ಮಧುಗಿರಿ: ರಾಜ್ಯದಲ್ಲಿ ನಡೆದ ಚುನಾವಣೆಗಳಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೇರಲು ಹಿಂದುಳಿದ ವರ್ಗಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ನೆ.ಲ.ನರೇಂದ್ರ ಬಾಬು ತಿಳಿಸಿದರು.
ಪಟ್ಟಣದ ಭಾಜಪ ಕಚೇರಿ ಯಲ್ಲಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಮೋರ್ಚಾದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು. ಭಾಜಪ ಪಕ್ಷದಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ಉನ್ನತ ಸ್ಥಾನಮಾನ ನೀಡುವಂತಹ ಏಕೈಕ ಪಕ್ಷವಾಗಿದೆ. ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಯವರು ನೇತೃತ್ವದ ಸರಕಾರದಲ್ಲಿ 13 ಹಿಂದುಳಿದ ಹಾಗೂ ದಲಿತ ಸಮುದಾಯಗಳ ಅಭಿವೃದ್ಧಿ ನಿಗಮಗಳಿದ್ದು ಇವುಗಳ ಮೂಲಕ ಸಮುದಾಯಗಳ ಅಭಿವೃದ್ಧಿ ಗಾಗಿ 400ಕೋಟಿ ಅನುದಾನವನ್ನು ಮೀಸಲಿರಿಸಿದ್ದಾರೆ. ಇಂದಿನ ಜಾಗತೀಕರಣದಿಂದಾಗಿ ಕುಲ ಕಸುಬುಗಳು ನಶಿಸಿಹೋಗಿವೆ.
ಹಿಂದುಳಿದ ವರ್ಗಗಳ ಜನರು ಕಾಯಕ ಯೋಗಿಗಳು ಶ್ರಮಿಕ ರಾಗಿದ್ದು ಅವರ ಅಭಿವೃದ್ದಿಗೆ ನಮ್ಮ ಸರಕಾರ ಬದ್ಧವಾಗಿದೆ. ಮುಂಬರುವ ಚುನಾವಣೆ ಯಲ್ಲಿ ಅಧಿಕಾರದ ಜತೆಯಲ್ಲಿ ಪ್ರತಿಯೊಬ್ಬರನ್ನು ಗುರುತಿಸಿ ಗೌರವಿಸಬೇಕಾಗಿದೆ.
ಸಂಘಟನೆಯ ದೃಷ್ಟಿಯಿಂದಾಗಿ ಹಿಂದುಳಿದ ವರ್ಗಗಳ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿದೆ ಎಂದರು.
ಮಧುಗಿರಿಯ ಜಿಲ್ಲಾಧ್ಯಕ್ಷ ಬಿ ಕೆ ಮಂಜುನಾಥ್ ಮಾತನಾಡಿ ಬಿಜೆಪಿ ಪಕ್ಷದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ನರೇಂದ್ರ ಮೋದಿಯವರಿಗೆ ಪ್ರಧಾನಿ ಹುದ್ದೆಯನ್ನು ನೀಡಿ ಗೌರವಿಸಿದೆ. ಇಂದೂ ನಮ್ಮ ಪಕ್ಷವು ದೇಶದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ. ನಮ್ಮ ಜಿಲ್ಲೆಯಲ್ಲಿ ನಾರಾಯಣಸ್ವಾಮಿ, ರಾಜೇಶ್ ಗೌಡ, ಬಸವರಾಜು ರವರ ಗೆಲುವಿನಲ್ಲಿ ಹಿಂದುಳಿದ ವರ್ಗಗಳು ಪ್ರಮುಖ ವಹಿಸಿದ್ದರಿಂದ ನಮ್ಮ ಪಕ್ಷ ಜಯಗಳಿಸಲು ಸಾಧ್ಯವಾಯಿತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರು ಹಿಂದುಳಿದ ವರ್ಗಗಳ ಪರವಾಗಿ ಅನೇಕ ಹೋರಾಟಗಳನ್ನು ನಡೆಸಿ ಅನೇಕ ಮಹಾನೀಯರ ಜಯಂತಿಗಳ ಆಚರಣೆಗೆ ಕ್ರಮಕೈಗೊಂಡರು ಎಂದರು.
ಹಿಂದುಳಿದ ವರ್ಗದ ಜಿಲ್ಲಾ ಮೋರ್ಚಾದ ಅಧ್ಯಕ್ಷ ಹಾಗೂ ತುಮಕೂರು ವಿ ವಿಯ ಸಿಂಡಿಕೇಟ್ ಸದಸ್ಯ ಶ್ರೀನಿವಾಸ್ ಮಾತನಾಡಿ ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳು ನಮ್ಮ ಪಕ್ಷವನ್ನು ಬೆಂಬಲಿಸಿದ್ದರಿಂದ ಅಲ್ಲಿ ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತು. ಕಾಂಗ್ರೆಸ್ ನವರು ಜನರಿಗೆ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಲಾಗದೆ ಇದ್ದುದ್ದರಿಂದ ಅವರು ಅಧಿಕಾರ ಕಳೆದು ಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಯವರು ಹಿಂದುಳಿದ ವರ್ಗಗಳ ಪರವಾಗಿ ದ್ದು ಇತ್ತೀಚಿನ ಬಜೆಟ್ ನಲ್ಲಿ ಹಿಂದುಳಿದ ವರ್ಗಗಳ ಸಮುದಾಯದವರು ನಡೆಸುತ್ತಿರುವ 65 ಮಠಗಳ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಗಾಗಿ 119 ಕೋಟಿ ರೂ ಗಳ ಅನುದಾನವನ್ನು ಮಂಜೂರು ಮಾಡಿ ಸಮುದಾಯಗಳ ಅಭಿವೃದ್ದಿಗೆ ಕಾರಣಿಭೂತರಾಗಿದ್ದಾರೆಂದರು.
ರಾಜ್ಯ ಉಪಾಧ್ಯಕ್ಷ ಸುರೇಶ್ ಬಾಬು, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ರಾಜ್ಯ ಕಾರ್ಯಕಾರಿಣಿ ಸದಸ್ಯ ರುದ್ರೇಶ್, ಮುಖಂಡರಾದ ತಿಮ್ಮಜ್ಜ, ಪಾವಗಡ ರವಿ, ಸಿದ್ದೇಶ್ ಯಾದವ್, ತೋವಿನಕೆರೆ ಹನುಮಂತರಾಜು, ದುಗ್ಗಿವೆಂಕಟೇಶ್, ಸುರೇಶ್, ನಾಗೇಂದ್ರ, ಜಗದೀಶ್ ಆಚಾರ್, ಕೃಷ್ಣಮೂರ್ತಿ, ಜ್ಞಾನೇಶ್ ಹಾಗೂ ಮುಂತಾದವರು ಇದ್ದರು.