ತುಮಕೂರು : ನಗರದ ಬಿ ಜಿ ಎಸ್ ವೃತ್ತದಲ್ಲಿರುವ ನಾಗರಕಟ್ಟೆ ಗಣಪತಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ತುಮಕೂರು ಹಾಗೂ ಹಿಂದೂ ಮಹಾಗಣಪತಿ ಸ್ವಾಗತ ಸಮಿತಿ ವತಿಯಿಂದ ವಿನಾಯಕ ಚತುರ್ಥಿಯಂದು 7ನೇ ವರ್ಷದ ಹಿಂದೂ ಮಹಾಗಣಪತಿಯ ಪ್ರತಿಷ್ಠಾಪನೆಯನ್ನು ಹೋಮ,ಇತ್ಯಾದಿ ಪೂಜೆಗಳನ್ನು ಕೈಗೊಂಡು ಅದ್ದೂರಿಯಾಗಿ ಪ್ರತಿಷ್ಠಾಪಿಸಲಾಯಿತು.
ಈ ಸಂದರ್ಭದಲ್ಲಿ ತುಮಕೂರು ನಗರ ಶಾಸಕರಾದ ಜ್ಯೋತಿ ಗಣೇಶ್ ರವರು ಆಗಮಿಸಿ ಶುಭ ಹಾರೈಸಿದರು. ಸಮಸ್ತ ಹಿಂದೂ ಸಮಾಜದ ಭಕ್ತರು ಹಬ್ಬದ ವಾತಾವರಣದಲ್ಲಿ ಪಾಲ್ಗೊಂಡಿದ್ದರು ನಿತ್ಯ ಪೂಜೆ ಬೆಳಗ್ಗೆ ಹಾಗೂ ಸಂಜೆ ವಿಶೇಷ ಪೂಜೆಗಳು ನೆರವೇರಲಿದ್ದು ಪ್ರಸಾದ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿದೆ ಅನೇಕ ಮಹಿಳಾ ತಂಡಗಳಿಂದ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಪರವಾಗಿ ತುಮಕೂರು ವಿಭಾಗ ಸಂಯೋಜಕರಾದ ಮಂಜು ಬಾರ್ಗವ್ ತಿಳಿಸಿದರು.
ಇದೇ 21ರಂದು ತುಮಕೂರಿನ ರಾಜಬೀದಿಗಳಲ್ಲಿ ಅದ್ದೂರಿಯಿಂದ ವಿಸರ್ಜನಾ ಮಹೋತ್ಸವವನ್ನು ಏರ್ಪಡಿಸಲಾಗಿದ್ದು ಸಮಸ್ತ ಹಿಂದೂ ಸಮಾಜದವರು ಈ ವಿಸರ್ಜನಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು ಇಡೀ ತುಮಕೂರು ಜಿಲ್ಲೆಯ ನಾಗರಿಕರು ಭಾಗವಹಿಸಲಿದ್ದು ಎಲ್ಲರಿಗೂ ಎಸ್‌ಜಿಎಸ್ ಗ್ರೂಪ್ ನ ಪ್ರಸನ್ನ ಹಾಗೂ ತಂಡದವರು ಸುಮಾರು 40,000 ಸಾರ್ವಜನಿಕರಿಗೆ ಅನ್ನದಾಸೋಹ ಮಾಡಲಿದ್ದಾರೆ ಎಂದರು. ಸಂದರ್ಭ ದಲ್ಲಿ ಭಜರಂಗದಳದ ಕಾರ್ಯಕರ್ತರು ಹಾಜರಿದ್ದರು.