ಕುಣಿಗಲ್ : ಹಾಡು ಹಗಲೇ ಗುಂಪೊಂದು ವ್ಯಕ್ತಿಯ ಮೇಲೆ ಲಾಂಗ್ ನಿಂದ ಹಲ್ಲೆ
ಕುಣಿಗಲ್ : ಹಾಡು ಹಗಲೇ ಗುಂಪೊಂದು ಒಬ್ಬ ವ್ಯಕ್ತಿಯ ಮೇಲೆ ಲಾಂಗ್ ನಿಂದ ಹಲ್ಲೆ ಮಾಡಿರುವ ಘಟನೆ ಗುರುವಾರ ಮಧ್ಯಾಹ್ನ ಜರುಗಿದೆ.
ಪಟ್ಟಣದ ಮಲ್ಲಘಟ್ಟದ ಹಳೆ ರಾಷ್ಟ್ರೀಯ ಹೆದ್ದಾರಿ 48ರ ಬಿ ಎಂ ರಸ್ತೆಯ ಎಲ್ಐಸಿ ಕಚೇರಿಯ ಮುಂಭಾಗ ಎಸ್ ಕೆ ಎನ್ ಬಾರ್ ಅಂಡ್ ರೆಸ್ಟೋರೆಂಟ್ ಸಮೀಪದಲ್ಲಿ ಇದ್ದ ಟೀ ಅಂಗಡಿಯವೊಂದರಲ್ಲಿ ಮೇಸ್ತ್ರಿ ಗೌಡನಪಾಳ್ಯದ ಜಗದೀಶ್ ಅಲಿಯಾಸ್ ಜಗ ಸ್ನೇಹಿತ ರೇಣುಕಾ, ಟೀ ಅಂಗಡಿಯಲ್ಲಿ ಟೀ ಕುಡಿದು ಕುಣಿಗಲ್ ಕಡೆ ನಡೆದುಕೊಂಡು ಹೋಗುವ ಸಂದರ್ಭದ ಮಧ್ಯಾಹ್ನದ ಸಮಯದಲ್ಲಿ ಸ್ಥಳಕ್ಕೆ ಬೈಕ್ ನಲ್ಲಿ ಬಂದ ತಾಲೂಕಿನ ಕೂತಾರಹಳ್ಳಿ ಗ್ರಾಮದ ಆಕಾಶ್, ಹುಚ್ಚ ಲಕ್ಕಯ್ಯನಪಾಳ್ಯದ ಚಿಕ್ಕಣ್ಣ ಮತ್ತು ಕುಣಿಗಲ್ ಪಟ್ಟಣದ ಆಶ್ರಯ ಕಾಲೋನಿಯ ಶ್ರೀನಿವಾಸ್ ಉರುಪ್ ಸೀನ ಇತರೆ ಇಬ್ಬರೂ ಸಹಚರರು ಜಗದೀಶನನ್ನು ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈದು ಬಳಿಕ ಆಕಾಶ್ ಎಂಬುವನು ಲಾಂಗ್ ನಿಂದ ಒಡೆದು ರಕ್ತ ಗಾಯ ಮಾಡಿದರು ತಕ್ಷಣ ಜನರು ಸ್ಥಳಕ್ಕೆ ಆಗಮಿಸಿದಾಗ ಇವರೆಲ್ಲರೂ ಬೈಕ್ ಹತ್ತಿಕೊಂಡು ಅಂಚೆಪಾಳ್ಯ ಕಡೆ ನಡೆದರು ಎಂದು ರೇಣುಕಾ ಬಿನ್ ರೇವಣ್ಣ ಎಂಬುವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದ್ದು ತೀವ್ರವಾಗಿ ಗಾಯಗೊಂಡಿದ್ದ ಜಗದೀಶನನ್ನು ಕುಣಿಗಲ್ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ನಾಗಮಂಗಲ ತಾಲೂಕಿನ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಈ ಸಂಬಂಧ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಘಟನೆ ನಡೆದಿರುವುದೆಲ್ಲ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ವರದಿ:ರೇಣುಕಾ ಪ್ರಸಾದ್