ಕೊರಟಗೆರೆ : ರೈತ ದಿನಾಚರಣೆಯ ಅಂಗವಾಗಿ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ ಡಾ.ಲಕ್ಷ್ಮೀಕಾಂತ್ ತಾಲ್ಲೂಕಿನ ಕೋಳಾಲ ಹೋಬಳಿಯ ಗುಡಿಬೇವಿನಹಳ್ಳಿ ಗ್ರಾಮದಲ್ಲಿ ಸೂರ್ಯ ಆಸ್ಪತ್ರೆ ತುಮಕೂರು ಮತ್ತು ಜಿಲ್ಲಾ ಅಂಧತ್ವ ನಿವರಣಾ ಘಟಕ ಇವರ ಸಂಯುಕ್ತಶ್ರಾಯದಲ್ಲಿ ಉಚಿತ ನೇತ್ರಾ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಯಿತು.
ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ ಡಾ.ಲಕ್ಷ್ಮೀಕಾಂತ ಮಾತನಾಡಿ, ರೈತರು ದೇವರ ಮತ್ತೊಂದು ಪ್ರತಿರೂಪವಾಗಿದ್ದು, ಆದ್ದರಿಂದ ರೈತ ದಿನಾಚರಣೆಯ ಅಂಗವಾಗಿ ಇಂದು ಸೂರ್ಯ ಆಸ್ಪತ್ರೆ ತುಮಕೂರು ಮತ್ತು ಜಿಲ್ಲಾ ಅಂಧತ್ವ ನಿವರಣಾ ಘಟಕ ಇವರ ಸಂಯುಕ್ತಶ್ರಾಯದಲ್ಲಿ ತಾಲ್ಲೂಕಿನ ಗುಡಿಬೇವಿನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮದ ವಯೋವೃದ್ಧರ ಅನುಕೂಲಕ್ಕಾಗಿ ನೇತ್ರಾ ತಪಾಸಣಾ ಶಿಬಿರವನ್ನು ಏರ್ಪಡಿಸಿರುವುದು ಗ್ರಾಮದ ಜನರ ಅನುಕೂಲಕ್ಕೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ತಿಳಿಸಿದರು.
ಕೋವಿಡ್ ಮಹಾಮಾರಿಯ ಸೋಂಕು ಹೊರದೇಶಗಳಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದು ರಾಜ್ಯ ಸರಕಾರದ ಆದೇಶದಂತೆ ನಾಡಿನ ಜನತೆ ಮತ್ತು ನಮ್ಮ ಕೊರಟಗೆರೆ ಕ್ಷೇತ್ರದ ಜನರು 3ನೇ ಬೂಸ್ಟರ್ ಡೊಸ್ ಲಸಿಕೆ ಪಡೆಯದೆ ಇರುವವರು ಕೂಡಲೇ ಲಸಿಕೆ ಪಡೆದು ಸದಾ ಆರೋಗ್ಯವಂತರಾಗಿರಿ, ಕ್ಷೇತ್ರದ ಜನರ ಸೇವೆಗೆ ಸದಾ ಬದ್ಧನಾಗಿರುತ್ತೇನೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವೈದ್ಯರು ತಪಾಸಣೆ ನಡೆಸಿದ ನಂತರ ಆಪರೇಷನ್ ಗೆ ಒಳಪಡುವಂತಹವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಪರೇಷನ್ ಮಾಡಿಸಿ ವಾಹನದ ವ್ಯವಸ್ಥೆಯೊಂದಿಗೆ ತಮ್ಮ ಗ್ರಾಮಕ್ಕೆ ವಾಪಸ್ಸು ಕರೆದುಕೊಂಡು ಬಂದು ಬಿಡುತ್ತೇವೆ, ವೈದ್ಯರ ಸಲಹೆಯ ಮೆರೆಗೆ ಕನ್ನಡಕದ ಅವಶ್ಯಕತೆ ಇರುವಂತಹ ವ್ಯಕ್ತಿಗಳ ಪಟ್ಟಿಮಾಡಿ ಅಂತಹವರಿಗೆ ಉಚಿತವಾಗಿ ವಿತರಿಸುತ್ತೇವೆ ಎಂದರು.
ಕ್ಷೇತ್ರದ ಜನರಿಗೆ ಕೋವಿಡ್ ಚಿಕಿತ್ಸೆ ಉಚಿತ :-
ನಮ್ಮ ಸೂರ್ಯ ಆಸ್ಪತ್ರೆ ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಕೋವಿಡ್ ಸೆಂಟರ್ ಆಗಿತ್ತು, ಮೂರನೇ ಅಲೆಯಲ್ಲಿ ಕೊರಟಗೆರೆ ಕ್ಷೇತ್ರದ ಜನರಲ್ಲಿ ಏನಾದರೂ ಕೋವಿಡ್ ಸೋಂಕು ಕಂಡುಬಂದರೆ ಅಂತಹವರನ್ನು ತುಮಕೂರಿನ ಸೂರ್ಯ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ತಪಾಸಣಾ ಶಿಬಿರದಲ್ಲಿ ಬಿಜೆಪಿ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಡಾ. ಲಕ್ಷ್ಮೀಕಾಂತ್ ತಿಳಿಸಿದರು.
ಈ ಸಂದರ್ಭದಲ್ಲಿ ವೈದ್ಯರಾದ ಡಾ.ಕೋಕಿಲ, ಡಾ.ಶಾಂಬವಿ, ಡಾ.ಜಯಮ್ಮ, ಮುಖಂಡರಾದ ಕರಿಬಸವಯ್ಯ, ತೇಜೆಶ್, ಬಾನುಪ್ರಕಾಶ್, ವಿರೇಶ್, ಅಪ್ಪಿವಿರೇಶ್, ಕೀರ್ತಿಕುಮಾರ್, ದಿನೇಶ್, ಗ್ರಾಮಸ್ಥರು ಸೇರಿದಂತೆ ಇತರರು ಇದ್ದರು.