ಮಧುಗಿರಿ : ಶಾಸಕ ವೀರಭದ್ರಯ್ಯನವರು ವೀರಶೈವ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕಳೆದ 5 ವರ್ಷದಿಂದ ಸಮಾಜಕ್ಕೆ ವೀರಭದ್ರಯ್ಯ ನವರ ಕೊಡುಗೆ ಏನು ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಎನ್. ಚಂದ್ರಮೌಳಿ ತಿಳಿಸಿದ್ದಾರೆ.
ಪಟ್ಟಣದ ಎಂ.ಎನ್.ಕೆ ಸಮುದಾಯ ಭವನದಲ್ಲಿ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕರೇ ನಿಮಗೆ ಮಧುಗಿರಿ ತಾಲೂಕಿನ ಗಡಿ ಗೊತ್ತಿದೆಯಾ, ಸಮಾಜದ 4 ಜನರನ್ನು ಕೂರಿಸಿಕೊಂಡು ಜೆಡಿಎಸ್ ಬೆಂಬಲಿಸುತ್ತೇವೆ ಎಂದು ಹೇಳಿಕೆ ನೀಡಿರುವುದು ಅಪರಾದ. ನಿಮಗೆ ಸಮಾಜವನ್ನು ಉಪಯೋಗಿಸಲು ಯಾವ ಹಕ್ಕಿದೆ. ವೈಯುಕ್ತಿಕವಾಗಿ ನಿಮ್ಮ ಪರ ಪ್ರಚಾರ ಮಾಡಿಕೊಳ್ಳಲಿ ಬೇಡ ಎನ್ನುವುದಿಲ್ಲ. ಅದು ಬಿಟ್ಟು ಸಮಾಜ ನಿಮ್ಮ ಪರ ಇದೆ ಎಂದು ಸಮಾಜದ ಹೆಸರು ಹೇಳಿಕೊಂಡು ಬಿಂಬಿಸಿಕೊಳ್ಳಲು ಹೊರಟಿರುವುದು ಸರಿಯಲ್ಲ. ನಾವೆಲ್ಲ ಕಾಂಗ್ರೆಸ್ ಬೆಂಬಲಿಸುತ್ತೇವೆ. ಕೆ.ಎನ್. ರಾಜಣ್ಣನವರಿಂದ ವೀರಶೈವ ಸಮಾಜಕ್ಕೆ ಬಹಳಷ್ಟು ಅನುಕೂಲವಾಗಿದೆ. ಆದ್ದರಿಂದ ನಾವು ಕೆ.ಎನ್. ರಾಜಣ್ಣನವರನ್ನು ಬೆಂಬಲಿಸುತ್ತೇವೆ ಎಂದರು.
ಸಮುದಾಯದ ಮುಖಂಡ ಎಂ.ಎಸ್. ಮಲ್ಲಿಕಾರ್ಜುನಯ್ಯ ಮಾತನಾಡಿ ವೀರಶೈವ ಸಮಾಜದಿಂದ ಜೆಡಿಎಸ್ ಗೆ ಮತ ನೀಡಲು ತೀರ್ಮಾನಿಸಲಾಗಿದೆ ಎಂದು ಕೆಲವರು ಹೇಳಿಕೆ ನೀಡಿದ್ದು,
ಸಮಾಜ ಜೆಡಿಎಸ್ ಬೆಂಬಲಿಸಬೇಕು ಎಂದು ಸಮಾಜವನ್ನು ಬಳಸಿಕೊಂಡು ಹೇಳಿಕೆ ನೀಡಿರುವುದು ಸರಿಯಲ್ಲ. ಕೆ.ಎನ್.
ರಾಜಣ್ಣನವರಿಂದಲೇ ನಮ್ಮ ಸಮಾಜಕ್ಕೆ ಹೆಚ್ಚಿನ ಅನುಕೂಲವಾಗಿದೆ. ಅವರು ಸಮುದಾಯಕ್ಕೆ 10 ಲಕ್ಷ ಅನುದಾನ ನೀಡಿದ್ದಾರೆ. ಬಹಳಷ್ಟು
ಹೆಚ್ಚಿನ ಮನೆಗಳು ಆಗಿವೆ, ಆದರೆ ವೀರಭದ್ರಯ್ಯ ನವರ ಕಾಲದಲ್ಲಿ 10 ಮನೆಯೂ ಸಹ ಸಮುದಾಯಕ್ಕೆ ಸಿಕ್ಕಿಲ್ಲ. ವೀರಶೈವ ಅಭಿವೃದ್ದಿ ನಿಗಮದಿಂದ 10 ಬೋರ್ ವೆಲ್ ಮಂಜೂರಾಗಿದ್ದು, ಶಾಸಕರ ಅನುದಾನದಿಂದ ಆಗಿಲ್ಲ. ಜಿಲ್ಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಒಂದೇ ಒಂದು ಕ್ಷೇತ್ರವನ್ನೂ ಜೆಡಿಎಸ್ ನವರು ಸಮುದಾಯಕ್ಕೆ ಕೊಟ್ಟಿಲ್ಲ. ವೀರಶೈವ ಸಮುದಾಯವು ಅಧಿಕೃತವಾಗಿ ರಾಜಣ್ಣನವರಿಗೆ ಮತ ನೀಡಲು ಮನವಿ ಮಾಡಲಾಗಿದೆ ಎಂದರು.
ಸಮುದಾಯದ ಮುಖಂಡ, ವಕೀಲ ಪಂಚಾಕ್ಷರಯ್ಯ ಮಾತನಾಡಿ ಶಾಸಕ ವೀರಭದ್ರಯ್ಯ ನವರು ನಮ್ಮ ಸಮುದಾಯವನ್ನು ತುಳಿದವರೆ ಹೊರತು ಬೆಳಿಸಿದವರಲ್ಲ. ಸಮುದಾಯದವರು ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾಗ ಅದನ್ನು ತಪ್ಪಿಸಿದವರು ಇದೇ ವೀರಭದ್ರಯ್ಯ. ಕೆ.ಎನ್. ರಾಜಣ್ಣನವರು ಕರೋನಾ ಸಂಕಷ್ಟದಲ್ಲಿ ಕ್ಷೇತ್ರದ ಜನರ ಕಷ್ಟಕ್ಕೆ ಮಿಡಿದಿದ್ದು, ಕ್ಷೇತ್ರದ ಅಭಿವೃದ್ದಿಗೆ ಬಹಳಷ್ಟು ಶ್ರಮಿಸಿದ್ದಾರೆ. ವೀರಭದ್ರಯ್ಯ ನವರ ಕಾಲದಲ್ಲಿ ಏನು ಅಭಿವೃದ್ಧಿ ಯಾಗಿದೆ ಎಂಬುದು ಜನತೆಗೆ ಗೊತ್ತಿದೆ. ಕ್ಷೇತ್ರದ ಅಭಿವೃದ್ಧಿ ರಾಜಣ್ಣನವರಿಂದ ಮಾತ್ರ ಸಾದ್ಯ.
ಸಮಾಜಕ್ಕೆ ಅವರ ಕೊಡುಗೆ ಶೂನ್ಯ. ನಮ್ಮ ಸಮುದಾಯ ರಾಜಣ್ಣನವರನ್ನು ಬೆಂಬಲಿಸಲಿದೆ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ, ವಕೀಲರಾದ ಪಂಚಾಕ್ಷರಯ್ಯ, ವೀರಶೈವ ಲಿಂಗಾಯಿತ ಸಮಾಜದ ಮುಖಂಡರುಗಳಾದ ಬಸವರಾಜು, ಎಸ್. ಎನ್. ರಾಜು, ವಿಜಯ್ ಕುಮಾರ್, ಗೀತಾ ನಾಗರಾಜು, ದಾಕ್ಷಾಯಿಣಿ, ಪೋಸ್ಟ್ ಪುಟ್ಟಯ್ಯ ಇತರರಿದ್ದರು.