ಗುಬ್ಬಿ : ನಾಲ್ಕು ವರ್ಷದ ಬಾಲಕಿಯ ಮೇಲೆ ನಡೆದ ಲೈಂಗಿಕ ಕಿರುಕುಳ ಇಪ್ಪತ್ತು ದಿನಗಳ ನಂತರ ಸಂತ್ರಸ್ಥ ಮಗುವಿನ ವಿಡಿಯೋ ಹೇಳಿಕೆಯ ತುಣಕಿನಿಂದ ಪ್ರಕರಣ ತಡವಾಗಿ ಬೆಳಕಿಗೆ ಬಂದು ಸಿ.ಎಸ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಸ್ತುತ ದೂರು ದಾಖಲಾಗಿದ್ದು ಆದರೆ ಈ ಹಿಂದೆ ದೂರು ದಾಖಲಿಸಿಕೊಳ್ಳದೇ ನಿರ್ಲಕ್ಷ ವಹಿಸಿ ಪ್ರಕರಣ ಮರೆಮಾಚಲು ಮುಂದಾಗಿದ್ದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗೇಗೌಡ ಒತ್ತಾಯಿಸಿದ್ದಾರೆ.
ಗುಬ್ಬಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಡೀ ರಾಜ್ಯದಲ್ಲಿ ಮಕ್ಕಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು 28 ಸಾವಿರ ಬಾಲ ಗರ್ಭಿಣಿಯರು ರಾಜ್ಯದಲ್ಲಿದ್ದು ಇಂತಹ ಪ್ರಕರಣ ತೆಡೆಯುವ ಅಧಿಕಾರಿಗಳ ಸಂಖ್ಯೆ 53 ಸಾವಿರ ಇದ್ದು ದುರದೃಷ್ಟದ ಸಂಗತಿ ಎಂದರೆ ಕೆ.ಅರಿವೇ ಸಂದ್ರ ಗ್ರಾಮದಲ್ಲಿ ನಡೆದ ಸಣ್ಣ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸವಾಗಿದೆ.ಲೈಂಗಿಕ ದೌರ್ಜನ್ಯ ತಡೆಯಬೇಕಾದ ಅಧಿಕಾರಿಗಳು ವಿಫಲರಾಗಿ ಪ್ರಕರಣದಲ್ಲಿ ಶಾಮೀಲಾಗಿರುವುದು ಮೇಲ್ನೋಟಕ್ಕೆ ಎಲ್ಲರಿಗೂ ಕಾಣುತ್ತಿದೆ ಎಂದು ಆರೋಪಿಸಿದರು.
ಈ ಹಿಂದೆ ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಸಂತ್ರಸ್ಥ ಮಹಿಳೆ ಮತ್ತು ನೊಂದ ಮಗುವಿನ ವಿಚಾರಣೆ ಮಾಡಿದ ಸಬ್ ಇನ್ಸ್ಪೆಕ್ಟರ್ ಮೊದಲಿಗೆ ಮಗುವಿನಿಂದ ಹೇಳಿಕೆ ಪಡೆದು ವಿಡಿಯೋ ಚಿತ್ರೀಕರಣ ಮಾಡಿದ್ದರು ಎಂಬ ಬಗ್ಗೆ ಖಚಿತ ಮಾಹಿತಿ ಇದ್ದು ಅಂದಿನ ದಿನವೇ ಏಕೆ ಕ್ರಮಕ್ಕೆ ಮುಂದಾಗಲಿಲ್ಲ ಎಂಬುದರ ಬಗ್ಗೆ ಮೇಲಾಧಿಕಾರಿಗಳು ಅವಲೋಕಿಸಬೇಕಿದೆ ಜೊತೆಗೆ ಕೆಲವು ದಿನಗಳ ನಂತರ ಪೋಕ್ಸೋ ಪ್ರಕರಣ ದಾಖಲಾಗಿ ಸತ್ಯ ಬಯಲಾದ ನಂತರ ಕೆಲವರ ಮುಖವಾಡ ಕಳಚಿದ್ದು ಆದರೆ ಮುಖವಾಡ ಧರಿಸಿ ಪ್ರಕರಣ ಮುಚ್ಚಲು ಮುಂದಾಗಿದ್ದ ವ್ಯಕ್ತಿಗಳ ವಿರುದ್ಧ ಕ್ರಮ ಆಗಬೇಕಿದೆ ಎಂದರು.
ದಿನಾಂಕ 14-01-2024 ರಂದೇ ಪಿ.ಎಸ್.ಐ ಶಿವಕುಮಾರ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ನಡೆದಿರುವ ಬಗ್ಗೆ ಸಂತ್ರಸ್ತ ಮಗುವಿನಿಂದ ಹೇಳಿಕೆ ಪಡೆದು ಅದನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇದ್ದು ಅವತ್ತಿನ ದಿನವೇ ವಿಡಿಯೋ ಆಧರಿಸಿ ದೂರು ದಾಖಲು ಮಾಡಲಿಲ್ಲ ಏಕೆ.? ಹಿರಿಯ ಅಧಿಕಾರಿಗಳಿಂದ ಅವತ್ತಿನ ಮಗುವಿನ ಹೇಳಿಕೆಯ ವಿಡಿಯೋ ಮುಚ್ಚಿಟ್ಟಿದ್ದು ಯಾವ ಉದ್ದೇಶಕ್ಕೆ ಎಂಬ ಸತ್ಯಾಂಶವನ್ನು ಜಿಲ್ಲಾ ವರಿಷ್ಠಾಧಿಕಾರಿಗಳು ತನಿಖೆ ಮಾಡಿದರೆ ಕಾನೂನು ಉಲ್ಲಂಘನೆಯ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ತಿಳಿಸಿದರು.