ಚಿಕ್ಕನಾಯಕನಹಳ್ಳಿಜಿಲ್ಲೆತುಮಕೂರು

ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಈ ಸಮಾಜಕ್ಕೆ ಎರಡು ಕಣ್ಣುಗಳಿದ್ದಂತೆ : ಸಚಿವ ಜೆ.ಸಿ.ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ : ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ, ಸಂಘಟನೆ, ಹೋರಾಟ ಮುಖ್ಯವಾಗಿದ್ದು ಎಲ್ಲರೂ ಶಿಕ್ಷಿತರಾದರೆ ಮಾತ್ರ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಸಾದ್ಯ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ತಾಲ್ಲೂಕಿನ ಜೆ.ಸಿ.ಪುರದಲ್ಲಿ ಶನಿವಾರ ತಾಲ್ಲೂಕು ಆಡಳಿತ, ತಾ.ಪಂ,ಸಮಾಜಕಲ್ಯಾಣ ಇಲಾಖೆ, ಪುರಸಭೆ, ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರ 131ನೇ ಹಾಗೂ ಬಾಬು ಜಗಜೀವನರಾಮ್ ರವರ 115ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸಮಾಜದಲ್ಲಿ ಮಾನಸಿಕ ತುಮುಲ, ನೋವುಂಡಿದ್ದಂತಹ ಸಮಾಜಕ್ಕೆ ದ್ವನಿಯಾದರು , ನಾನು ಸಹ 16ಸಾವಿರ ಪುಟಗಳ ಸಂವಿಧಾನವನ್ನು ಓದಿಕೊಂಡಿದ್ದೇನೆ ಎಂದ ಅವರು ಸುಲಭವಾಗಿ ಸಂವಿಧಾನವನ್ನು ರಚಿಸಲು ಸಾದ್ಯವಾಗಿಲ್ಲ ಅವರು ಅನುಭವಿಸಿದಂತಹ ಕಷ್ಟ ನೋವು ಸೇರಿದಂತೆ ಸಮಾಜದ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿದು ಸಂವಿಧಾನವನ್ನು ರೂಪಿಸುವಾಗ ಅವರು ಅನುಭವಿಸಿದ ಕಷ್ಟ ಯಾರಿಗೂ ಬೇಡ ಎಲ್ಲರ ಪ್ರಶ್ನೇಗಳಿಗೆ ಉತ್ತರ ನೀಡಿ ಒಂದು ದೇಶದ ಹೊಸ ಜೀವನಕ್ಕೆ ಕಾರಣರಾದವರೆಂದರೆ ಅವರು ಅಂಬೇಡ್ಕರ್‌ರವರು ಅವರು ಆಗಿನ ಪರಿಸ್ಥಿತಿಯಲ್ಲಿ ಇದ್ದಂತಹ 500 ಹಾಗೂ 600ಜನ ರಾಜಮನೆತನಗಳ ಬಗ್ಗೆ, ಸಮಾಜದ ಎಲ್ಲಾ ವರ್ಗಗಳ ಬಗ್ಗೆ ರಾಷ್ಟçದ ದ್ವಜ, ಗೀತೆ ಸೇರಿದಂತೆ ಎಲ್ಲದನ್ನು ಗಮನಿಸಿದ್ದರು ಆದರೆ ಅವರ ಆಶೋತ್ತರಗಳು ಈಡೇರಿಲ್ಲ ಅವುಗಳು ಈಡೇರಬೇಕಾದರೆ ಅದಕ್ಕೆ ನಾವು ಅವರು ಹೇಳಿರುವಂತೆ ನಡೆದುಕೊಳ್ಳಬೇಕು ಅಂದರೆ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದ ಅವರು ಸ್ವಾವಲಂಬಿ ಬದುಕಿಗಾಗಿ ನಮ್ಮ ಕ್ಷೇತ್ರದಲ್ಲಿ 600ಬೋರ್‌ವೆಲ್‌ಗಳನ್ನು ನೀಡಿದ್ದೇನೆ, ಸ್ವಂತ ಉದ್ಯೋಗವನ್ನು ಮಾಡಿಕೊಳ್ಳಬಹುದಾಗಿದೆ ದೇಶದ ದೀರ್ಘಾಕಾಲವಧಿಯಲ್ಲಿ ಎಲ್ಲಾ ಖಾತೆಗಳ ಕೇಂದ್ರದ ಮಂತ್ರಿಯಾಗಿದ್ದವರು ಬಾಬುಜಗಜೀವನರಾಂ ರವರು ಅವರು ನಮ್ಮದೇಶದ ಹಸಿರು ಕ್ರಾಂತಿಯ ಹರಿಕಾರ ಕೃಷಿಗೆ ಹೆಚ್ಚು ಒತ್ತು ನೀಡಿದ್ದರು ಅಂತಹವರೊಂದಿಗೆ ಸ್ವಲ್ಪದಿನ ಒಡನಾಟವು ನನಗೆ ಸಿಕ್ಕಿತ್ತು ಅವರನ್ನು ನೆನಪು ಮಾಡಿಕೊಳ್ಳಬೇಕಾಗಿರುವುದು ನಮ ಕರ್ತವ್ಯ ಅಂಬೇಡ್ಕರ್ ಹಾಗೂ ಬಾಬುಜಗಜೀವನರಾಂ ರವರು ಈ ಸಮಾಜಕ್ಕೆ ಎರಡುಕಣ್ಣುಗಳಿದ್ದಂತೆ ಆ ಕಣ್ಣುಗಳೊಂದಿಗೆ ನಾವು ನೋಡುತ್ತಾ ಮುಂದೆ ನಡೆದರೆ ಉತ್ತಮ ಸಮಾಜ ಅಭಿವೃದ್ದಿ ಸಾದ್ಯ ಎಂದರು.
ಸಮಾರಂಭದ ದಿವ್ಯ ಸಾನಿದ್ಯವನ್ನು ವಹಿಸಿದ್ದ ಚಿತ್ರದುರ್ಗದ ಛಲವಾಧಿಸಂಸ್ಥಾನಮಠದ ಬಸವನಾಗಿದೇವಸ್ವಾಮಿ ಮಾತನಾಡಿ ನಾವು ಯಂತ್ರ ಮಂತ್ರದಿಂದ ಜೀವನ ಮಾಡಲು ಸಾದ್ಯವಿಲ್ಲ ಶಿಕ್ಷಣದಿಂದ ಮಾತ್ರ ಅಭಿವೃದ್ದಿ ಸಾದ್ಯ. ಇಂದು ಸಾತ್ವಿಕತೆ ನಿಸ್ವಾರ್ಥಗುಣಗಳು ಸತ್ಯ ಪ್ರಾಮಾಣಿಕತೆಗಳಿಂದ ಬದುಕಿದಾಗ ಮಾತ್ರ ಸಾಧನೆ ಸಾದ್ಯ. ಇಂದು ಶಿಕ್ಷಿತರೇ ಪಂಚಾಂಗವನ್ನು ನೀಡಿ ಅವರು ನಮ್ಮ ರಾಜ್ಯಾಂಗವನ್ನು ಕೈಯಲ್ಲಿಡಿದುಕೊಂಡು ನಮ್ಮನ್ನು ಆಳುತ್ತಿದ್ದಾರೆ ಎಂದರು. ಮಾನವ ತನ್ನ ನಿಸ್ವಾರ್ಥ ಹಾಗೂ ಪ್ರಾಮಾಣಿಕತೆಯ ಜೀವನದಿಂದ ಬದುಕಿದಾಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ  ಎಲ್ಲರೂ ಶಿಕ್ಷಣಕ್ಕೆ ಒತ್ತು ನೀಡಿ ಸಮಾಜದ ಅಭಿವೃದ್ದಿಗೆ ಮುಂದಾಗಿ ಎಂದ ಅವರು ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ರವರ ಜೀವನವೇ ನಮಗೆ ಮಾರ್ಗದರ್ಶನಗಳು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮಾಧಿಗದಂಡೋರದ ಪ್ರಧಾನಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ಸಿ.ಎಸ್.ಲಿಂಗದೇವರು ಮಾತನಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ತೇಜಸ್ವೀನಿ, ಇಒ ವಸಂತಕುಮಾರ್, ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ತ್ರಿವೇಣಿ, ಪುರಸಭಾದ್ಯಕ್ಷೆ ಪುಷ್ಪಾ, ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್, ಜೆ.ಸಿ.ಪುರ ಗ್ರಾ.ಪಂ.ಅಧ್ಯಕ್ಷೆ ಟಿ.ಬಿ.ಶಿವಗಂಗಾ, ಕುಪ್ಪೂರುಗ್ರಾ.ಪಂ.ಅದ್ಯಕ್ಷ ದೇವರಾಜು, ಬಿಆರ್‌ಸಿ ಸಂಗಮೇಶ್, ಮಾಜಿ ತಾ.ಪಂ.ಉಪಾದ್ಯಕ್ಷ ನಿರಂಜನಮೂರ್ತಿ, ಜಿಲ್ಲಾ ಬಿಜೆಪಿ ಉಪಾದ್ಯಕ್ಷ ಕೇಶವಮೂರ್ತಿ, ಜೆ.ಸಿ.ಪುರಗೋವಿಂದರಾಜು ಸೇರಿದಂತೆ ಮತ್ತಿತರರು ಇದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker