ವಿದಾಯವೆಂದರೆ ನೆನಪುಗಳ ಮೆರವಣಿಗೆ : ಡಾ.ಎಂ.ಝಡ್ ಕುರಿಯನ್
ತುಮಕೂರು : ಶಿಸ್ತು, ಸಮಯಪ್ರಜ್ಞೆ ಮತ್ತು ಜೀವನದಲ್ಲಿ ಯಶಸ್ಸುಗಳಿಸಲು ಆತ್ಮವಿಶ್ವಾಸ ಬಹಳ ಮುಖ್ಯ ಎಂದು ಸಾಹೇ ವಿಶ್ವವಿದ್ಯಾಲಯದ ರಿಜಿಸ್ಟಾರ್ ಡಾ.ಎಂ.ಝಡ್ ಕುರಿಯನ್ ಅವರು ಅಭಿಪ್ರಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂದು ಅಂತಿಮ ವರ್ಷದ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಬೀಳ್ಕೋಡಿಗೆ ಸಮಾರಂಭದಲ್ಲಿ ಮಾತನಾಡಿದ ಅವರು,ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳನ್ನು ಶ್ರದ್ಧೆಯಿಂದ ಬಳಸಿಕೊಂಡು ಜೀವನದಲ್ಲಿ ಉನ್ನತ ಮಟ್ಟಕ್ಕೆ ತಲುಪಿ ಮತ್ತು ಸಮಾಜ ಹಾಗೂ ರಾಷ್ಟ್ರಕ್ಕೆ ಉತ್ತಮ ಕೊಡುಗೆ ನೀಡಿ ಎಂದು ಹಾರೈಸಿದರು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್ ಅವರು ಮಾತನಾಡಿ, ಅರಿವಿನ ಮೂಲಕ ತಾವು ಸಂಪಾದಿಸಿದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಕೆ ಮಾಡಿಕೊಳ್ಳಿ ಎಂದರು.
ಜ್ಞಾನ ಸಂಪಾದನೆಗೆ ಶ್ರಮಿಸಿದಷ್ಟೂ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಉಜ್ವಲ ಭವಿಷ್ಯ ಹೊಂದಲು ನಾಂದಿಯಾಗುತ್ತದೆ. ಇದರಿಂದ ಇತರರ ಬದುಕು, ಬವಣೆಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಡೀನ್ ಡಾ. ಸಿದ್ದಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾಲೇಜು ದಿನದ ತಮ್ಮ ಅನುಭವಗಳನ್ನು ಹಂಚಿಕೊಂಡು, ಬಾಂಧ್ಯವ್ಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಮನ್ನಡೆಯಿರಿ. ಭವಿಷ್ಯತ್ತಿನ ನಿಮ್ಮ ನಾಳೆಗಳು ಒಳ್ಳೆಯ ರೀತಿಯಿಂದ ಕೂಡಿರಲಿ ಎಂದು ಆಶಿಸಿದರು.
ನಾಲ್ಕು ವಿಭಾಗದ ವಿದ್ಯಾರ್ಥಿಗಳು ಮಾತನಾಡಿ, ನಾಲ್ಕು ವರ್ಷದ ಮನರಂಜನೆ ಜೊತೆಗೆ ಪಾಠದಲ್ಲಿ ಕಳೆದ ಗೋಲ್ಡನ್ ಲೈಫ್. ತರಗತಿಗೆ ಚಕ್ಕರ್ ಹೊಡೆದು ಕ್ಯಾಂಟೀನ್, ಲೈಬ್ರರಿ, ರೀಡಿಂಗ್ ರೂಂ, ಕ್ಯಾಂಪಸ್, ಪಾರ್ಕಿಂಗ್‌ನಲ್ಲಿ ಗೆಳೆಯರೊಂದಿಗೆ ಹರಟೆ ಹೊಡೆಯುತ್ತ ಕಳೆದ ದಿನಗಳನ್ನು ಮೆಲುಕು ಹಾಕಿದರು.
ಪರೀಕ್ಷೆ ಸಮಿಪಿಸುತ್ತಿದಂತೆ ತರಾತುರಿ ಓದು, ಕ್ಷಣ ಮಾತ್ರಕ್ಕೆ ಮರೆಯಾಗುವ ಮುನಿಸು, ಅರೆಕ್ಷಣಕ್ಕೆ ಒಂದಾಗುವ ಗೆಳೆತನ, ಹರೆಯದ ತಲ್ಲಣಗಳು, ಕಾಲೇಜು ರಾಜಕೀಯ, ಚುನಾವಣೆಯಲ್ಲಿ ಕಾಲೇಜುನಲ್ಲಿ ನಡೆಯುವ ಸಂಘರ್ಷ, ಕಲೋತ್ಸವ, ಕಾಲೇಜು ಮ್ಯಾಗಜಿನ್, ಇಂಡಸ್ಟಿçÃಯಲ್ ವಿಸಿಟ್, ಎನ್‌ಎಸ್‌ಎಸ್ ಶಿಬಿರಗಳಲ್ಲಿ ಜನರೊಂದಿಗೆ ಬೆರೆಯುವಿಕೆ ಎಲ್ಲವೂ ಮಧುರ ಕ್ಷಣಗಳನ್ನು ನೆನೆದು ಕಣ್ಣಂಚಲ್ಲಿ ನೀರು ತುಂಬಿಕೊAಡು ಮಾತಿನ ಮಂಟಪದಲ್ಲೇ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಟ್ಟರು.
ಕಾರ್ಯಕ್ರಮದಲ್ಲಿ ರಿಜಿಸ್ಟಾರ್ ಡಾ.ಕೆ.ಕರುಣಾಕರ, ಡೀನ್ ಡಾ.ಎಚ್.ವೇಣುಗೋಪಾಲ, ತರಬೇತಿ ಮತ್ತು ನೇಮಕಾತಿ ವಿಭಾಗದ ಮುಖ್ಯಸ್ಥ ಡಾ.ಅಶೋಕ ಮೆಹತಾ, ಸಿವಿಲ್ ವಿಭಾಗದ ಮುಖ್ಯಸ್ಥರು ಡಾ.ಡಿ.ರಾಜನಾಯಕ, ಡಾ. ಎ.ಎಸ್ ರಾಜು, ಡಾ. ಜಿ. ಸುಮಾ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.