲಾ
ಸರ್ಕಾರಿ ದಾಖಲೆಗಳನ್ನು ಹೊರಗಡೆ ತೆಗೆದುಕೊಂಡು ಹೋಗಿ ಜೆರಾಕ್ಸ್ ಮಾಡುತ್ತಾರೆ
ಸಾರ್ವಜನಿಕರ ಜಮೀನುಗಳ ರೆಕಾರ್ಡ್ಗಳು ಕಳೆದುಹೋದರೆ ಯಾರು ಜವಾಬ್ದಾರಿ
ಇದು ಕಾನೂನಿಗೆ ವಿರುದ್ಧ ಆದಷ್ಟೂ ಎಲ್ಲಾ ರೆಕಾರ್ಡ್ಗಳನ್ನ ಜೆರಾಕ್ಸ್ ಮಾಡಲು ಸರ್ಕಾರ ಜೆರಾಕ್ಸ್ ಮಿಷನ್ ನೀಡಿಲ್ಲವೇ ಎಂದು ಪ್ರಶ್ನಿಸಿದರು.
ಸಾರ್ವಜನಿಕರಿಗೆ ಸಂಬಂಧಪಟ್ಟ ಜಮೀನಿನಎಲ್ಲಾ ರೆಕಾರ್ಡ್ ಗಳನ್ನು ಹೋಬಳಿಯ
ನಾಡ ಕಚೇರಿಗಳಿಗೆ ತಲುಪಿಸಿದರೆ ಇದರಿಂದತಾಲ್ಲೂಕು ಕೇಂದ್ರಕ್ಕೆ ಅಲೆಯುವುದು ತಪ್ಪುತ್ತದೆ ಎಂದ ಅವರು ಕಂದಾಯ ಸರ್ವೆಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಹಣ ಕೊಡದೆ ಯಾವ ಕೆಲಸವೂ ಆಗು
ವುದಿಲ್ಲ ಯಾವುದೇ ಸಣ್ಣ ಕೆಲಸಗಳಿಗೂ ಜನರನ್ನು ಅಲೆಸುತ್ತಾರೆ ತಾಲ್ಲೂಕಿನಾದ್ಯಂತ ಎ
ಮತ್ತು ಬಿ ಖರಾಬ್ ಜಮೀನುಗಳನ್ನು ಬಲಾಡ್ಯರು ಆಕ್ರಮಿಸಿಕೊಂಡಿರುವುದರಿಂದ ಜ
ಮೀನುಗಳಿಗೆ ಹೋಗುವುದಕ್ಕೆ ದಾರಿಯಿಲ್ಲದೆತುಂಬಾ ಕಷ್ಟವಾಗುತ್ತಿದೆ ಕಂದಾಯ, ಸರ್ವೆ,
ಇಲಾಖೆ ಅಧಿಕಾರಿಗಳಿಗೆ ಈ ವಿಚಾರ ಗೊತ್ತಿದ್ದರೂ ಸುಮ್ಮನಿದ್ದಾರೆ ಎಂದು ದೂರಿದರು.
ಈ ಸಂಬಂಧ ಅರ್ಜಿಗಳನ್ನು ನೀಡಿದರೆ ಲೆಕ್ಕಕ್ಕೇಇಲ್ಲ ಮತ್ತು ಮಾಜಿ ಸೈನಿಕರಿಗೆ ಇಂತಿಷ್ಟು
ಜಮೀನು ಮಂಜೂರಾತಿ ಮಾಡಿಕೊಡಿ ಎಂದು ಸರ್ಕಾರದ ಆದೇಶವಿದ್ದರೂ ಮಾಡಿಕೊಡದೆ
ದೇಶ ಸೇವೆ ಮಾಡಿರುವ ವಯಸ್ಸಾದ ನಮ್ಮಂಥವರನ್ನು ಸುಖಾಸುಮ್ಮನೆ ಕಚೇರಿಗೆ
ಅಲೆಸುತ್ತಾರೆ ಸರ್ಕಾರ ನಮ್ಮ ಕಷ್ಟವನ್ನು ಮನಗಂಡು ಯಾವ ಹೋಬಳಿಯ ಸೈನಿಕ
ಎಂದು ಪರಿಗಣಿಸಿ ಅದೇ ಹೋಬಳಿಗಳಲ್ಲಿ ನಮ್ಮಗಳಿಗೆ ಸರ್ಕಾರ ನೀಡುವ ಇಂತಿಷ್ಟು
ಜಮೀನುಗಳನ್ನು ನೀಡಿದರೆ ತುಂಬಾ ಅನುಕೂಲವಾಗುತ್ತದೆ ಎಂದು ತುಮಕೂರು ಎಸಿಬಿ
ಅಧಿಕಾರಿಗಳಲ್ಲಿ ತಮ್ಮ ಅಳಲನ್ನು ತೋಡಿಕೊಂಡು ಮನವಿಪತ್ರ ಸಲ್ಲಿಸಿದರು
ಈ ಸಂಬಂಧ ಪ್ರತಿಕ್ರಿಯಿಸಿದ ಎಸಿಬಿ ಅಧಿಕಾರಿ ವೀರೇಂದ್ರ ಈ ಸಂಬಂಧ ನೀವು ಜಿಲ್ಲಾ
ಧಿಕಾರಿಗಳಿಗೆ ಹಾಗೂ ತಹಸೀಲ್ದಾರರಿಗೆಮನವಿ ನೀಡಿ ಎಂದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ, ಕಂದಾಯ,ಸರ್ವೆ, ಪುರಸಭೆ, ಆಹಾರ, ಇಲಾಖೆಗೆ
ಸಂಬಂಧಪಟ್ಟ ಸುಮಾರು ಹನ್ನೆರಡುಅರ್ಜಿಗಳು ಸಲ್ಲಿಕೆಯಾದವು ಇದ ಕ್ಕೂ
ಮುನ್ನ ಎಸಿಬಿ ಅಧಿಕಾರಿ ಮಾತನಾಡಿಸಾರ್ವಜನಿಕರಿಗೆ ಸರ್ಕಾರಿ ಕಚೇರಿಗಳಲ್ಲಿ
ಕೆಲಸಗಳು ವಿಳಂಬವಾದರೆ ಅಥವಾ ಲಂಚಕೇಳಿದರೆ ಮತ್ತು ಸರ್ಕಾರಿ ಕಚೇರಿಗಳಲ್ಲಿ
ದಲ್ಲಾಳಿಗಳಿದ್ದರೆ ತುಮಕೂರು ಎಸಿಬಿಯವರಿಗೆ ದೂರು ಸಲ್ಲಿಸಬಹುದು ಎಂದರು.
ಸಾರ್ವಜನಿಕರು ಕೆಲಸ ಕಾರ್ಯಗಳನ್ನು ಬಿಟ್ಟು ತುಮಕೂರಿಗೆ ಬರಲು ಸಾಧ್ಯವಾಗದ
ಕಾರಣ ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಸಭೆಗಳನ್ನು ನಡೆಸುತ್ತೇವೆ
ಇಂತಹ ವೇಳೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಸಭೆಯಲ್ಲಿ ಎಸಿಬಿ ಅಧಿಕಾರಿ ಅವರು ಸಾರ್ವಜನಿಕರ ಕುಂದು ಕೊರತೆಗಳನ್ನು ಗಂಭೀರವಾಗಿ
ಆಲಿಸಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ತಾಲ್ಲೂಕು
ಪಂಚಾಯಿತಿ ವ್ಯವಸ್ಥಾಪಕ ಮಂಜುನಾಥ್  ಹಾಗೂ ಎಸಿಬಿ ಸಿಬ್ಬಂದಿಗಳು ಕೆಲವು ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker