ಮಧುಗಿರಿ : ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರು ಶುಕ್ರವಾರ ಸಂಜೆ ಧಿಡೀರ್ ಭೇಟಿ ನೀಡಿ ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ಡಯಾಲಿಸಿಸ್ ಘಟಕ್ಕೆ ಭೇಟಿ ನೀಡಿದ ಅವರು, ಕಟ್ಟಡದ ಮೇಲ್ಚಾವಣಿಯಲ್ಲಿ ಮಳೆಯ ನೀರು ಜಿನುಗಿ ಶಿಥಿಲವಾಗಿರುವುದನ್ನು ಕಂಡು ಮೇಲ್ಬಾಗದಲ್ಲಿ ಅನುಪಯುಕ್ತ ಗಿಡ ಮತ್ತು ಮರದ ಎಲೆಗಳು ತೆಗೆಯುವಂತೆ ಈ ಹಿಂದೆ ಕೆಡಿಪಿ ಸಭೆಯಲ್ಲಿ ಸೂಚಿಸಿದ್ದರೂ ಕೂಡ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಚಿವರು ಆಡಳಿತ ಮಂಡಳಿಗೆ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಅವರು ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳ ಬಗ್ಗೆ ಸಾರ್ವಜನಿಕ ರಿಂದ ಅನೇಕ ದೂರುಗಳು ಬಂದಿವೆ.
ಡಯಾಲಿಸಿಸ್ ಘಟಕ ಪರಿಶೀಲಿಸಿದ ಸಚಿವರು ಕಟ್ಟಡದ ಮೇಲ್ಚಾವಣಿಯಲ್ಲಿ ಮಳೆಯ ನೀರು ಸಂಗ್ರಹವಾಗಿ ಜಿನುಗುತ್ತಿದೆ. ಡಯಾಲಿಸಿಸ್ ಘಟಕದಲ್ಲಿರುವ ಮಂಚದ ಮೇಲೆ ಹಾಕಲಾಗಿದ್ದ ಹೊದಿಕೆಗಳು ಕೊಳಕಾಗಿವೆ ಇಂತಹ ಹೊದಿಕೆಗಳಿಂದ ಇತರೆ ರೋಗಿಗಳಿಗೆ ಸೊಂಕು ತಗಲುವುದಿಲ್ಲವೇ ಎಂದು ಪ್ರಶ್ನಿಸಿ ಕಾಲ ಕಾಲಕ್ಕೆ ಹೊದಿಕೆಗಳನ್ನು ಬದಲಾಯಿಸಿ ಎಂದು ಆಡಳಿತಾಧಿಕಾರಿ ಡಾ.ಮಹೇಶ್ ಸಿಂಗ್ ರವರಿಗೆ ಸೂಚಿಸಿದರು.
ಡಯಾಲಿಸಿಸ್ ಕೇಂದ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ನಿಮ್ಮ ಮನೆಗಳನ್ನು ಈ ರೀತಿ ಇಟ್ಟುಕೊಳ್ಳುತ್ತೀರಾ ಎಂದು ಆಸ್ಪತ್ರೆ ವೈದ್ಯ ಸಿಬ್ಬಂದಿ ವಿರುದ್ದ ಕೆಂಡಾಮಂಡಲರಾದರು.
ಇದೇ ರೀತಿ ಆಸ್ಪತ್ರೆಯನ್ನು ಇಟ್ಟುಕೊಂಡರೆ, ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.
ತುರ್ತು ಪರಿಸ್ಥಿತಿಯಲ್ಲಿ ಅಂಬುಲೈನ್ಸ್ ಗೆ ಕರೆ ಮಾಡಿದಾಗ ಸಂಬಂಧಪಟ್ಟ ಚಾಲಕರು ನಕಾರಾತ್ಮಕ ವಾಗಿ ಸಾರ್ವಜನಿಕ ರೊಂದಿಗೆ ವರ್ತಿಸುತ್ತಿದ್ದಾರೆಂಬ ದೂರುಗಳು ಬಂದಿದ್ದು , ಯಾವುದೇ ರೋಗಿಗಳು ಕರೆ ಮಾಡಿದ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಸೌಕರ್ಯ ಕಲ್ಪಿಸುವಂತೆ ಸೂಚಿಸಿದರು.
ಆಸ್ಪತ್ರೆ ಹಾಗೂ ಆವರಣದಲ್ಲಿ ಸ್ವಚ್ಚತೆ ಇಲ್ಲದೇ ರೋಗಿಗಳಿಗೆ ಮತ್ತಷ್ಟು ತೊಂದರೆಯಾಗುತ್ತಿದ್ದು
ಆಸ್ಪತ್ರೆಯ ಆವರಣದಲ್ಲಿ ಬೆಳೆದಿರುವ ಅನುಪಯುಕ್ತ ಗಿಡಗೆಂಟೆಗಳನ್ನು ತೆಗಿಸುವಂತೆ ಪುರಸಭೆಯ ಆರೋಗ್ಯ ನೀರಿಕ್ಷಕ ಬಾಲಾಜಿಗೆ ತಿಳಿಸಿ ಟೆಂಡರ್ ಪಡೆದಿರುವ ಗುತ್ತಿಗೆದಾರರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಆಡಳಿತಾಧಿಕಾರಿಗಳಿಗೆ ತಿಳಿಸಿ ಆಸ್ಪತ್ರೆಯ ಆವರಣದಲ್ಲಿರುವ ಅನಧಿಕೃತ ಪೆಟ್ಟಿಗೆ ಅಂಗಡಿಗಳನ್ನು ತಕ್ಷಣ ತೆರವುಗೊಳಿಸಿ ಆವರಣದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಆಸ್ಪತ್ರೆ ಗೆ ಬರುವ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಕಳೆದ ತಿಂಗಳು ನಡೆದ ಕೆಡಿಪಿ ಸಭೆಯಲ್ಲಿ ಸಾರ್ವಜನಿಕ ಆಸ್ಪತ್ರೆಯ ಸ್ವಚ್ಚತೆಯನ್ನು ಕಾಪಾಡುವಂತೆ ಆಡಳಿತಾಧಿಕಾರಿಗಳಿಗೆ ಸೂಚಿಸಿದ್ದರು ಸಹ ಯಾವುದೇ ಕ್ರಮ ಕೈಗೊಳ್ಳದೆ ಇರುವುದಕ್ಕೆ ಸಹಕಾರ ಸಚಿವ ಕೆ.ಎನ್ ರಾಜಣ್ಣ ಬೇಸರ ವ್ಯಕ್ತ ಪಡಿಸಿದರು.
ಆಸ್ಪತ್ರೆಗೆ ಚಿಕಿತ್ಸೆ ಗೆ ಬರುವ ರೋಗಿಗಳನ್ನು ಜಿಲ್ಲಾ ಆಸ್ಪತ್ರೆ ಗೆ ರವಾನಿಸುತ್ತಿದ್ದಾರೆ , ವೈದ್ಯರ ಕೊರತೆ ಇದೆ , ಶವ ಸಾಗಿಸಲು ಶವ ಪೆಟ್ಟಿಗೆಗಳು ಇರುವುದಿಲ್ಲ ಕೆಲ ಅಂಬುಲೈನ್ಸ್ ಚಾಲಕರು ಸಾರ್ವಜನಿಕರೊಂದಿಗೆ ನಕಾರಾತ್ಮಕ ವಾಗಿ ವರ್ತಿಸುತ್ತಿದ್ದಾರೆಂದು ಸಾರ್ವಜನಿಕರು ಸಚಿವರ ಬಳಿ ದೂರಿದರು.
ಈ ಸಂಧರ್ಭದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮಹೇಶ್ ಸಿಂಗ್ ,ವೈದ್ಯರಾದ ಡಾ. ಗಂಗಾಧರ್ , ಡಾ.ಶ್ರೀರಾಮಯ್ಯ , ಡಾ.ತನುಜ ,ಟಿ.ಎಚ್.ಒ ಡಾ.ರಮೇಶಬಾಬು, ಡಿವೈಎಸ್ ಪಿ ಕೆ.ಎಸ್.ವೆಂಕಟೇಶ್ ನಾಯ್ಡು , ಸಿಪಿಐ ಹನುಮಂತರಾಯಪ್ಪ , ಪಿಎಸ್ ಐ ವಿಜಯಕುಮಾರ್, ಕೆ.ಎಂ.ಎಫ್ ನಿರ್ದೇಶಕ ಎಂ.ಪಿ.ಕಾಂತರಾಜು, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ,ಸದಸ್ಯರಾದ ಮಂಜುನಾಥ್ ಆಚಾರ್ , ಲಾಲಾಪೇಟೆ ಮಂಜುನಾಥ್, ಮಾಜಿ ಸದಸ್ಯ ಸಾಧಿಕ್, ಮುಖಂಡರಾದ ಎಂ.ಎಸ್.ಮಲ್ಲಿಕಾರ್ಜುನಯ್ಯ , ಎಂ.ಜಿ.ಶ್ರೀನಿವಾಸ ಮೂರ್ತಿ, ಟಿ.ರಾಮಣ್ಣ , ಪಿ.ಸಿ.ಕೃಷ್ಣಾರೆಡ್ಡಿ , ಸಿದ್ದಾಪುರ ವೀರಣ್ಣ , ಕಿಶೋರ್ ಹಾಜರಿದ್ದರು.