ಜಿಲ್ಲೆತುಮಕೂರು

ಜೀವಿಗಳಲ್ಲಿ ಇಂದ್ರಿಯ ನಿಗ್ರಹವೇ ಸರ್ವ ಶ್ರೇಷ್ಠ ಕಾರ್ಯವಾಗಬೇಕು : ಅಮರೇಶ್ವರ ವಿಜಯ ನಾಟಕ ಮಂಡಳಿ ಪ್ರದರ್ಶಿಸಿದ – ವರಭ್ರಷ್ಠ ಪೌರಾಣಿಕ ನಾಟಕ

ಕನ್ನಡ ರಂಗಭೂಮಿಗೆ ಪೌರಾಣಿಕ, ಐತಿಹಾಸಿಕ, ಜಾನಪದ, ಸಾಮಾಜಿಕ, ಹಾಸ್ಯ ಹೀಗೆ ಎಲ್ಲಾ ವಿಧಧ ಹದಿನಾರು ನಾಟಕಗಳನ್ನು ನೀಡಿದ ವiಹಾನ್ ನಾಟಕಕಾರರು ಎನ್.ಎಸ್.ರಾವ್ ರವರು. ಅವರು ರಚಿಸಿದ ಹದಿನಾರು ನಾಟಕಗಳೂ ಕೂಡ ಸಮಾಜಕ್ಕೆ ಅತ್ಯುತ್ತಮ ಸಂದೇಶಗಳನ್ನು ನೀಡಿವೆ. ಅವರು ತಮ್ಮ ನಾಟಕಗಳಲ್ಲಿ ಬರೆದ ಪ್ರಾಸಬದ್ಧ ಸಂಭಾಷಣೆಗಳಂತೂ ಪ್ರೇಕ್ಷಕರ ಮನಸ್ಸನ್ನು ಪ್ರಪುಲ್ಲಗೊಳಿಸುತ್ತವೆ. ಎನ್.ಎಸ್.ರಾವ್ ರಚಿಸಿದ ವರಭ್ರಷ್ಠ ಪೌರಾಣಿಕ ನಾಟಕವಂತೂ ನಾಟಕ ಕೃತಿಗಳಲ್ಲಿ ಮೇರುಸ್ಥಾನವನ್ನು ಪಡೆದಿದೆ. ದಿನಾಂಕ: ೧೩-೦೯-೨೦೨೪ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ಗುಲಗಂಜನಹಳ್ಳಿ ಮತ್ತು ಮುದ್ದಯ್ಯನಪಾಳ್ಯಕ್ಕೆ ಸೇರಿದ ರಸ್ತೆ ಬದಿಯ ಖಾಲಿ ಜಾಗದಲ್ಲಿ ವೇದಿಕೆಯನ್ನು ನಿರ್ಮಿಸಿ, ಅಮರೇಶ್ವರ ವಿಜಯ ನಾಟಕ ಮಂಡಳಿಯು ವರಭ್ರಷ್ಠ ಪೌರಾಣಿಕ ನಾಟಕವನ್ನು ಪ್ರದರ್ಶಿಸಿತು.

ವರಭ್ರಷ್ಟ ನಾಟಕದಲ್ಲಿ ಲಂಕಾಧಿಪತಿಯಾದ ರಾವಣ ದೇವಲೋಕದ ಮೇಲೆ ದಾಳಿ ಮಾಡಿ, ಅಲ್ಲಿ ತನ್ನ ಆಡಳಿತವನ್ನು ಸ್ಥಾಪಿಸಲು ತೀರ್ಮಾನ ತೆಗೆದುಕೊಳ್ಳುತ್ತಾನೆ. ಇದನ್ನು ಗ್ರಹಿಸಿದ ತ್ರಿಲೋಕ ಸಂಚಾರಿಯಾದ ನಾರದರು ದೇವೇಂದ್ರನಿಗೆ ತಿಳಿಸಿದ್ದಲ್ಲದೇ, ವಿನೋದ-ವಿಲಾಸಗಳನ್ನು ತೊರೆದು, ದೇವತೆಗಳ ರಕ್ಷಣೆಯ ಹೊಣೆಯನ್ನು ಹೊರುವ ಜವಾಬ್ಧಾರಿಯನ್ನು ಜ್ಞಾಪಿಸುತ್ತಾರೆ. ಆಗ ದೇವೇಂದ್ರನು ನಾರದರ ಸಲಹೆಯಂತೆ ರಾವಣನ ಶ್ರೇಯಸ್ಸಿಗಾಗಿ ಅವನ ತಾಯಿ ಕೈಕಸಿ ಪೂಜಿಸುತ್ತಿದ್ದ ಉಸುಕಿನ ಲಿಂಗವನ್ನು ಜಲ, ವಾಯು ಹಾಗೂ ಮೇಘರಾಜರ ಸಹಾಯದಿಂದ ಭಗ್ನಗೊಳಿಸಿ, ಅವಳ ವ್ರತಕ್ಕೆ ಭಂಗ ತರುತ್ತಾನೆ. ಇದರಿಂದ ಮನನೊಂದ ಕೈಕಸಿಯು ತನ್ನ ಅಳಲನ್ನು ಮಗನಾದ ರಾವಣನಲ್ಲಿ ತೋಡಿಕೊಳ್ಳಲು ಆಗ ಅವನು ದೇವತೆಗಳು ನಾಶ ಮಾಡಿದ ಉಸುಕಿನ ಲಿಂಗಕ್ಕೆ ಬದಲಾಗಿ, ಸ್ವಯಂ ಶಿವನ ಆತ್ಮಲಿಂಗವನ್ನೇ ತಂದು, ನಿನ್ನ ಪೂಜೆಗೆ ಒದಗಿಸುತ್ತೇನೆಂದು ತನ್ನ ತಾಯಿಗೆ ವಚನ ಕೊಟ್ಟು, ಶಿವನನ್ನು ಕುರಿತು ಸುಧೀರ್ಘವಾದ ತಪಸ್ಸನ್ನು ಆಚರಿಸುತ್ತಾನೆ. ಆಗ ರಾವಣನ ಮುಂದೆ ಪ್ರತ್ಯಕ್ಷರಾಗುವ ಶಿವ-ಪಾರ್ವತಿಯರು ರಾವಣನ ಮನೋಭಿಲಾಷೆಯನ್ನು ಈಡೇರಿಸಲು ಮುಂದಡಿಯಿಟ್ಟಾಗ, ಮಾಯೆಯ ಪ್ರಭಾವದಿಂದ ತನ್ನ ತಪಸ್ಸಿನ ಉದ್ದೇಶವನ್ನೇ ಮರೆತು, ಪಾರ್ವತಿಯ ಮೇಲೆ ವ್ಯಾಮೋಹಗೊಂಡು, ಆ ಜಗನ್ಮಾತೆಯನ್ನೇ ಬೇಡುತ್ತಾನೆ. ಎಂದೂ ಊಹಿಸಲಾರದ ರಾವಣನ ಅಭೀಷ್ಟವನ್ನು ಕೇಳಿ, ದಿಗ್ಭçಮೆಗೊಂಡ ಶಿವ ಪಾರ್ವತಿಯರು ಇದರಿಂದಾಗುವ ಘೋರ ಪರಿಣಾಮದ ಬಗ್ಗೆ ರಾವಣನಿಗೆ ಪರಿಪರಿಯಾಗಿ ತಿಳಿಹೇಳಿ, ಈ ದುರಾಲೋಚನೆಯನ್ನು ಬಿಡುವಂತೆ ತಿಳಿಸುತ್ತಾರೆೆ. ಶಿವ-ಪಾರ್ವತಿಯರ ಬುದ್ಧಿವಾದಗಳಿಗೆ ಕಿವಿಗೊಡದ ರಾವಣ, ಅವರ ಮುಂದೆ ತನ್ನ ದುರಹಂಕಾರದ ಪ್ರದರ್ಶನ ಮಾಡುತ್ತಾನೆ. ಕೊನೆಗೆ ಪರಶಿವನು ಪಾರ್ವತಿಯನ್ನು ರಾವಣನೊಂದಿಗೆ ಕಳುಹಿಸಿಕೊಡುತ್ತಾನೆ. ಇಲ್ಲಿ ರಾವಣ ಪರ ಸ್ತಿçà ಮೇಲಿನ ವ್ಯಾಮೋಹದ ಚಪಲಕ್ಕೊಳಗಾಗಿ, ತಾನು ಶಿವನಲ್ಲಿ ಬೇಡಲು ಬಂದ ಉದ್ದೇಶವನ್ನೇ ಮರೆಯುತ್ತಾನೆ. ಸಿಕ್ಕ ಸುವರ್ಣ ಅವಕಾಶವನ್ನು ಕಳೆದುಕೊಂಡು, ವರಶ್ರೇಷ್ಠಿ ಎನಿಸಿಕೊಳ್ಳುವ ಬದಲು ವರಭ್ರಷ್ಠ ನೆನೆಸಿಕೊಳ್ಳುತ್ತಾನೆ. ಅವನು ತನ್ನ ಇಂದ್ರಿಯವನ್ನು ನಿಗ್ರಹಿಸಿಕೊಂಡಿದ್ದರೆ ಜಗನ್ಮಾನ್ಯನೆನೆಸಿಕೊಳ್ಳುತ್ತಿದ್ದನು. ಈ ಪ್ರಸಂಗದಲ್ಲಿ ಶಿವನು ತನ್ನ ಬಳಿಗೆ ಬಂದು ಕಳವಳವನ್ನು ತೋಡಿಕೊಂಡ ದೇವೇಂದ್ರ ಮತ್ತು ನಾರದನಿಗೆ ರಾವಣ ಶ್ರೇಷ್ಠ ಜ್ಞಾನಿ ಹಾಗೂ ಅಪ್ರತಿಮ ಶೂರನಾದರೂ, ಮಾಯೆಯ ಪ್ರಭಾವದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ತನ್ನ ಇಂದ್ರಿಯಗಳ ಮೇಲೆ ನಿಗ್ರಹವಿಲ್ಲದ ಯಾವುದೇ ಜೀವಿಯೂ ಕೂಡಾ ತನ್ನ ಹುಟ್ಟಿನ ಉದ್ದೇಶದಿಂದ ದೂರ ಉಳಿದು, ಕೇವಲ ಅಜ್ಞಾನದ ಭಾರವನ್ನು ಹೊತ್ತು ಜೀವನದಲ್ಲಿ ಕಷ್ಟಗಳನ್ನೇ ಅನುಭವಿಸಬೇಕಾಗುತ್ತದೆ. ಆದ್ದರಿಂದ, ಜೀವಿಗಳಲ್ಲಿ ಇಂದ್ರಿಯ ನಿಗ್ರಹವೇ ಸರ್ವ ಶ್ರೇಷ್ಠ ಕಾರ್ಯವಾಗಬೇಕು ಹಾಗೂ ಸ್ತಿçÃಯರನ್ನು ಮಾತೃ ಸಮಾನವಾಗಿ ಕಾಣದೆ, ಕೇವಲ ಭೋಗದ ವಸ್ತುವನ್ನಾಗಿ ಮಾಡುವುದು ಅನಿಷ್ಠಕ್ಕೆ ಆಹ್ವಾನ ಕೊಟ್ಟಂತೆ. ಹಾಗಾಗಿ ಪರ ಸ್ತಿçÃಯರನ್ನು ಪಾರ್ವತಿಯ ಅಂಶ ಸಂಭೂತರನ್ನಾಗಿ ಕಾಣುತ್ತಾ, ಸರ್ವರೂ ಸಭ್ಯತೆಗಳನ್ನು ಮೈಗೂಡಿಸಿಕೊಂಡು ಲೋಕಮಾನ್ಯರಾಗಲಿ ಎಂಬ ಸಂದೇಶವನ್ನು ಕೊಡುವುದರೊಂದಿಗೆ ನಾಟಕ ಮುಕ್ತಾಯವಾಗುತ್ತದೆ.

ವರಭ್ರಷ್ಠ ನಾಟಕದ ನಿರ್ದೇಶಕರಾದ ವೆಂಕಟರಮಣಯ್ಯ ಡಿರವರು ತಮ್ಮ ೫೦ ವರ್ಷಗಳ ರಂಗಭೂಮಿಯ ಸೇವೆಯ ಅನುಭವವನ್ನು ಧಾರೆಯೆರೆದು ಒಂದು ಉತ್ತಮ ನಾಟಕವನ್ನಾಗಿ ರಂಗಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ನಾಟಕವನ್ನು ನೋಡಲು ನೆರೆದಿದ್ದ ಮುದ್ದಯ್ಯನಪಾಳ್ಯ, ಗುಲಗಂಜನಹಳ್ಳಿ ಮತ್ತು ಸುತ್ತ-ಮುತ್ತಲ ಗ್ರಾಮಗಳ ಜನರ ಮನಃ ಸಂತೋಷ ಪಡಿಸುವಲ್ಲಿ ವರಭ್ರಷ್ಠ ಪೌರಾಣಿಕ ನಾಟಕ ಸೈ ಎನಿಸಿಕೊಂಡಿತು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker