ಜಿಲ್ಲೆತುಮಕೂರುತುಮಕೂರು ಗ್ರಾಮಾಂತರರಾಜಕೀಯ

ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲುವು : ಎಸ್.ಪಿ.ಮುದ್ದಹನುಮೇಗೌಡ

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್,ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ

ತುಮಕೂರು : ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದ್ದು, ಜಿಲ್ಲೆಯ 11 ಕ್ಷೇತ್ರಗಳಲ್ಲಿ ತುಮಕೂರು ಗ್ರಾಮಾಂತರವೂ ಸೇರಿದಂತೆ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆದ್ದು ಬರಲಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರು ತಿಳಿಸಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಚೇರಿ ಶಕ್ತಿಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯದಲ್ಲಿ ಬಿಜೆಪಿ ಅಲೆ ಇದೆ.ಈ ಹಿಂದಿನ ಚುನಾವಣೆಗಳಿಗಿಂತಲೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಸ್ವಾತಂತ್ರವಾಗಿ ಅಧಿಕಾರ ನಡೆಸಲಿದೆ ಎಂದರು.
ರಾಜ್ಯದ ಜನತೆಗೆ ದೇಶದ ಒಬ್ಬ ಪ್ರಾಮಾಣಿಕ ಮತ್ತು ದಕ್ಷ ವ್ಯಕ್ತಿಯ ಕೈಯಲ್ಲಿದೆ.ಹಾಗಾಗಿಯೇ ನಾವು ಸುಭದ್ರ ಮತ್ತು ಸುರಕ್ಷಿತವಾಗಿದ್ದೇವೆ ಎಂಬುದು ಗೊತ್ತಿದೆ.ವಿಶ್ವದ ದೊಡ್ಡಣ್ಣ ಎಂದು ಕರೆಯಿಸಿಕೊಳ್ಳುವ ಅಮೇರಿಕಾ ಸಹ ಇಂದು ಮೋದಿ ಅವರ ಸಲಹೆ, ಸಹಕಾರವನ್ನು ಕೇಳುವಂತಹ ಸ್ಥಿತಿಗೆ ತಲುಪಿದೆ.ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ.ಭಾರತದ ಬೆಳವಣಿಗೆಯನ್ನು ಗಮನಿಸುತ್ತಿದೆ.ಪ್ರಧಾನಿ ನರೇಂದ್ರಮೋದಿ ಶ್ರೀಮಂತರಲ್ಲದೆ ಬಡ, ಮಧ್ಯಮ ವರ್ಗದವರಿಗೂ ಅನುಕೂಲವಾಗುವಂತಹ ಅನೇಕ ಯೋಜನೆಗಳನ್ನು ನೀಡಿದ್ದಾರೆ.ಹಾಗಾಗಿ ಜನರು ಬಿಜೆಪಿಗೆ ಈ ಬಾರಿ ಹೆಚ್ಚಿನ ಮತ ನೀಡಲಿದ್ದಾರೆ ಎಂದರು.
ತುಮಕೂರು ಗ್ರಾಮಾಂತರ ಕ್ಷೇತ್ರ ನನಗೆ ಹಳೆಯ ಪರಿಚಯ. ಈ ಭಾಗದಿಂದ ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅಲ್ಲದೆ ಸಂಸದನಾಗಿಯೂ ಕೆಲಸ ಮಾಡಿದ್ದೇನೆ. ಹಾಗಾಗಿ ನನ್ನ ಪರಿಚಿತರು, ಹಿತೈಷಿಗಳು ಬಿಜೆಪಿ ಸೇರುತಿದ್ದಾರೆ. ಇಂದು ಸಹ ನೂರಾರು ಜನರು ಕಾಂಗ್ರೆಸ್,ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿ ಸೇರುತಿದ್ದಾರೆ.ಮುಂದೆಯೂ ಸೇರಲಿದ್ದಾರೆ.ಗ್ರಾಮಾಂತರದಲ್ಲಿ ಬಿಜೆಪಿ ಮತ್ತಷ್ಟು ಬಲಗೊಳ್ಳಲಿದ್ದು,ಬಿ.ಸುರೇಶಗೌಡರ ಗೆಲುವು ಖಚಿತ ಎಂದು ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು.
ಮಾಜಿ ಶಾಸಕ ಬಿ.ಸುರೇಶಗೌಡ ಮಾತನಾಡಿ, ಹಾಲಿ ಶಾಸಕರು ಗೆಲುವು ಸಾಧಿಸಿರುವುದು ನಕಲಿ ಬಾಂಡ್‌ಗಳನ್ನು ಹಂಚಿ ಮತ್ತು ಕ್ಷೇತ್ರದ ವಿದ್ಯಾವಂತ ಯುವಕರಿಗೆ ಇನ್ನಿಲ್ಲದ ಆಸೆ,ಆಕಾಂಕ್ಷೆಗಳನ್ನು ತೋರಿಸಿ,ಈಗಾಗಲೇ ಸದರಿ ವಿಚಾರವಾಗಿ ನ್ಯಾಯಾಲಯದಲ್ಲಿ ವಾದ ವಿವಾದ ಮುಗಿದು,ತೀರ್ಪು ಪ್ರಕಟವಾಗಲಿದೆ.ಹಾಲಿ ಶಾಸಕರು ಸುಳ್ಳು ಭರವಸೆಗಳನ್ನು ನಂಬಿ ಅವರೊಂದಿಗೆ ಇದ್ದ ಬಹುತೇಕ ಮುಖಂಡರು ಬಿಜೆಪಿ ಸೇರಿದ್ದಾರೆ.ಮುಂದೆಯೂ ಕೆಲವರು ಸೇರಲಿದ್ದಾರೆ.ಅಲ್ಲದೆ ಈ ಭಾಗದಲ್ಲಿ ಎರಡು ಬಾರಿ ಶಾಸಕರಾಗಿ,ಐದು ವರ್ಷ ಸಂಸದರಾಗಿ,10 ವರ್ಷಗಳ ಕಾಲ ಒಂದು ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿ,ಅಪಾರ ಅಭಿಮಾನಿ ಗಳನ್ನು ಹೊಂದಿದ್ದಾರೆ.ಅವರು ಪಕ್ಷಕ್ಕೆ ಬಂದಿರುವುದು ಮತ್ತಷ್ಟು ಬಲ ಬಂದಿದೆ.ಇದು ನನ್ನ ಗೆಲುವಿಗೆ ಸಹಕಾರಿ ಯಾಗಲಿದೆ ಎಂದರು.

ಇದೇ ವೇಳೆ ಕಾಂಗ್ರೆಸ್ ಪಕ್ಷದ ತುಮಕೂರು ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ವಿಜಯಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕಸ್ವಾಮಿ,ಎಪಿಎಂಸಿ ಮಾಜಿ ನಿರ್ದೇಶಕ ನರಸೇಗೌಡ,ಬೋರೆಗೌಡರು ಗ್ರಾಮ ಪಂಚಾಯತ್ ಸದಸ್ಯರು,ದೊಡ್ಡಯ್ಯ ಶಾಮಿಯಾನ ಮಾಲಂಗಿ,ಬಾಲಕೃಷ್ಣ ಗೊಲ್ಲಹಳ್ಳಿ,ರೇವಯ್ಯ ಹೆಬ್ಬೂರು, ಮುರುಡೆಗೌಡ ದೊಮ್ಮನಕುಪ್ಪೆ,ನಾಗರಾಜು ಪೊನ್ನಸಂದ್ರ ,ಬಸವರಾಜು ಹೆಬ್ಬೂರು,ಗಂಗಣ್ಣ ಕಂಭಾತ್ತನಹಳ್ಳಿ, ಶಿವಕುಮಾರ್ ಗೌರಿಪುರ,ನಾಗರಾಜು ಕಂಭತ್ತನಹಳ್ಳಿ,ಪುನೀತ್ ಹೆಬ್ಬೂರು ,ರಘು ಗರಡಕುಪ್ಪೆ,ಸುರೇಶ್ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಹೆಬ್ಬೂರು, ರಾಮಕೃಷ್ಣಪ್ಪ, ಎಸ್.ಎನ್.ಪಾಳ್ಯ, ಹೆಬ್ಬೂರು ,ಮುನಿಯಪ್ಪ ತಿಮ್ಮಸಂದ್ರ,ದಿನೇಶ್ ತಿಮ್ಮಸಂದ್ರ,ಭಾಷಸಾಬ್ ಕೆ.ಎಸ್.ಆರ್.ಟಿ.ಸಿ.,ಹನುಮಂತರಾಯಪ್ಪ ಮಾಜಿ ಸೈನಿಕ, ಮನೋಜ್ ಹೆಬ್ಬೂರು, ರೇವಯ್ಯಾ ಹೆಬ್ಬೂರು,ವೆಂಕಟೇಶ್ ಹೆಬ್ಬೂರು,ಗಾರೆ ಬಸವಯ್ಯ ಮಾಜಿ ಗ್ರಾಮ ಪಂಚಾಯತ್ ಸದಸ್ಯರು,ಚಿಕ್ಕಸ್ವಾಮಿ ಹೆಬ್ಬೂರು,ರವಿ ಹೆಬ್ಬೂರು ಸೇರಿದಂತೆ ಅನೇಕ ಮುಖಂಡರು ಕಾಂಗ್ರೆಸ್ ಪಕ್ಷ ತ್ಯಜಿಸಿ,ಅಧಿಕೃತವಾಗಿ ನಮ್ಮ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker