ಕೊರಟಗೆರೆ

ರಾಜ್ಯದಲ್ಲಿ ಕೊರಟಗೆರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ : ಶಾಸಕ ಡಾ.ಜಿ.ಪರಮೇಶ್ವರ್

ಕೊರಟಗೆರೆ : ಕೊರಟಗೆರೆ ಪಟ್ಟಣದ ಜನತೆಯ ಆರಾದ್ಯ ದೈವ ಇತಿಹಾಸಉಳ್ಳ ಉದ್ಬವ ಕಟ್ಟೆಗಣಪತಿ ದೇವರಾಗಿದ್ದು ಭಕ್ತರು ಸಂಕಲ್ಪಮಾಡಿಕೊಂಡ ಇಷ್ಠಾರ್ಥ ಸಿದ್ದಿಸುವ ನಂಬಿಕೆಯ ವಿಶೇಷ ಶಕ್ತಿಯುಳ್ಳ ಆರಾದ್ಯ ದೇವರಾದ ಕಟ್ಟೆಗಣಪತಿಯ ಆಶ್ರೀರ್ವಾದದಿಂದ ಕೊರಟಗೆರೆ ಕ್ಷೇತ್ರದ ಜನತೆ ಸುಖ ಶಾಂತಿಯಿಂದ ಇರುವಂತೆ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪ್ರಾರ್ಥಿಸಿದರು.
ಅವರು ಕೊರಟಗೆರೆ ಪಟ್ಟಣದ ಕಟ್ಟೆಗಣಪತಿ ದೇವಾಲಯದ ಅಭಿವೃದ್ದಿ ಮಂಡಲಿ, ಮಹಿಳಾ ಮಂಡಲಿ ಹಾಗೂ ಯುವಕ ಮಂಡಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ಕಟ್ಟೆಗಣಪತಿ ಸಮುದಾಯ ಭವನದಲ್ಲಿ ಪ್ರತಿಷ್ಠಾಪಿಸಿರುವ ಪರಿಸರ ಗಣಪತಿ ಹಾಗೂ ಉದ್ಭವ ಕಟ್ಟೆಗಣಪತಿ ದೇವಾಲಯಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿ ನಂತರ ಮಾತನಾಡಿನ ಗಣಪತಿಯ ಆಶ್ರೀರ್ವಾದ ದಿಂದ ನಾನು ಕೊರಟಗೆರೆ ಕ್ಷೇತ್ರದ ಶಾಸಕನಾಗಿ ಆಯ್ಕೆನಂತರ ಕ್ಷೇತ್ರದ ಅಭಿವೃದ್ದಿಯೊಂದಿಗೆ ಕೊರಟಗೆರೆ ಪಟ್ಟಣವನ್ನು ಮಾದರಿ ಪಟ್ಟಣ ಮಾಡುವ ನಿಟ್ಟಿನಲ್ಲಿ ಅನೇಕ ಅಭಿವೃದ್ದಿ ಕಾರ್ಯಕ್ರಮದ ಯೋಜನೆಗಳನ್ನು ರೂಪಿಸಿದ್ದು ಅದರಲ್ಲಿ ಪಟ್ಟಣದ ಮೂಲಕ ಹಾದುಹೋಗಿರುವ ಪ್ರದಾನ ರಸ್ತೆಯನ್ನು 10 ಕೋಟಿ ರೂ ವೆಚ್ಚದಲ್ಲಿ ವೈಟ್‌ಟಾಪಿಂಗ್ ರಸ್ತೆ ಯನ್ನಾಗಿ ಮಾಡಲಾಗಿದೆ, ಅದರೊಂದಿಗೆ ಪಟ್ಟಣದ ಒಳ ರಸ್ತೆಗಳನ್ನು ಸಿ.ಸಿ ರಸ್ತೆಗಳನ್ನಾಗಿ ಮತ್ತು ಉತ್ತಮ ರೀತಿಯ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ ಹಾಗೂ ಪಟ್ಟಣಕ್ಕೆ ಹೊಂದಿಕೊಡಂತೆ ಇರುವ ಗೋಕುಲದ ಕೆರೆಯ ಅಭಿವೃಧ್ದಿ ಮಾಡಿ ಹಿರಿಯ ನಾಗರೀಕರಿಗೆ ಮತ್ತು ಮಹಿಳೆಯರಿಗೆ, ಯುವಕರಿಗೆ ಕೆರೆಯ ಸುತ್ತಾ ವಾಕಿಂಗ್ ಪಾತ್ ನಿರ್ಮಾಣ ಹಾಗೂ ಮಕ್ಕಳಿಗೆ ಪಾರ್ಕ್ ನಿರ್ಮಾಣ, ಕೆರೆ ಮದ್ಯ ಭಾಗದಲ್ಲಿ ನೀರಿನ ಚಿಲುಮೆ ಯೊಂದಿಗೆ ಮಕ್ಕಳಿಗೆ ಬೋಟಿಂಗ್ ವ್ಯವಸ್ಥೆಯ ಯೋಜನೆಗೆ ನಮ್ಮ ಕಾಂಗ್ರೆಸ್ ಸರ್ಕಾರದಲ್ಲಿ 3.5 ಕೋಟಿ ಹಣ ಮಂಜೂರು ಮಾಡಿಸಿದ್ದು ಕೆರೆ ಕಾಮಗಾರಿ ಪ್ರಾರಂಭಕ್ಕೂ ಮುನ್ನವೆ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದಲ್ಲಿ ಹಣ ವಾಪಸ್ ಪಡೆಯಲಾದ ಹಿನ್ನೆಲೆಯಲ್ಲಿ ಕೆರೆ ಕಾಮಗಾ ರಿಗೆ ಹಿನ್ನೆಡೆ ಉಂಟಾಯಿತು ಆದರೂ ಮುಂದಿನ ದಿನಗಳಲ್ಲಿ ಹಣ ಮತ್ತೆ ಮಂಜೂರು ಮಾಡಿಸಿ ಗೋಕುಲದ ಕೆರೆ ಅಭಿವೃದ್ದಿ ಮಾಡಿಸುವ ಭರವಸೆ ನೀಡಿದರು.
ಉಧ್ಯಾನವನ ನಿರ್ಮಾಣ;- ಕೊರಟಗೆರೆ ಪಟ್ಟಣದಲ್ಲಿ ಉಧ್ಯಾನವನದ ಕೊರತೆ ಇದ್ದು ಉಧ್ಯಾನವನ ನಿರ್ಮಾಣಕ್ಕೆ ಪ್ರವಾಸಿ ಮಂದಿರದ ಬಳಿ 32 ಎಕರೆ ಸ್ಥಳ ನಿಗದಿ ಮಾಡಿದ್ದು ಶೀಘ್ರದಲ್ಲಿಯೇ ಸಸಿಗಳನ್ನು ನೆಡುವ ಮೂಲಕ ಉಧ್ಯಾನವನ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದ ಅವರು ಶಾಸಕನ್ನಾಗಿ ಮಾಡಿದ ಕೊರಟಗೆರೆ ಕ್ಷೇತ್ರದ ಜನತೆಯ ಸೇವೆಯೇ ನನ್ನ ಗುರಿಯಾಗಿದ್ದು ಕೊರಟಗೆರೆ ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ನನ್ನದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಟ್ಟೆ ಗಣಪತಿ ದೇವಾಲಯಕ್ಕೆ ಆಗಮಿಸಿದ ಶಾಸಕರನ್ನು ಕಟ್ಟೆಗಣಪತಿ ಮಹಿಳಾ ಮಂಡಲಿಯ ಮಹಿಳೆಯರು ಆರತಿ ಬೆಳಗುವ ಮೂಲಕ ಸ್ವಾಗತಿಸಿದರು, ಈ ಸಂದರ್ಭಧಲ್ಲಿ ಕಟ್ಟೆಗಣಪತಿ ದೇವಾಲಯದ ಅಭಿವೃಧ್ದಿ ಮಂಡಲಿಯ ಎನ್.ಪದ್ಮನಾಭ್, ಪ.ಪಂ.ಮಾಜಿ ಉಪಾಧ್ಯಕ್ಷ ಕೆ.ವಿ.ಮಂಜುನಾಥ್, ಯುವಕ ಮಂಡಲಿಯ ಅಧ್ಯಕ್ಷ ಬೆನಕ ವೆಂಕಟೇಶ್, ಮಹಿಳಾ ಮಂಡಲಿ ಅಧ್ಯಕ್ಷೆ ಗಿರಿಜಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಪ.ಪಂ.ಸದಸ್ಯ ಕೆ.ಆರ್.ಓಬಳರಾಜು, ನಂದೀಶ, ಗಟ್ಲಹಳ್ಳಿ ಕುಮಾರ್, ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರುಷೊತ್ತಮ್, ಕಟ್ಟೆಗಣಪತಿ ಯುವಕ ಸಂಘದ ಪದಾಧಿಕಾರಿಗಳಾದ ವೇಧ ಬ್ರಹ್ಮ ದತ್ತಾತ್ರೆಯದಿಕ್ಷಿತ್, ಸಂಜಯ್, ಗುರುದತ್ತ್ದೀಕ್ಷಿತ್, ಕೆ.ಪಿ.ಅಭಿಲಾಷ್, ಪಿಎಲ್‌ಡಿ ಬ್ಯಾಂಕ್ ವಿಜಯ್‌ಕುಮಾರ್, ಪತ್ರಕರ್ತ ಜಿ.ಎಲ್.ಸುರೇಶ್, ರಂಜಿತ್, ಸಿದ್ದೇಶ್, ಗೋಪಿನಾಥ್, ದಿಲೀಪ್‌ಕುಮಾರ್, ಚಿರು, ಜಗ್ನನಾಥ್, ದೀಪು, ಮಧು, ಕಿರಣ್‌ಕುಮಾರ್, ಚಂದ್ರಶೇಖರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker