ಕುಣಿಗಲ್ : ನೀರಾವರಿ ತಜ್ಞರಾಗಿರುವ ಕುಣಿಗಲ್ ಶಾಸಕ, ಬೆಂಗಳೂರು ಗ್ರಾಮಾಂತರ ಸಂಸದ, ಹಾಗೂ ಕೆಪಿಸಿಸಿ ಅಧ್ಯಕ್ಷರು ತಾಲೂಕಿನ ಎಲ್ಲಾ ಸಭೆ ಸಮಾರಂಭಗಳಲ್ಲೂ ಅವೈಜ್ಞಾನಿಕ ಬೋಗಸ್ ಯೋಜನೆಯದ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯ ಬಗ್ಗೆ ಜನರನ್ನು ದಾರಿ ತಪ್ಪಿಸುತ್ತ ಮುಗ್ಧ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ ಎಂದು ಮಾಜಿ ಸಂಸದ ಹಾಗೂ ಬಿಜೆಪಿ ಮುಖಂಡ ಎಸ್ ಪಿ ಮುದ್ದಹನುಮೇಗೌಡ ಕಟುವಾಗಿ ಟೀಕಿಸಿದ್ದಾರೆ.
ತಾಲೂಕಿನ ಬಿಜೆಪಿ ಮುಖಂಡ ಎಸ್,ಪಿ,ಎಂ, ರವರು ಹೆಬ್ಬೂರಿನ ತಮ್ಮ ಫಾರಂ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕ ರಂಗನಾಥ್, ಸಂಸದ ಡಿಕೆ ಸುರೇಶ್, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್, ತಾಲೂಕಿನ ಕಾಂಗ್ರೆಸ್ ಪಕ್ಷದ ಎಲ್ಲಾ ಸಭೆ ಸಮಾರಂಭಗಳಲ್ಲಿ ತಾಲೂಕಿನ ಭೋಗಸ್ ಯೋಜನೆಯಾದ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ಮುಂದಿಟ್ಟುಕೊಂಡು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಈ ಲಿಂಕ್ ಕೆನಾಲ್ ಯೋಜನೆಯಿಂದ ಕುಣಿಗಲ್ ತಾಲೂಕಿಗೆ ಯಾವ ಪ್ರಯೋಜನವೂ ಇಲ್ಲ ಈಗಾಗಲೇ ಸರ್ಕಾರ ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಬದಲಿಗೆ ಆ ಹಣದಿಂದ ಹೇಮಾವತಿ ನಾಲೆಯನ್ನು ಆಧುನಿಕರಣ ಗೊಳಿಸಿ ಕುಣಿಗಲ್ ಕೆರೆಗೆ ಸರಾಗವಾಗಿ ನೀರು ಹರಿಯುವಂತೆ ಮಾಡಲಾಗುತ್ತಿದೆ ಡಿಕೆ ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ತಮ್ಮ ಕುಟುಂಬದ ರಾಜಕೀಯ ಒಳಿತಿಗೋಸ್ಕರ ನೀರಾವರಿ ತಜ್ಞರಂತೆ ಕೇವಲ ಮೂರು ತಿಂಗಳಲ್ಲಿ ಯಾವ ತಜ್ಞ ಇಂಜಿನಿಯರಿಗಳ ಸಲಹೆ ಸೂಚನೆಗಳನ್ನು ಕೇಳದೆ ತರಾತುರಿಯಲ್ಲಿ ಹೇಮಾವತಿ ಲಿಂಕ್ ಕೆನಾಲ್ ಯೋಜನೆಗೆ ಹಣ ಮಂಜೂರಾತಿ ನೀಡಿದರು ಆದರೆ ಈ ಯೋಜನೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರಿಗೆ ಸ್ವಲ್ಪವು ಸಮಾಧಾನ ಇರಲಿಲ್ಲ, ಇವರ ರಾಜಕೀಯ ಸ್ವಾರ್ಥ ಸಾಧನೆಗೋಸ್ಕರ ಯೋಜನೆ ಮಂಜೂರಾಗಿತ್ತು ತದನಂತರ ಬಂದ ಬಿಜೆಪಿ ಸರ್ಕಾರ ತಜ್ಞ ಇಂಜಿನಿಯರ್ಗಳ ಸಭೆ ಕರೆದು ಸಲಹೆ ಸೂಚನೆಗಳನ್ನು ಪಡೆಯುವ ಮೂಲಕ ಹೇಮಾವತಿ ಲಿಂಕ್ ಕೆನಾಲ್ ಯೋಜನೆಯಿಂದ ತಾಲೂಕಿನ ರೈತರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ನಾಲೆಯನ್ನು ಆಧುನಿಕರಣ ಗೊಳಿಸಿದರೆ ತಾಲೂಕಿಗೆ ಬೇಕಾದಷ್ಟು ನೀರು ಸರಾಗವಾಗಿ ಹರಿಯುತ್ತದೆ ಎಂದು ಅಭಿಪ್ರಾಯ ಪಟ್ಟ ಹಿನ್ನೆಲೆಯಲ್ಲಿ 166ನೇ ಕಿಲೋಮೀಟರ್ನಿಂದ ಲಿಂಕ್ ಕೆನಾಲ್ ಬದಲಾಗಿ ಹೇಮಾವತಿ ನಾಲೆ ಆಧುನೀಕರಣ ಕಾಮಗಾರಿ ಮುಂದುವರೆಯಿತು ಈಗ ಅಧಿಕಾರದಲ್ಲಿರುವ ಶಾಸಕರು ಸಂಸದರು ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಮೂರು ಜನ ನೀರಾವರಿ ತಜ್ಞರು ಶ್ರೀರಂಗ ಏತ ನೀರಾವರಿ ಕೈಗೊಳ್ಳುವ ಮೊದಲಿಗೆ ನೆನೆಗುದಿಗೆ ಬಿದ್ದಿದ್ದ ಮಾಜಿ ಸಚಿವರಾದ ಹುಚ್ಚ ಮಾಸ್ತಿಗೌಡ ಹಾಗೂ ವೈ ಕೆ ರಾಮಯ್ಯನವರ ಕನಸಾಗಿದ್ದ ಹುಲಿಯೂರುದುರ್ಗ ಹೋಬಳಿಗೆ ನೀರು ಕೊಂಡೊಯ್ಯುವ ಹೇಮಾವತಿ ನಾಲೆಯನ್ನು ಮಾಡಿಸುವ ಮೂಲಕ ನೀರನ್ನು ತೆಗೆದುಕೊಂಡು ಹೋಗಿದ್ದರೆ ರೈತರಿಗೆ ಎಷ್ಟು ಅನುಕೂಲವಾಗುತ್ತಿತ್ತು ಅದನ್ನು ಬಿಟ್ಟು ಕೆಲಸಕ್ಕೆ ಬಾರದ ಹೇಮಾವತಿ ಲಿಂಕ್ ಕೆನಾಲ್ ಯೋಜನೆಯಿಂದ ಯಡಿಯೂರು, ಕಸಬಾ, ಹುಲಿಯೂರುದುರ್ಗ ಹೋಬಳಿಗಳ ರೈತರಿಗೆ ತುಂಬಾ ನಷ್ಟವಾಗುತ್ತಿತ್ತು ಇದನ್ನು ತಾಲೂಕಿನ ಜನರು ಅರ್ಥ ಮಾಡಿಕೊಳ್ಳಬೇಕೆಂದ ಅವರು ಆಕಸ್ಮಿಕವಾಗಿ ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಜಾರಿಗೆ ಬಂದಿದ್ದರೆ ಯಡಿಯೂರ್ ಹೋಬಳಿಯ ಡಿ 26 ಉಪನಾಲೆಯಲ್ಲಿ ನೀರೆ ಹರಿಯದೆ ಯಡಿಯೂರ್ ಹೋಬಳಿಯ ರೈತರಿಗೆ ತುಂಬಲಾಗದ ನಷ್ಟ ಉಂಟಾಗುತ್ತಿತ್ತು, ಈಗಿನ ಶಾಸಕರ, ಸಂಸದರ, ಸಂಬಂಧಿಕರೇ ನೀರಾವರಿ ಸಚಿವರಿದ್ದಂತಹ ವೇಳೆಯಲ್ಲಿ ಮಾರ್ಕೋನಹಳ್ಳಿ ಅಣೆಕಟ್ಟೆಯಿಂದ ಮಂಗಳ ಜಲಾಶಯಕ್ಕೆ ಲಿಂಕ್ ಕೆನಾಲ್ ಮಾಡುವ ಮೂಲಕ ನೀರು ಹರಿಸಿದರೆ ಅಮೃತೂರು ಹೋಬಳಿಯ ಕೆರೆಗಳನ್ನೆಲ್ಲ ತುಂಬಬಹುದಿತ್ತು, ಮಾರ್ಕೋನಹಳ್ಳಿ ಡ್ಯಾಮ್ ಹಿಂಬಾಗ ನೀರು ಹರಿಯುವ ವೇಳೆ ಜನರಿಗೆ ಒಂದು ಸೇತುವೆ ತುಂಬಾ ಅವಶ್ಯಕತೆ ಇತ್ತು ಆದರೆ ಶಾಸಕರು ಮತ್ತು ಸಂಸದರು ಏಕೆ ಈ ಕೆಲಸವನ್ನು ತಮ್ಮ ಸಂಬಂಧಿಗಳಾದ ಅಂದಿನ ನೀರಾವರಿ ಸಚಿವರಾಗಿದ್ದ ಡಿಕೆ ಶಿವಕುಮಾರ್ ಅವರ ಗಮನ ಸೆಳೆದು ಮಾಡಿಸಲಿಲ್ಲ ಎಂದು ಪ್ರಶ್ನಿಸಿದರು? ಶಾಸಕರು ಹಾಗೂ ಸಂಸದರು ತಾಲೂಕಿನಲ್ಲಿ ಹೋದ ಕಡೆಯಲ್ಲೆಲ್ಲಾ ಕೆಲಸಕ್ಕೆ ಬಾರದ ಹೇಮಾವತಿ ಲಿಂಕ್ ಕೆನಾಲ್ ಯೋಜನೆಯನ್ನು ಮುಂದಿಟ್ಟುಕೊಂಡು ಭಾಷಣ ಬಿಗಿಯುತ್ತಾರೆ ಈ ಭಾಷಣವನ್ನು ಕೇಳಿ ಕೇಳಿ ನಮಗೂ ಸಾಕಾಗಿದೆ ಈಗ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ ಇನ್ನು ಮುಂದೆ ನಾವುಗಳು ಸಹ ತಾಲೂಕಿನಲ್ಲಿ ಹೋದ ಕಡೆಗಳಲ್ಲಿ ಇವರುಗಳ ಬಣ್ಣ ಬಯಲು ಮಾಡುತ್ತೇವೆ ಎಂದರು. ನಾನು ತುಮಕೂರು ಸಂಸದವನಾಗಿದ್ದ ವೇಳೆಯಲ್ಲಿ ಹೇಮಾವತಿ ಲಿಂಕ್ ಕೆನಾಲ್ ಯೋಜನೆಯ ವಿಚಾರವನ್ನು ತಜ್ಞ ಇಂಜಿನಿಯರ್ಗಳೊಂದಿಗೆ ಖಾಸಗಿಯಾಗಿ ಚರ್ಚಿಸಿದ ಸಂದರ್ಭದಲ್ಲಿ ಇಂಜಿನಿಯರ್ಗಳೇ ಇದು ಅವೈಜ್ಞಾನಿಕ ಕಾಮಗಾರಿ ಇದರಿಂದ ತಾಲೂಕಿಗೆ ಏನು ಉಪಯೋಗವಿಲ್ಲ ಎಂದು ಹೇಳಿದ್ದನ್ನು ಸ್ಮರಿಸಿದರು, ಕಳೆದ ಸಾಲಿನಲ್ಲಿ ಬಾರಿ ಮಳೆ ಸುರಿದ ಕಾರಣ ಕುಣಿಗಲ್ ಕೆರೆ ಕೋಡಿಯಾಗಿ ಸುಮಾರು ಆರು ತಿಂಗಳುಗಳ ಕಾಲ ಹರಿಯಿತು ಹೇಮಾವತಿ ನಾಲೆಯಲ್ಲೂ ತಿಂಗಳುಗಟ್ಟಲೆ ನೀರು ಹರಿಯಿತು ಮಾರ್ಕೋನಹಳ್ಳಿ ಜಲಾಶಯದಿಂದ ಹೆಚ್ಚು ನೀರು ಹರಿದ ಕಾರಣ ಶಿಂಶ ನದಿ ಭರ್ತಿಯಾಗಿ ನೀರು ಹರಿದು ಸುಖ ಸುಮ್ಮನೇ ನೀರೆಲ್ಲ ಸಮುದ್ರ ಪಾಲಾಯಿತು ನೆನೆಗುದ್ದಿಗೆ ಬಿದ್ದಿದ್ದ ಹೇಮಾವತಿ ನಾಲೆಯನ್ನು ಅಭಿವೃದ್ಧಿಪಡಿಸಿ ನಾಲೆಯ ಮೂಲಕ ಹಾಗೂ ಶಿಂಶಾ ನದಿಯ ಮೂಲಕ ಹುಲಿಯೂರ ದುರ್ಗ ಹೋಬಳಿಗೆ ನೀರು ಹರಿಸಿದರೆ ಹೋಬಳಿಗಳ ಕೆರೆಗಳೆಲ್ಲ ತುಂಬಿ ರೈತರು ಸಮೃದ್ಧಿಯಿಂದ ಜೀವನ ನಡೆಸುತ್ತಿದ್ದರು ಈ ವಿಚಾರವಾಗಿ ಈ ನಾಯಕರು ಒಂದು ದಿನವೂ ಇಂಜಿನಿಯರ್ಗಳನ್ನು ಸಭೆ ಸೇರಿಸಿ ಮಾತನಾಡಲಿಲ್ಲ ಅದನ್ನು ಬಿಟ್ಟು ಶಾಸಕರು, ಸಂಸದರು, ಕೇವಲ ಸಿಸಿ ರಸ್ತೆಗಳ ಕಡೆ ಗಮನ ಹರಿಸಿದರೆ ವಿನಃ ತಾಲೂಕಿಗೆ ಈ ನಾಯಕರ ಕೊಡುಗೆ ಶೂನ್ಯ, ಕೇವಲ ಸಭೆ ಸಮಾರಂಭಗಳಲ್ಲಿ ಕೆಲಸಕ್ಕೆ ಬಾರದ ಭಾಷಣಗಳನ್ನು ಮಾಡುತ್ತಾ ತಾಲೂಕಿನ ಜನರ ದಾರಿ ತಪ್ಪಿಸುತ್ತ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಕಿಡಿ ಕಾರಿದರು ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿ ಮನೋಹರ್ ಗೌಡ ಗುತ್ತಿಗೆದಾರ ಕಂಪನಿಪಾಳ್ಯ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.