ಕುಣಿಗಲ್ : ಲೋಕೋಪಯೋಗಿ ಅಧಿಕಾರಿಗಳ ನಿರ್ಲಕ್ಷದಿಂದ ತಾಲೂಕು ಕಚೇರಿಯ ಇನ್ನು ಕೆಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ ಎಂದು ತುಮಕೂರು ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಮಾರ್ಕೋನಹಳ್ಳಿ ಪ್ರವಾಸಿ ಮಂದಿರದ ಆವರಣದಲ್ಲಿ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳ ತಹಸಿಲ್ದಾರಗಳು ಹಾಗೂ ಕೆಲವು ಉಪ ವಿಭಾಗಾಧಿಕಾರಿಗಳು ಕುಣಿಗಲ್ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಿ ಇಲಾಕವಾರು ಪ್ರಗತಿಯನ್ನು ಕೇಳಿದ್ದಾರೆ ಈ ಸಂದರ್ಭದಲ್ಲಿ ಕುಣಿಗಲ್ ತಾಲೂಕು ಕಚೇರಿಯ ಕಟ್ಟಡ ಕಾಮಗಾರಿ ಪ್ರಾರಂಭವಾಗಿ ಸುಮಾರು ವರ್ಷಗಟ್ಟಲೆ ಕಳೆದರು ಲೋಕೋಪಯೋಗಿ ಅಧಿಕಾರಿಗಳ ನಿರ್ಲಕ್ಷದಿಂದ ಇನ್ನು ಹಲವಾರು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ ಅದರಲ್ಲೂ ತಾಲೂಕು ಕಚೇರಿಯಲ್ಲಿ ಲಿಫ್ಟ್ ಇಲ್ಲದೆ ವಯಸ್ಸಾದವರು ಮೆಟ್ಟಿಲನ್ನು ಏರುವುದಕ್ಕೆ ಸಾಧ್ಯವಾಗದೆ ತೆವಳುತ್ತ ಮೆಟ್ಟಿಲನ್ನು ಏರುತ್ತಿರುವುದನ್ನು ನಾನೇ ನೋಡಿದ್ದೇನೆ ಎಂದು ಪ್ರಶ್ನಿಸಿ ಬೇಗ ಲಿಫ್ಟ್ ಅಳವಡಿಸಿ, ಪೈಂಟ್ ಕೂಡ ಸರಿ ಇಲ್ಲ ಒಟ್ಟಾರೆ ತಾಲೂಕು ಕಚೇರಿ ಕಟ್ಟಡದ ಕಾಮಗಾರಿ ಕಳಪೆ ಕಾಮಗಾರಿ ಕಂಡಂಗೆ ಕಾಣುತ್ತಿದೆ ಇಲಾಖೆ ಹಿರಿಯ ಅಧಿಕಾರಿಗಳು ಪರಿಶೀಲಿಸಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಬೇಗ ಗುಣಮಟ್ಟದಲ್ಲಿ ಮುಗಿಸಬೇಕು, ಉಳಿದಿರುವ ಕೋರ್ಟ್ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ನಿರ್ವಹಿಸುವಂತೆ ಸಂಬಂಧಪಟ್ಟ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಇನ್ನು ತಾಲೂಕಿನಲ್ಲಿ ಅಂಗನವಾಡಿಗಳ ಕಟ್ಟಡ ಇಲ್ಲದೆ ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ ಎಂಬ ಮಾಹಿತಿ ಇದೆ ಶಿಶು ಅಭಿವೃದ್ಧಿ ಇಲಾಖೆಯವರು ಕಂದಾಯ ಇಲಾಖೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಂಗನವಾಡಿಗಳಿಗೆ ಜಾಗ ತೆಗೆದುಕೊಂಡು ಸುಸರ್ಜಿತವಾದ ಕಟ್ಟಡಗಳನ್ನು ನಿರ್ಮಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು ಹೀಗೆ ಕೃಷಿ,ತೋಟಗಾರಿಕೆ,ಪಶು, ರೇಷ್ಮೆ ಹಾಗೂ ಕಾರ್ಮಿಕ ಇಲಾಖೆ, ಅಧಿಕಾರಿಗಳು ಸಾರ್ವಜನಿಕರಿಗೆ ಸರ್ಕಾರದಿಂದ ಬರುವಂತಹ ಎಲ್ಲಾ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸುವಂತೆ ಸೂಚಿಸಿದರು ಹೀಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಒಳಗೊಂಡಂತೆ ಎಲ್ಲಾ ಇಲಾಖೆಗಳ ಪ್ರಗತಿಯನ್ನು ಕೇಳಿ ಕೆಲವು ಸಲಹೆ ಸೂಚನೆಗಳನ್ನು ನೀಡಿ ಗ್ರಾಮ ಲೆಕ್ಕಾಧಿಕಾರಿಗಳು ರಾಜಶ್ವನಿರೀಕ್ಷಕರು ಗ್ರಾಮಗಳಿಗೆ ಭೇಟಿ ನೀಡಿ ರೈತರ ಕುಂದು ಕೊರತೆಗಳನ್ನು ಕೇಳಬೇಕು ಮತ್ತು ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸವಿದ್ದು ಕೆಲಸ ನಿರ್ವಹಿಸಬೇಕು ಮಳೆಯಿಂದ ಮನೆ ಕಳೆದುಕೊಂಡವರಿಗೆ ಪುನರ್ವಸತಿ ಒದಗಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಜಿಪಿಎಸ್ ಮಾಡಬೇಕು ಎಂದ ಅವರು ಕಂದಾಯ ಇಲಾಖೆ ಅಧಿಕಾರಿಗಳು ಸುಖ ಸುಮ್ಮನೆ ರೈತರನ್ನು ಕಚೇರಿಗಳಿಗೆ ಅಲೆಸದಂತೆ ವೇಳೆಗೆ ಸರಿಯಾಗಿ ಅವರ ಕೆಲಸಗಳನ್ನು ಮಾಡಿಕೊಡುವಂತೆ ತಿಳಿಸಿದ ಅವರು ಸರ್ಕಾರದ ಗೃಹಲಕ್ಷ್ಮಿ ಯೋಜನೆ ನೊಂದಣಿ ಮಾಡಲು ಕುಣಿಗಲ್, ಕೊರಟಗೆರೆ, ತಾಲೂಕು ತುಂಬಾ ಹಿಂದೆ ಉಳಿದಿದೆ ಗೃಹಲಕ್ಷ್ಮಿ ಯೋಜನೆಯ ನೋಂದಣಿಯನ್ನು ತ್ವರಿತವಾಗಿ ಮುಗಿಸಲು ಕ್ರಮವಹಿಸುವಂತೆ ಸಂಬಂಧಪಟ್ಟ ತಹಸಿಲ್ದಾರ್ ಅವರಿಗೆ ಸೂಚಿಸಿದರು ಒಂದು ರೀತಿಯಲ್ಲಿ ಸಭೆ ಕಂದಾಯ ಇಲಾಖೆ ಮತ್ತು ಬೇರೆ ಇಲಾಖೆಗಳ ಸಮನ್ವಯ ಸಭೆ ಇದ್ದಂತೆ ಕಾಣುತ್ತಿತ್ತು ಮಿಕ್ಕಂತೆ ಹತ್ತು ಹಲವಾರು ಚರ್ಚೆಗಳು ನಡೆದವು ಎಂದು ಮೂಲಗಳಿಂದ ತಿಳಿದುಬಂದಿದೆ. ನಂತರ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳು ಮಾರ್ಕೋನಹಳ್ಳಿ ಜಲಾಶಯಕ್ಕೆ ತೆರಳಿ ಜಲಾಶಯ ವೀಕ್ಷಣೆ ಮಾಡಿ ಜಲಾಶಯದ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿಗಳು, ಜಿಲ್ಲಾ ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು, ಎಲ್ಲಾ ತಾಲೂಕುಗಳ ತಹಸಿಲ್ದಾರ್ಗಳು, ಕುಣಿಗಲ್ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ರೇಣುಕಾ ಪ್ರಸಾದ್ ಕುಣಿಗಲ್