ಕುಣಿಗಲ್ : ಲಾಡ್ಜ್ ನಲ್ಲಿ ಮಹಿಳೆ ಕೊಲೆ ಮಾಡಿ ಶರಣಾದ ವ್ಯಕ್ತಿ
ಕುಣಿಗಲ್ : ಮಹಿಳೆ ಒಬ್ಬಳನ್ನು ಕೊಲೆ ಮಾಡಿ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ಶನಿವಾರ ನಗರದಲ್ಲಿ ನಡೆದಿದೆ.
ಪಟ್ಟಣದ ದಿವ್ಯ ಲಾಡ್ಜ್ ನಲ್ಲಿ ಮಾಗಡಿ ತಾಲೂಕಿನ ತಾವರೆಕೆರೆಯವರು ಎನ್ನಲಾದ ಸುಮಾರು 25 ವಯೋಮಾನದ ಲಕ್ಷ್ಮಮ್ಮ ಕೊಲೆಯಾಗಿರುವ ಮಹಿಳೆ ಈಕೆಗೆ ಮೊದಲೇ ಮದುವೆಯಾಗಿ ಗಂಡನಿಂದ ದೂರ ಉಳಿದಿದ್ದಳು ಎನ್ನಲಾಗಿದೆ ಈಕೆಯನ್ನು ಕೊಲೆ ಮಾಡಿರುವ ವ್ಯಕ್ತಿ ದಾವಣಗೆರೆ ಮೂಲದ ಸುಮಾರು 22 ವಯೋಮಾನದ ಮಂಜುನಾಥ್ ಎನ್ನಲಾಗಿ ಇವರಿಬ್ಬರ ಮಧ್ಯೆ ಪ್ರೀತಿಯಿತ್ತು ಇವರಿಬ್ಬರೂ ಮಾಗಡಿ ತಾಲೂಕಿನ ತಾವರೆಕೆರೆ ಬಳಿಯ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ ಕೊಲೆ ಮಾಡಿರುವ ಮಂಜುನಾಥ ಲಕ್ಷ್ಮಮ್ಮನನ್ನು ಶುಕ್ರವಾರ ತಡರಾತ್ರಿ ದಿವ್ಯ ಲಾಡ್ಜ್ ಗೆ ಕರೆದುಕೊಂಡು ಒಂದು ಕೊಠಡಿಯನ್ನು ಬಾಡಿಗೆ ಪಡೆದು ತಂಗಿದ್ದಾನೆ
ರಾತ್ರಿಯೆಲ್ಲಾ ಇವರ ಮಧ್ಯೆ ಏನಾಯ್ತು ಕಾಣೆ ಮಂಜುನಾಥ ಬಿ ಎಂ ಲಕ್ಷ್ಮಮ್ಮ ನನ್ನ ವೇಲ್ ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಈತ ರಾತ್ರಿ ಎಲ್ಲಾ ಕೊಲೆಯಾದ ಲಕ್ಷ್ಮಮ್ಮನ ಜೊತೆಗೆ ಲಾಡ್ಜ್ ನ ಕೊಠಡಿಯಲ್ಲಿ ಕಾಲ ಕಳೆದು ಶನಿವಾರ ಬೆಳಿಗ್ಗೆ ಸುಮಾರು 6 ಗಂಟೆಯಲ್ಲಿ ಖುದ್ದು ಮಂಜುನಾಥನೇ ಕುಣಿಗಲ್ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯ ಡಿವೈಎಸ್ಪಿ ಲಕ್ಷ್ಮಿಕಾಂತ್, ನೂತನ ಇನ್ಸ್ಪೆಕ್ಟರ್ ನವೀನ್ ಗೌಡ, ಶ್ವಾನದಳ, ಬೆರಳಚ್ಚುತಜ್ಞರು, ಮಹಿಳೆ ಕೊಲೆಯಾದ ಲಾಡ್ಜ್ ಗೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಕಳೆದ ಎರಡು ಹಿಂದೆ ನಗರದಲ್ಲಿ ಹಾಡ ಹಾಗಲೇ ಲಾಂಗ್ ನಿಂದ ಹಲ್ಲೆ ನಡೆಸಿದ ಕೃತ್ಯ ಮಾಸುವ ಮನ್ನವೇ ಈ ಘಟನೆ ನೆಡೆದಿದ್ದು ನಗರದ ಜನತೆ ಭಯಭೀತರಾಗಿ ಆತಂಕ ಒಳಗಾಗಿದ್ದು , ಇತ್ತೀಚೆಗೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಸಾರ್ವಜನಿಕಕರು ಪೋಲಿಸ್ ಇಲಾಖೆಗೆ ಛಿಮಾರಿ ಹಾಕುವ ಮುನ್ನ ಎಚ್ಚೆತ್ತು ಕೊಳ್ಳಬೇಕಿದೆ.
ವರದಿ : ರೇಣುಕಾ ಪ್ರಸಾದ್ ಕುಣಿಗಲ್