ಬ್ರೇಕಿಂಗ್ ಸುದ್ದಿ
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಬೆಂಗಾವಲು ವಾಹನ ಅಪಘಾತ : ಮೂವರಿಗೆ ಗಂಭೀರ ಗಾಯ
ಬೆಂಗಳೂರು: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬೆಂಗಾವಲು ವಾಹನ ಅಪಘಾತ ಸಂಭವಿಸಿದೆ. ಈ ಪರಿಣಾಮ ಮೂವರಿಗೆ ಗಂಭೀರ ಗಾಯವಾಗಿದ್ದು, ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯ ಸಂಭವಿಸಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಈ ಘಟನೆ ತುಮಕೂರು ಜಿಲ್ಲೆಯ ತೆಪ್ಪೂರು ಎಂಬಲ್ಲಿ ನಡೆದಿದೆ. ಈ ವೇಳೆ ಬೆಂಗಾವಲು ವಾಹನದಲ್ಲಿ ಐವರ ಪೈಕಿ ಮೂವರಿಗೆ ಗಂಭೀರವಾಗಿದೆ. ಸದ್ಯ ಗಾಯಾಳು ಆದಿಚುಂಚನಗಿರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.