ಗುಬ್ಬಿ : ಸಿಐಟಿ ಕಾಲೇಜು ಬಳಿ ನೇಣು ಬಿಗಿದುಕೊಂಡು ಬೇಕರಿ ಮಾಲೀಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಗುಬ್ಬಿ ಪಟ್ಟಣದ ಹೊರವಲಯದ ಹೇರೂರು ಬಳಿಯ ಸಿ.ಐ.ಟಿ ಕಾಲೇಜು ಮುಂಭಾಗದ ಬೇಕರಿ ಮಾಲೀಕ ರಾಜು ಸುಮಾರು 45 ವರ್ಷದ ಯುವಕ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಕುಟುಂಬದ ಜೊತೆ ಹೇರೂರು ಗ್ರಾಮದಲ್ಲಿ ವಾಸವಿದ್ದ ರಾಜು ಹಲವು ವರ್ಷಗಳಿಂದ ಸಿಐಟಿ ಕಾಲೇಜು ಮುಂಭಾಗ ಬೇಕರಿ ನಡೆಸುತ್ತಿದ್ದು ತಡರಾತ್ರಿ ಬೇಕರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೆ ಹಣಕಾಸು ಸಮಸ್ಯೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದ್ದು ನಿಖರ ಕಾರಣ ತಿಳಿದು ಬಂದಿಲ್ಲ ಪೊಲೀಸರ ತನಿಖೆಯಿಂದಷ್ಟೇ ಸತ್ಯಾ ಸತ್ಯತೆ ಹೊರಬೀಳಲಿದೆ.
ಗುಬ್ಬಿ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದು ಮುಂದಿನ ಕಾನೂನು ಕ್ರಮ ಜರುಗಿಸಲಿದ್ದಾರೆ.