ಲೋಕಮ್ಮನಹಳ್ಳಿ ಗ್ರಾ.ಪಂ.ನೂತನ ಅದ್ಯಕ್ಷರಾಗಿ ಮಮತಾಕೃಷ್ಣಮೂರ್ತಿ ಆಯ್ಕೆ

ತುರುವೇಕೆರೆ : ತಾಲೂಕಿನ ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ತಾವರೆಕೆರೆಯ ಮಮತಾಕೃಷ್ಣಮೂರ್ತಿ ಅವರು ಅವಿರೋಧವಾಗಿ ಆಯ್ಕೆಗೊಂಡರು.
ಈ ಹಿಂದೆ ಲೋಕಮ್ಮನಹಳ್ಳಿ ಗ್ರಾ.ಪಂ.ನ ಅಧ್ಯಕ್ಷರಾಗಿದ್ದ ನಳಿನಾಶಶಿಧರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. 17 ಸದಸ್ಯ ಬಲವುಲ್ಳ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಮಮತಾಕೃಷ್ಣಮೂರ್ತಿ ನಾಮಪತ್ರ ಸಲ್ಲಿಸಿದರು. ಅಂತಿಮವಾಗಿ ಕಣದಲ್ಲಿ ಉಳಿದ ಮಮತಾಕೃಷ್ಣಮೂರ್ತಿ ಅವರು ಲೋಕಮ್ಮನಹಳ್ಳಿ ಗ್ರಾ.ಪಂ. ನೂತನ ಅದ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ತಹಶೀಲ್ದಾರ್ ನಯೀಮುನ್ನಿಸ್ಸಾ ಅವರು ಘೋಷಿಸಿದರು. ನೂತನ ಅದ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ನೂತನ ಅಧ್ಯಕ್ಷೆ ಮಮತಾಕೃಷ್ಣಮೂರ್ತಿ ಮಾತನಾಡಿ ನನ್ನನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸಹಕರಿಸಿದ ಸಹ ಸದಸ್ಯರುಗಳಿಗೆ ಹಾಗೂ ಮುಖಂಡರುಗಳಿಗೆ ವಿಶೇಷ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ. ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಮೂಲಸೌಕರ್ಯ ಕೊರತೆಯಾಗದಂತೆ ನಿಗಾವಹಿಸುತ್ತೇನೆ ಎಂದರು.
ನೂತನ ಅಧ್ಯಕ್ಷರನ್ನು ನಿಕಟಪೂರ್ವ ಅಧ್ಯಕ್ಷೆ ನಳಿನಾಶಶಿಧರ್, ಸದಸ್ಯ ಮಂಜುನಾಥ್, ಹಾಗೂ ಸಹ ಸದಸ್ಯರುಗಳು ಮುಖಂಡರಾದ ತಾವರೆಕೆರೆತಿಮ್ಮೇಗೌಡ, ಶಂಕರಪ್ಪ,ಮಾವಿನಹಳ್ಳಿಕುಮಾರಸ್ವಾಮಿ, ಉಮಾಮಹೇಶ್, ಕೋಳಘಟ್ಟಶಿವಾನಂದ್,ಕೆ.ಟಿ.ಶಂಕರ್, ಕುಶಾಲ್‌ಕುಮಾರ್, ಸೇರಿದಂತೆ ಅನೇಕರು ಅಭಿನಂದಿಸಿದರು.