ಕೊರಟಗೆರೆ
Trending

ಕೊರಟಗೆರೆ : ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯ ಸುವರ್ಣಮಹೋತ್ಸವ ಕಾರ್ಯಕ್ರಮ

ಕೊರಟಗೆರೆ : ಪಟ್ಟಣದ ಶ್ರೀ ಕನ್ಯಕಾಪರಮೇಶ್ವರಿ ಪ್ರತಿಷ್ಠಾಪನಾ ಸುವರ್ಣಮಹೋತ್ಸವ ಅಂಗವಾಗಿ ಆರ್ಯವೈಶ್ಯ ಮಂಡಳಿ ವತಿಯಿಂದ 1 ಕೋಟಿ ವೆಚ್ಚದಲ್ಲಿ ನೂತನ ರಾಜ ಗೋಪುರ ಕಲಶ ಪ್ರತಿಷ್ಠಾಪನೆ, ಸುವರ್ಣ ಮಹೋತ್ಸವ ಭವನ, ಅತ್ಯಾಧುನಿಕ ಬೋಜನಶಾಲೆ, ವಧು-ವರರ ಕೊಠಡಿಗಳ ಉದ್ಘಾಟನೆಯೊಂದಿಗೆ ಮಹಾ ಕುಂಭಾಭಿಷೇಕ ಹಾಗೂ ಗಿರಿಜಾ ಕಲ್ಯಾಣೋತ್ಸವ ಜೂ.1 ರಿಂದ 3 ರವರಗೆ ಏರ್ಪಡಿಸಲಾಗಿದೆ ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾ ನಿದೇರ್ಶಕ ಸಿ.ಎ.ಸಂಪಂಗಿಕೃಷ್ಣಯ್ಯಶೆಟ್ಟಿ ತಿಳಿಸಿದ್ದಾರೆ.
ಅವರು ಪಟ್ಟಣದ ಕನ್ನಿಕಾ ದೇವಾಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಕೊರಟಗರೆ ಪಟ್ಟಣದಲ್ಲಿ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ ಪ್ರತಿಷ್ಠಾಪನೆಯಾಗಿ 50 ವರ್ಷಗಳು ತುಂಬಿದ ನೆನಪಿಗಾಗಿ ಶಿಥಲಾವಸ್ಥೆ ತಲುಪಿರುವ ವಾಸವಿ ಕಲ್ಯಾಣ ಮಂಟಪವನ್ನು ದಾನಿಗಳಾದ ದಿವಾಂಗತ ಗುಂಡಯ್ಯಶ್ರೇಷ್ಟಿ ನವರ ಮಕ್ಕಳಾದ ಎಂ.ಜಿ.ಸುಧೀರ್ ಮತ್ತು ಎಂ.ಜಿ.ಬದರಿಪ್ರಸಾದ್ ನೇತೃತ್ವದಲ್ಲಿ 1 ಕೋಟಿ ವೆಚ್ಚದಲ್ಲಿ ನೂತನವಾಗಿ ನವೀಕರಣದೊಂದಿಗೆ ವಾಸವಿ ದೇವಾಲಯಕ್ಕೆ ರಾಜಗೋಪುರದೊಂದಿಗೆ 10 ಅಡಿ ವಾಸವಿದೇವಿಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ಸುವರ್ಣ ಮಹೋತ್ಸವ ಭವನ, ಅತ್ಯಾಧುನಿಕ ಭೋಜನಶಾಲೆ ಮತ್ತು ನೂತನ ವಧು-ವರರ ಕೊಠಡಿಗಳನ್ನು ನಿರ್ಮಿಸಿ ಜೂ. 1 ರಿಂದ 3ರವರೆಗೂ 3 ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗೆಳೊಂದಿಗೆ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ಜೂ.1 ರಂದು ಗೋಧೊಳಿ ಲಗ್ನದಲ್ಲಿ 108 ಸಮಂಗಲಿಯರಿಂದ ಗಂಗಾ-ಭಗೀರಥ ಪೂಜೆ, ಯಾಗಶಾಲೆ ಪ್ರವೇಶ, ಕಲಶ ಪ್ರತಿಷ್ಠಾಪನೆ, ಮಹಾಗಣಪತಿ ಪೂಜೆ, ಮಹಾಸಂಕ ಲ್ಪ ಹಾಗೂ ಹೋಮ-ಹವನಗಳೊಂದಗೆ ಸಂಜೆ 6 ಗಂಟೆಗೆ ಬೆಂಗಳೂರು ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ರಾ.ಪ.ರವಿಶಂಕರ್ ಕಾರ್ಯಕ್ರಮ ಉದ್ಘಾಟನೆ ಮಾಡುವರು, ವಿಧಾನ ಪರಿಷತ್ ಸದಸ್ಯ ಹಾಗೂ ಆರ್ಯವೈಶ್ಯ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಡಿ.ಎಸ್.ಅರುಣ್, ಮಾಜಿ ಪ.ಪಂ.ಸದಸ್ಯ ಕೆ.ಎಸ್.ಶ್ರೀನಿವಾಸ್, ಕೊರಟಗೆರೆ ಆರ್ಯವೈಶ್ಯ ಕ್ರೆಡಿಟ್ ಕೋ-ಆಪರೇಟಿವ್ ಸೋಸೈಟಿ ಅಧ್ಯಕ್ಷ ಸಿ.ಎ.ಸಂಪಂಗಿಕೃಷ್ಣಯ್ಯಶೆಟ್ಟಿ, ಗುಪ್ತ ಜ್ಯೂಯರ‍್ಸ್ ಮಾಲೀಕ ಕೆ.ಕೆ.ನವೀನ್‌ಕುಮಾರ್, ಕೊರಟಗೆರೆ ಆರ್ಯವ್ಯಶ್ಯ ಮಂಡಲಿ ಅಧ್ಯಕ್ಷ ಕೆ.ಎಸ್.ವೆಂಕಟಾಚಲ ಶ್ರೇಷ್ಠಿ, ಎಂ.ಜಿ. ಬದರಿಪ್ರಸಾದ್, ಪದ್ಮಾರಮೇಶ್, ಕೆ.ಎಸ್.ಅಶೋಕ್‌ಕುಮಾರ್, ಎಂ.ಜಿ.ಸುಧೀರ್, ಕೆ.ಎಸ್.ಭ್ಯಾಗ್ಯಲಕ್ಷ್ಮೀ ಭಾಗವಹಿಸುವರು.
ಕುಂಭಾಭಿಷೇಕ ಹಾಗೂ ರಾಜಗೋಪುರ ಕಲಶ ಪ್ರತಿಷ್ಠಾಪನೆ;-ಜೂ.2 ರಂದು ಬ್ರಾಹ್ಮಿ ಮುಹೂರ್ತದಲ್ಲಿ ವಾಸವಿ ಪೀಠಾಧಿಪತಿಗಳಾದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳು ಹಾಗೂ ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿಗಳ ದಿವ್ಯಸಾನಿದ್ಯದಲ್ಲಿ ಎ.ಆರ್.ರವಿಕುಮಾರ್, ಅನಿಲ್‌ಕುಮಾರ್, ನಾಗೇಶ್, ಎಂ.ಜಿ.ಬದರಿಪ್ರಸಾದ್, ಎಂ.ಜಿ.ಸುಧೀರ್, ಬಿ.ಎನ್.ಚಿನ್ನವೆಂಕಟಶ್ರೇಷ್ಠಿ, ಕೆ.ಜಿ.ಲಕ್ಷ್ಮೀ ಪ್ರದಾಸ್, ಅಮೃತವಲ್ಲಿ, ಕೆ.ಎಲ್.ಲಕ್ಷ್ಮೀ ಶ್ರೀನಿವಾಸ್, ಕೆ.ಎಸ್.ವಿ.ರಘು, ಕೆ.ರಾಧ ಉಪಸ್ಥಿತಿತಿಯಲ್ಲಿ ನೆರವೇರಲಿದೆ,
ಗಿರಜಾ ಕಲ್ಯಾಣಾರ್ಥ;- ಲೋಕ ಕಲ್ಯಾಣಾರ್ಥವಾಗಿ ಜೂ.3 ರಂದು 1-30 ಕ್ಕೆ ವಾಸವಿ ಮಹಲ್ ನಲ್ಲಿ ಸಮಾರೋಪ ಸಮಾರಂಭದಲ್ಲಿ ಗಿರಜಾ ಕಲ್ಯಾಣೋತ್ಸವ ಕಾರ್ಯಕ್ರಮ ಕ್ಷೇತ್ರದಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉಪಸ್ಥಿತಿಯಲ್ಲಿ ವಿಯಟ್ನಾಂ ದೇಶದ ಕರ್ನಾಟಕ ರಾಯಭಾರಿ ಎನ್.ಎಸ್.ಶ್ರೀನಿವಾಸಮೂರ್ತಿ, ಪ.ಪಂ.ಸದಸ್ಯ ಹೆಚ್.ಎಸ್.ಪ್ರದೀಪ್‌ಕುಮಾರ್, ವಿ.ಸಿ.ರಮೇಶ್‌ಬಾಬು, ಬಿ.ಎನ್.ಚಿನ್ನವೆಂಕಟಶ್ರೇಷ್ಠಿ, ಹೆಚ್.ಸಿ.ನಾಗೇಂದ್ರಬಾಬು, ಕೆ.ಆರ್.ನಂಜುಂಡಶ್ರೇಷ್ಠಿ, ಕೆ.ವಿ.ಕೃಷ್ಣಯ್ಯಶ್ರೇಷ್ಠಿ ಉಪಸ್ಥಿತಿಯಲ್ಲಿ ನೆರೆವೇರಲಿದ್ದು ನಂತರ ಸಂಜೆ ಕೇರಳ ಚಂಡೆಮೇಳ ಹಾಗೂ ಜಾನಪದ ಕಲಾ ತಂಡಗಳೊಂದಿಗೆ ಪಟ್ಟಣದ ರಾಜ ಬೀದಿಗಳಲ್ಲಿ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ ಮೆರವಣಿಗೆ ಏರ್ಪಡಿಸಲಾಗಿದೆ. ಹಾಗೂ ಜೂ.2 ರಂದು ಸಂಜೆ ಮೈಸೂರಿನ ಶ್ರೀರಾಮಚಂದ್ರ ಶಾಸ್ತಿçà ರವರಿಂದ ಭಕ್ತಿಗಾನಸುಧಾ ಆಧ್ಯಾತ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದ ಅವರು ಜೂ.2 ರಂದು 9 ಗಂಟೆಗೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ವಾಸವಿ ಪೀಠಾಧಿಪತಿಗಳಾದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳನ್ನು ರಾಮನಗರ ಆರ್ಯವೈಶ್ಯ ಮಹಿಳೆಯರಿಂದ ವಿಶೇಷ ದೊಳ್ಳು ಕುಣಿತದೊಂದಿಗೆ ಹಾಗೂ ಜಾನಪದ ಕಲಾತಂಡಗಳೊಂದಿಗೆ ಶೋಭಾಯಾತ್ರೆ ಮೂಲಕ ವೇದಿಕೆಕೆ ಕರೆತರಲಾಗುವುದು ಈ ಶೋಭಾಯಾತ್ರೆಗೆ ಸಮಾಜದ ಎಲ್ಲಾ ಬಂದುಗಳು ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಆರ್ಯ ವೈಶ್ಯ ಮಂಡಲಿ ಅಧ್ಯಕ್ಷ ಕೆ.ಎಸ್.ವೆಂಕಟಾಚಲಶ್ರೇಷ್ಠಿ, ಸಿ.ಎ.ಸಂಪಂಗಿಕೃಷ್ಣಯ್ಯಶೆಟ್ಟಿ, ಎಂ.ಜಿ.ಸುಧೀರ್, ಬಿ.ಎನ್.ಚಿನ್ನವೆಂಕಟಶ್ರೇಷ್ಠಿ, ಹೆಚ್.ಸಿ.ನಾಗೇಂದ್ರಬಾಬು, ಕೆ.ಆರ್.ನಂಜುಂಡಶ್ರೇಷ್ಠಿ ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker