ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನೆಗೆ ಒತ್ತಾಯಿಸಿ ದಲಿತ ಸಂಘಟನೆಗಳ ಧರಣಿ ಸತ್ಯಾಗ್ರಹ
ಡಾ.ಬಾಬು ಜಗಜೀವನ್ ರಾಮ್ ಭವನದ ಶಂಕುಸ್ಥಾಪನೆ ಹಾಗೂ ಜಿಲ್ಲಾ ಅಂಬೇಡ್ಕರ್ ಭವನದ ನವೀಕರಣಕ್ಕೆ ಆಗ್ರಹ
ತುಮಕೂರು : ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಐಯ್ಯನಪಾಳ್ಯ ಶ್ರೀನಿವಾಸ್ ಮಾತನಾಡಿ ತುಮಕೂರು ಜಿಲ್ಲೆ ಕರ್ನಾಟಕ ರಾಜ್ಯದಲ್ಲಿ ಶೈಕ್ಷಣಿಕ ಸ್ಥಾನದಲ್ಲಿದ್ದು ರಾಜ್ಯದ ರಾಜಧಾನಿ ಹೆಬ್ಬಾಗಿಲು ಕೇಂದ್ರವಾಗಿದೆ ಸ್ವಾತಂತ್ರ‍್ಯ ಬಂದು 75 ವರ್ಷ ಕಳೆದರು ತುಮಕೂರು ಜಿಲ್ಲಾ ಕೇಂದ್ರದಲ್ಲಿ ಡಾ ಬಿ ಆರ್ ಅಂಬೇಡ್ಕರ್ ರವರ ವಿಗ್ರಹ ಇಲ್ಲದಿರುವುದು ವಿಪರ್ಯಾಸ ಹಾಗೆಯೇ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ ಬಾಬು ಜಗಜೀವನ್ ರಾಮ್ ರವರ ಭವನ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲಾಗಿ ದಶಕಗಳೇ ಕಳೆದಿದ್ದರೂ ಕೂಡ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಶಂಕು ಸ್ಥಾಪನೆ ಸಹ ಅಗಿರುವುದ್ದಿಲ್ಲ ಹಾಗೂ ಜಿಲ್ಲಾ ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಿ ಸುಮಾರು ವರ್ಷಗಳು ಕಳೆದರೂ ಅದರ ನಿರ್ವಹಣೆ ಸರಿಯಾಗಿಲ್ಲ ಜಿಲ್ಲಾಡಳಿತ ಕೂಡಲೇ ಜಿಲ್ಲಾ ಅಂಬೇಡ್ಕರ್ ಭವನದ ನವೀಕರಣಕ್ಕಾಗಿ ಮಾಡುವುದರ ಜೊತೆಗೆ ವಿಶ್ವರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ವಿಗ್ರಹ ಸ್ಥಾಪಿಸುವುದು ಅನಿವಾರ್ಯವಾಗಿದೆ ಹಾಗೂ ನಗರದಲ್ಲಿ ಮೀಸಲಿರುವ ಡಾ ಬಾಬು ಜಗಜೀವನ್ ರಾಮ್ ಭವನದ ಶಂಕುಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು.
ದಲಿತರ ಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿರುವ ಜನಪ್ರತಿನಿಧಿಗಳು ಇಲ್ಲಿಯ ತನಕ ತುಮಕೂರು ನಗರದಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ವಿಗ್ರಹ ಸ್ಥಾಪಿಸುವ ವಿಚಾರವಾಗಿ ದ್ವನಿ ಎತ್ತದೆ ಇರುವುದು ನಾಚಿಕೆಗೇಡಿನ ಸಂಗತಿ ಚುನಾವಣೆ ಸಂದರ್ಭದಲ್ಲಿ ಇಲ್ಲಸಲ್ಲದ ಆಸ್ವಾಸನೆ ನೀಡಿ ಮತ ಸೆಳೆಯುವ ಪ್ರಯತ್ನ ಮಾಡುತ್ತಾರೆ ಅದರೆ ತುಮಕೂರು ನಗರದಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ವಿಗ್ರಹ ಸ್ಥಾಪಿಸುವ ವಿಚಾರವಾಗಿ ದ್ವನಿ ಇಲ್ಲದಂತಾಗಿದೆ ಈ ಕೂಡಲೇ ಜನ ಪ್ರತಿನಿಧಿಗಳು ಅಂಬೇಡ್ಕರ್ ರವರ ವಿಗ್ರಹ ಸ್ಥಾಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜೋತೆಗೆ ಚರ್ಚಿಸಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನೆ ಸಹಕರಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ತಿಳಿಸಿದರು.
ದಲಿತ ಮುಖಂಡರಾದ ರಾಮಯ್ಯ, ಟಿ ಸಿ ರಂಗಣ್ಣ, ಅಪ್ಪಾಜಯ್ಯ, ಸಿ.ಜಯಣ್ಣ, ಯೋಗೀಶ್ ಸೋರೆಕುಂಟೆ, ರಾಮಮೂರ್ತಿ, ಹೆಚ್ ಆರ್. ಅಮರ್. ಅಯ್ಯನಪಾಳ್ಯ ಶ್ರೀನಿವಾಸ್ . ಗೋಪಾಲ್, ಸಾಗರ್ ಬಿ ಜಿ, ರಂಗನಾಥ್ ,ರಾಜಣ್ಣ ಎಲದಭಾಗಿ,ಕವಣದಾಲದ ಶಿವಣ್ಣ, ಯೋಗೀಶ್ ಮೇಳೆಕಲ್ಲಹಳ್ಳಿ, ಮಾರುತಿ,ಸಿದ್ದೇಶ್ ನೇಗಲಾಲ,ಶಿವರಾಜು ಕೌತಮಾರನಹಳ್ಳಿ ಇವರುಗಳಿದ್ದಾರೆ.