ಕುಣಿಗಲ್
ಲೋಕೋಪಯೋಗಿ ಇಲಾಖೆ ಆವರಣದಲ್ಲಿ ಪಾಳು ಬಿದ್ದಿರುವ ಸಿಹಿ ನೀರಿನ ಬಾವಿ ಹಾಗೂ ವಸತಿ ಗೃಹಗಳು : ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಪ್ರಶ್ನೆ
ಕುಣಿಗಲ್ : ಪಟ್ಟಣದ ಲೋಕೋಪಯೋಗಿ ಇಲಾಖೆ ನೂತನ ಕಟ್ಟಡದ ಪಕ್ಕದಲ್ಲಿರುವ ಹಾಳು ಬಿದ್ದಿರುವ ಸಿಹಿ ನೀರಿನ ಬಾವಿಯನ್ನು ನವೀಕರಿಸಿದರೆ ಲೋಕೋಪಯೋಗಿ ಕಚೇರಿಗೆ ಸೇರಿದ ವಸತಿ ಗೃಹಗಳಿಗೆ ತುಂಬಾ ಅನುಕೂಲವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಈಗಾಗಲೇಕುಣಿಗಲ್ ದೊಡ್ಡ ಕೆರೆಯಲ್ಲಿ ಸಾಕಷ್ಟು ನೀರು ತುಂಬಿರುವುದರಿಂದ ಈ ಜಲದಿಂದ ಈ ಬಾವಿಯಲ್ಲಿ ನೀರು ತುಂಬಿರುತ್ತದೆ ಹಿಂದೆ ಈ ಬಾವಿಯಿಂದ ಕುಣಿಗಲ್ ಪಟ್ಟಣದ ಹಲವಾರು ಸಾರ್ವಜನಿಕರು ಕುಡಿಯುವ ಸಿಹಿ ನೀರನ್ನು ತೆಗೆದುಕೊಂಡು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಬಾವಿಯ ಪಕ್ಕದಲ್ಲಿ ನೀರನ್ನು ಮೇಲೆತ್ತಲು ಕಂಪೋಸ್ ಕೂಡ ಇದೆ ಆದರೆ ನಿರ್ವಹಣೆಯಿಲ್ಲದೆ ಹಾಳು ಬಿದ್ದಿದೆ ಸರ್ಕಾರ ಬಾವಿಗಳನ್ನು ನವೀಕರಿಸಿಕೊಳ್ಳಬಹುದೆಂದು ಆದೇಶವಿದೆ ಎಂದು ಮೂಲಗಳಿಂದ ತಿಳಿದುಬಂದಿದೆ ಸಂಬಂಧಪಟ್ಟ ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸೂಕ್ತ ಕ್ರಮ ಕೈಗೊಂಡು ಸಿಹಿನೀರಿನ ಬಾವಿಯನ್ನು ಶುದ್ಧಗೊಳಿಸಿ ಪಂಪ್ ಹೌಸ್ ನ ನವೀಕರಣಗೊಳಿಸಿ ನೀರನ್ನು ಉಪಯೋಗಿಸಲು ಕ್ರಮ ಕೈಗೊಳ್ಳುವರೇ? ಮುಂದುವರೆದು ಲೋಕೋಪಯೋಗಿ ಇಲಾಖೆಯ ಆವರಣದಲ್ಲಿರುವ ಕೆಲವು ವಸತಿ ಗೃಹಗಳು ಹಾಳು ಬಿದ್ದಿವೆ ಸರ್ಕಾರಿ ನೌಕರರು ಮನೆ ಇಲ್ಲ ಎಂದು ಪರದಾಡುತ್ತಿದ್ದಾರೆ ? ಪಾಳು ಬಿದ್ದಿರುವ ವಸತಿಗೃಹಗಳನ್ನು ನವೀಕರಿಸಿ ಸರ್ಕಾರಿ ನೌಕರರಿಗೆ ನೀಡಬಹುದಿತ್ತು! ಮತ್ತು ಲೋಕೋಪಯೋಗಿ ಇಲಾಖೆಯ ಆವರಣದಲ್ಲಿರುವ ವಸತಿ ಗೃಹಗಳಿಗೆ ಸರ್ಕಾರ ಪ್ರತಿ ವರ್ಷ ನಿರ್ವಹಣೆ ವೆಚ್ಚವನ್ನು ನೀಡುತ್ತಿಲ್ಲವೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ! ಸರ್ಕಾರ ನಿರ್ವಹಣೆಗೆಂದು ಹಣ ನೀಡಿದರೆ ಹಣ ಎಲ್ಲಿ ಪೋಲಾಗುತ್ತಿದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ ? ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ವಸತಿಗೃಹಗಳನ್ನು ನವೀಕರಿಸುವರೆ ಎಂದು ಕಾದು ನೋಡಬೇಕಾಗಿದೆ?
ವರದಿ: ರೇಣುಕ ಪ್ರಸಾದ್