ಮಧುಗಿರಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ಡಾ.ವೀರೇಂದ್ರ ಹೆಗ್ಗಡೆಯವರ ವಿರುದ್ಧ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕೆಟ್ಟ ರೀತಿ ಮಾತನಾಡಿರುವುದು ಸರಿಯಲ್ಲ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಧಾರ್ಮಿಕ ಮುಖಂಡ ಡಾ.ಎಂ.ಜಿ. ಶ್ರೀನಿವಾಸ ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಐತಿಹಾಸಿಕ ಶ್ರೀ ವೆಂಕಟರಮಣಸ್ವಾಮಿ ದೇವಾಲಯ ದಲ್ಲಿ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪುಣ್ಯ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜು ನಾಥಸ್ವಾಮಿಗೆ ರಾಜ್ಯದಾಧ್ಯಂತ ಭಕ್ತರು ಇದ್ದು, ಡಾ.ವೀರೇಂದ್ರ ಹೆಗ್ಗಡೆಯವರನ್ನು ಪೂಜ್ಯನೀಯ ಸ್ಥಾನದಲ್ಲಿ ನೋಡು ತ್ತೇವೆ. ಅಂತಹ ಪೂಜ್ಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಡಾ.ವೀರೇಂದ್ರ ಹೆಗ್ಗಡೆ ಯವರು ರಾಜ್ಯಾದ್ಯಂತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತೆರೆದು ಹಳ್ಳಿಗಾಡಿನ ಹೆಣ್ಣುಮಕ್ಕಳಿಗೆ ಸಾಲ ಸೌಲಭ್ಯ ಕಲ್ಪಿಸಿ ಆರ್ಥಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳು ವಂತೆ ಮಾಡಿರುವುದಲ್ಲದೆ ಮದ್ಯವರ್ಜನ ಶಿಬಿರಗಳನ್ನು ಮಾಡಿ ರಾಜ್ಯದ ಹಲವು ಬಡ ಕುಟುಂಬಗಳಿಗೆ ದಾರಿ ದೀಪವಾಗಿದ್ದಾರೆ. ಆದ ಕಾರಣ ಹೆಗ್ಗಡೆಯವರು ಎಂ ದೆಂದಿಗೂ ಪೂಜ್ಯರೆ. ಇದುವರೆಗೂ ಅವರ ಮೇಲೆ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲ. ಭಗವಂತನ ಆಶೀರ್ವಾದದಿಂದ ಸರ್ವ ಜನರ ಏಳಿಗೆಗೆ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳನ್ನು ಅಚ್ಚುಕಟ್ಟಾಗಿ ಅರ್ಥಪೂರ್ಣವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಹೆಗ್ಗಡೆಯವರ ಮೇಲೆ ಸುಖಾ ಸುಮ್ಮನೆ ಆರೋಪ ಮಾಡುವುದು ಸರಿ ಯಲ್ಲ. ವಿಚಾರಣೆ ಹಂತದಲ್ಲಿರುವಾಗ ಹೆಗ್ಗಡೆ ಅವರನ್ನು ಎಳೆದು ತರುವುದು ತಪ್ಪು ಎಂದರು.
ಪುರಸಭೆ ಸದಸ್ಯರಾದ ಲಾಲಪೇಟೆ ಮಂಜುನಾಥ್, ಮಂಜು ನಾಥ್ ಆಚಾರ್, ಮಾಜಿ ಸದಸ್ಯ ಅರ್ .ಎಲ್.ಎಸ್.ರಮೇಶ್ ,ಮುಖಂಡ ತುಂಗೋಟಿ ರಾಮಣ್ಣ,ಕಸಾಪ ತಾಲೂಕು ಘಟಕದ ಅಧ್ಯಕ್ಷೆ ಸಹನ ನಾಗೇಶ್,ಕನ್ನಡ ಪರ ಸಂಘಟನೆಯ ತಿಮ್ಮರಾಜು, ಅರ್ಚಕ ಅನಂತಭಟ್ಟರು, ಕೀಶೊರ್,ದೋಲಿಬಾಬು ಅನೇಕರಿದ್ದರು.