ಜಿಲ್ಲೆತುಮಕೂರುತುಮಕೂರು ಗ್ರಾಮಾಂತರರಾಜಕೀಯರಾಜ್ಯ

ಕೋವಿಡ್ ಸಂಧರ್ಭದಲ್ಲಿ ಜನರ ಪ್ರಾಣ ಉಳಿಸಿದ ಡಿ.ಸಿ.ಗೌರಿಶಂಕರ್ ಗೆಲ್ಲಿಸಿ : ಹೆಚ್.ಡಿ.ಕುಮಾರಸ್ವಾಮಿ

ಹೆಬ್ಬೂರಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಬೃಹತ್ ರೋಡ್ ಶೋ

ತುಮಕೂರು : ಗ್ರಾಮಾಂತರ ಜೆಡಿಎಸ್ ಅಭ್ಯರ್ಥಿ ಡಿ ಸಿ ಗೌರಿ ಶಂಕರ್ ಅವರನ್ನು ನೀವು ಬಹುಮತದಿಂದ ಗೆಲ್ಲಿಸಿ ನಾನು ಅವರನ್ನು ಮಂತ್ರಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭರವಸೆ ನೀಡಿದರು.

ಅವರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಅಭ್ಯರ್ಥಿ ಡಿ.ಸಿ.ಗೌರಿ ಶಂಕರ್ ಪರ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬೃಹತ್ ರೋಡ್ ಶೋ ನಡೆಸಿದರು.

 ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಜೆಡಿಎಸ್ ಅಭ್ಯರ್ಥಿ ಡಿ ಸಿ ಗೌರಿಶಂಕರ್ ಜನಾನುರಾಗಿ,ನೊಂದವರು,ಬಡವರು,ಅಸಹಾಯಕರ ಕಣ್ಣೀರು ಒರೆಸಿದ್ದಾರೆ,ಕೋವಿಡ್ ಸಂಧರ್ಭದಲ್ಲಿ ತಮ್ಮ ಜೀವನದ ಹಂಗು ತೊರೆದು ಕ್ಷೇತ್ರದ ಜನರ ಪ್ರಾಣ ಉಳಿಸಿದ್ದಾರೆ, ಈ ಭಾರಿ ನೀವು ಬಹುಮತದಿಂದ ಅವರನ್ನು ಗೆಲ್ಲಿಸಿ, ನಾನು ಮಂತ್ರಿ ಮಾಡುತ್ತೇನೆ ಎಂದು ವಾಗ್ದಾನ ನೀಡಿದರು.
ನಾಡಿನ ಬಡವರ, ರೈತರ,ಮಹಿಳೆಯರ,ನೊಂದವರ,ಅಸಹಾಯಕರು ಹಾಗೂ ಕನ್ನಡ ನಾಡಿನ ಬಗ್ಗೆ ಜೆಡಿಎಸ್ ಪಕ್ಷ ದ್ವನಿ ಎತ್ತಿದೆ, ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡಲು ರಾಷ್ಟ್ರೀಯ ಪಕ್ಷಗಳಿಗೆ ಯಾವುದೇ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಗ್ರಾಮಾಂತರ ಭಾಗದಲ್ಲಿ ಗೌರಿಶಂಕರ್ ಮಾಡಿರುವ ಅಭಿವೃದ್ಧಿಯ ಕಾರ್ಯಗಳೇ ಅವರಿಗೆ ಶ್ರೀ ರಕ್ಷೆ ಆಗಿವೆ,ಅವರು ಮತ್ತೊಮ್ಮೆ ಶಾಸಕರಾಗಿ ಗೆದ್ದು ಬರುವುದರಲ್ಲಿ ಸಂಶಯವಿಲ್ಲ ಈ ಭಾಗದ ಜನರು ಅವರನ್ನು ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲಿಸಿಕೊಂಡು ಬರುವ ವಿಶ್ವಾಸ ನನಗಿದೆ ಎಂದರು.

ಕೋವಿಡ್ ಸಮಯದಲ್ಲಿ ಮನೆಯಲ್ಲಿ ಕೂರದೆ ಜನರ ಕಷ್ಟ ಗಳಿಗೆ ಸ್ಪಂದಿಸಿ, ನಿರಂತರ ಜನರ ಸೇವೆ ಮಾಡಿದ್ದಾರೆ ಅವರ ಸೇವೆಯ ಋಣ ತೀರಿಸುವ ಭಾಗ್ಯ ಇದೀಗ ನಿಮ್ಮ ಮುಂದಿದೆ , ಯಾವುದೇ ಆಮಿಷ ಮತ್ತು ಸುಳ್ಳು ವದಂತಿಗಳಿಗೆ ಜನ ಕಿವಿ ಕೊಡದೆ ಗೌರಿಶಂಕರ್ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು ಎಂದರು.
ಜೆಡಿಎಸ್ ಅಭ್ಯರ್ಥಿ ಡಿ ಸಿ ಗೌರಿಶಂಕರ್ ಮಾತನಾಡುತ್ತಾ ನಾನು ಈ ಭಾಗದಲ್ಲಿ ಮಾಡಿರುವ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇನೆ ದಯಮಾಡಿ ನನಗೆ ಮತದಾನ ಮಾಡುವುದರ ಮೂಲಕ ನಿಮ್ಮಗಳ ಸೇವೆ ಮಾಡುವ ಕೂಲಿ ನೀಡಿ ಎಂದು ಮತಯಾಚನೆ ಮಾಡಿದರು.
ಈ ಭಾಗದ ಮನೆ ಮಗನಾಗಿ ನಾನು ಮಾಡಿರುವ ಕೆಲಸಗಳು ನಿಮಗೆ ತೃಪ್ತಿ ತಂದಿದೆ ಎಂದು ಭಾವಿಸಿದ್ದೇನೆ ಹಾಗೊಂಡು ವೇಳೆ ನನ್ನಿಂದ ತಿಳಿಯದೇ ಏನಾದರೂ ತಪ್ಪು ಆಗಿದ್ದಾರೆ ನಿಮ್ಮ ಮನೆ ಮಗನನ್ನು ಕ್ಷಮಿಸಿ ಮತ್ತೊಮ್ಮೆ ನಿಮ್ಮಗಳ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು.
ಜೆಡಿಎಸ್ ಮುಖಂಡ ಷಫಿ ಅಹಮದ್ ಮಾತನಾಡಿ ಈ ಭಾಗದ ಎಲ್ಲಾ ನನ್ನ ಅಲ್ಪಸಂಖ್ಯಾತ ಮತ್ತು ಮುಸ್ಲಿಂ ಬಾಂಧವರು ಜೆಡಿಎಸ್ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತು ಗೌರಿಶಂಕರ್ ಅವರನ್ನು ಗೆಲ್ಲಿಸಿಕೊಂಡು ಬರಬೇಕು ಅವರು ಏನೆಲ್ಲಾ ಸೇವೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಅದನ್ನು ನೀವು ನೋಡಿದ್ದೀರಿ ಈ ಭಾರಿಯು ಅವರಿಗೆ ಅವಕಾಶ ಕೊಟ್ಟು ಮತ್ತಷ್ಟು ಶಕ್ತಿ ತುಂಬಿ ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ನಾವು ಗೌರಿಶಂಕರ್ ಅವರಿಗೆ ಮತ ಹಾಕಿ ಗೆಲ್ಲಿಸಿಕೊಂಡು ಬರೋಣ ಎಂದು ಕರೆ ಕೊಟ್ಟರು.

ಬೃಹತ್ ರೋಡ್ ಷೋ ಕಾರ್ಯಕ್ರಮದಲ್ಲಿ 20000 ಆಧಿಕ ಜೆಡಿಎಸ್ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಭಾಗವಹಿಸಿದ್ದರು. ಭಾಗವಹಿಸಿದ್ದರು.
ಬೃಹತ್ ರೋಡ್ ಶೋ ಕಾರ್ಯಕ್ರಮದಲ್ಲಿ ಚಿಕ್ಕಣ್ಣ ಸ್ವಾಮಿ ದೇವಾಲಯದ ಅರ್ಚಕ ಪಾಪಣ್ಣ ಸ್ವಾಮಿ,ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಜಿ ಪಾಲನೇತ್ರಯ್ಯ,ಜೆಡಿಎಸ್ ಯುವಮೋರ್ಚಾ ಅಧ್ಯಕ್ಷ ಹಿರೇಹಳ್ಳಿ ಮಹೇಶ್, ಬೆಳಗುಂಬ ವೆಂಕಟೇಶ್, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಹಾಲನೂರು ಅನಂತ್,ಬೆಳಗುಂಬ ಜಿಲ್ಲಾ ಪಂಚಾಯ್ತಿ ಉಸ್ತುವಾರಿ ಎನ್ ಆರ್ ಹರೀಶ್, ಸೇರಿದಂತೆ ಹಲವಾರು ಜೆಡಿಎಸ್ ಮುಖಂಡರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker