ಕುಣಿಗಲ್ಜಿಲ್ಲೆತುಮಕೂರು

ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿ ಅನಾವರಣ ಕಾರ್ಯಕ್ರಮ ಏಪ್ರಿಲ್ 14 ರ ಬದಲು ಬೇರೆ ದಿನಾಂಕ ನಿಗದಿ ಪಡಿಸಲು ಜಿಲ್ಲಾಡಳಿತಕ್ಕೆ ದಲಿತ್ ನಾರಾಯಣ್ ಒತ್ತಾಯ

ಕುಣಿಗಲ್: ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಏಪ್ರಿಲ್ 14ರ ಬದಲು ಬದಲಿ ದಿನವನ್ನು ನಿಗದಿ ಮಾಡಲು ಜಿಲ್ಲಾಡಳಿತಕ್ಕೆ ದಲಿತ ಜನ ಜಾಗೃತಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ದಲಿತ್ (ನಾರಾಯಣ್) ಒತ್ತಾಯಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ತುಮಕೂರು ಜಿಲ್ಲಾ ಕೇಂದ್ರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿ ಸ್ಥಾಪನೆ ಮಾಡಬೇಕೆಂದು ದಲಿತ ಸಂಘಟನೆಗಳ ಬಹುದಿನದ ಬೇಡಿಕೆಯಾಗಿತ್ತು. ಅದಕ್ಕಾಗಿ ಜಿಲ್ಲೆಯ ಹತ್ತು ತಾಲೂಕಿನ ದಲಿತ ಸಂಘಟನೆಗಳ ಮುಖಂಡರು ಹತ್ತಾರು ವರ್ಷಗಳಿಂದ ಜಿಲ್ಲಾಡಳಿತಕ್ಕೆ ಒತ್ತಾಯ ಹಾಗೂ ಹೋರಾಟ ಮಾಡುತಲೇ ಬಂದಿದ್ದೆವು. ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರ ಹಾಗೂ ಜಿಲ್ಲಾಡಳಿತದ ಸಹಕಾರದಿಂದ ಪುತ್ಥಳಿ ಸ್ಥಾಪನೆಗೆ ಸರ್ಕಾರ ಅನುಮತಿ ನೀಡಿರುವುದು ಸ್ವಾಗತಾರ್ಹ.

ಇಂತಹ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ, ಅರ್ಥಪೂರ್ಣವಾಗಿ, ವಿನೂತನವಾಗಿ ಆಚರಣೆ ಮಾಡಬೇಕಾಗಿರುವುದು ಜಿಲ್ಲಾಡಳಿತದ ಜವಾಬ್ದಾರಿ. ಆದರೆ ಜಿಲ್ಲಾಡಳಿತ ಏಪ್ರಿಲ್ 14ರಂದು ತುಮಕೂರಿನಲ್ಲಿ ನಡೆಯುವ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಮಧ್ಯದಲ್ಲಿ ಪುತ್ತಳಿ ಅನಾವರಣ ಮಾಡುತ್ತಿರುವುದು ನೋವಿನ ಸಂಗತಿ.

ಏಕೆಂದರೆ ಏಪ್ರಿಲ್ 14ರಂದು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಾಲೂಕ ಆಡಳಿತದಿಂದ ದಲಿತ ಸಂಘಟನೆಗಳೊಂದಿಗೆ ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡುತ್ತಿದ್ದು, ಆ ಕಾರ್ಯಕ್ರಮದಲ್ಲಿ ಆಯಾ ತಾಲೂಕಿನ ದಲಿತ ಮುಖಂಡರು ಕಡ್ಡಾಯವಾಗಿ ಭಾಗವಹಿಸುತ್ತಿದ್ದಾರೆ. ತಾಲೂಕಿನಲ್ಲಿ ನಡೆಯುವ ಮಹಾ ನಾಯಕನ ಜಯಂತಿಯನ್ನು ಬಿಟ್ಟು ಅಂಬೇಡ್ಕರ್ ಪುತ್ಥಳಿ ಕಾರ್ಯಕ್ರಮಕ್ಕೆ ಒಂಬತ್ತು ತಾಲೂಕಿನ ನೂರಾರು ದಲಿತ ಮುಖಂಡರು ಭಾಗವಹಿಸಲು ಸಾಧ್ಯವೇ ಇಲ್ಲ ಎಂಬುದನ್ನ ಜಿಲ್ಲಾಡಳಿತ ಅರ್ಥಮಾಡಿಕೊಳ್ಳಬೇಕಾಗಿದೆ.

ಕುಣಿಗಲ್, ಗುಬ್ಬಿ,, ಶಿರಾ, ಪಾವಗಡ, ಮಧುಗಿರಿ, ಚಿಕ್ಕನಾಯಕನಹಳ್ಳಿ, ತುರುವೇಕೆರೆ,ತಿಪಟೂರು, ಕೊರಟಗೆರೆ ತಾಲೂಕಿನ ನೂರಾರು ದಲಿತ ಮುಖಂಡರನ್ನ ಅಂಬೇಡ್ಕರ್ ಪುತ್ಥಳಿ ಕಾರ್ಯಕ್ರಮದಿಂದ ಹೊರಗಿಟ್ಟು ಆಚರಿಸುವುದರಲ್ಲಿ ಅರ್ಥವಿಲ್ಲ.ಈಗಾಗಲೇ ಪುತ್ಥಳಿ ಸ್ಥಾಪಿಸಬೇಕೆಂದು ಕನಸು ಕಂಡು ಹತ್ತಾರು ವರ್ಷಗಳಿಂದ ಹೋರಾಟ ಮಾಡಿದ ನಮ್ಮ ಹಿರಿಯ ದಲಿತ ಮುಖಂಡರು ವಯೊ ಸಹಜ ಸಾವನ್ನಪ್ಪಿರುವುದರಿಂದ ನೋಡುವ ಭಾಗ್ಯವಿಲ್ಲದಂತಾಗಿದೆ.

ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ಏರ್ಪಡಿಸಿರುವ ಪುತ್ಥಳಿ ಅನಾವರಣ ಕಾರ್ಯಕ್ರಮದ ದಿನಾಂಕವನ್ನು ಬದಲಾವಣೆ ಮಾಡುವ ಮೂಲಕ ಬದುಕಿರುವ 9 ತಾಲೂಕಿನ ದಲಿತ ಮುಖಂಡರುಗಳನ್ನು ಕಾರ್ಯಕ್ರಮದಿಂದ ದೂರ ಮಾಡದೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅವಕಾಶ ಕಲ್ಪಿಸಿ ಮಹಾನಾಯಕನ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ನೋಡಿ ಕಣ್ತುಂಬಿ ಕೊಳ್ಳಲು ಅವಕಾಶ ಮಾಡಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker