ಕೊರಟಗೆರೆ

ಬಜ್ ಹಬ್ಬದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕೊರಟಗೆರೆ:ಬಜ್ ಇಂಡಿಯಾ ಸಂಸ್ಥೆಯ ವತಿಯಿಂದ ಮಂಗಳವಾರದಂದು ಪಟ್ಟಣದ ಹಿಂದೂಸಾದರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಬಜ್ ಹಬ್ಬದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬಜ್ ಸಂಸ್ಥೆಯ ಸೀನಿಯರ್ ಮ್ಯಾನೇಜರ್ ಆದ ವೆಂಕಟೇಶ್ ಜ್ಯೋತಿ ಬೆಳಗಿಸಿ ಮಾತನಾಡಿದ ಅವರು ಬಜ್ ಸಂಸ್ಥೆಯು 2012 ರಲ್ಲಿ ಕಟ್ಟಿ ಬೆಳೆಸಿದ ಉತ್ತರಾನಾರಯಣ್ ನ್ ಎಂಬ ಮಹಿಳೆಯಿಂದ ಕಾರ್ಯ ರೂಪುಗೂಂಡಿತ್ತು.ಇವರು ಈ ಸಂಸ್ಥೆಯ ಮೊದಲ ತರಬೇತಿದಾರರು.ಬಜ್ ಸಂಸ್ಥೆಯು ಅತೀ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಹಯೋಗದೊಂದಿಗೆ ನಡೆಸಲಾಗಿದ್ದು ಶೈಕ್ಷಣಿಕ ಸಾಕ್ಷರತೆ ಮತ್ತು ಹಣಕಾಸು ಸಾಕ್ಷರತೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮುಖ್ಯವಾಗಿ ಹಣಕಾಸು ಸಾಕ್ಷರತೆಗೆ ಒತ್ತು ನೀಡಿ ತರಬೇತಿ ನೀಡಲಾಗುತ್ತದೆ.ಹಣಕಾಸು ಸಾಕ್ಷರತೆ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಮೂರು ಅಂಶಗಳಿವೆ. ಹಣಕಾಸು ನಿರ್ವಹಣೆ,ಉದ್ಯಮ ಶೀಲತಾ ಕೌಶಲ್ಯಗಳು,ವೈಯಕ್ತಿಕ ಅಭಿವೃದ್ಧಿಗಳ ಬಗ್ಗೆ ತರಬೇತಿ ನೀಡಲಾಗುತ್ತದೆ .ತರಬೇತಿ ನೀಡಿದವರನ್ನು ಗೆಳತಿ ಎಂಬುದಾಗಿ ಕರೆಯಲಾಗುತ್ತದೆ.ಒಟ್ಟಾರೆಯಾಗಿ ಬಜ್ ಸಂಸ್ಥೆಯಲ್ಲಿ 7000.ಮಂದಿ ಗೆಳತಿಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಎಲ್ಲರ ಜೊತೆಯಾಗಿ ಎಲ್ಲರ ಜೊತೆ ಜೊತೆಗೆ ನಮ್ಮನ್ನು ನಾವು ಹೇಗೆ ಗುರ್ತಿಸಕೊಳ್ಳಬಹುದು ನಮ್ಮೊಳಗಿರುವ ಶಕ್ತಿ ಏನು.ನಮ್ಮ ಸಾಮರ್ಥ್ಯ ಏನು ಎಂಬುದನ್ನು ಅರ್ಥಮಾಡಿಸಲು 4 ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ .ಜೇನುಗೂಡು ಕಾರ್ಯಕ್ರಮ,ಬಜ್ ಹಸಿವು ಕಾರ್ಯಕ್ರಮ, ಬಜ್ ವ್ಯಾಪಾರ ಕಾರ್ಯಕ್ರಮಗಳಿರುತ್ತವೆ.ಈ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದು ಭಾರತ ,ಕೀನ್ಯಾ, ಕಾಂಬೀಯಾ,ಬಜ್,ಜಾಜಿಯಾ,ನೆದರ್ ಲ್ಯಾಂಡ್ ಗಳಲ್ಲಿ ಸಂಸ್ಥೆ ಇದೆ. 2016 ರಲ್ಲಿ ತುಮಕೂರಿನಲ್ಲಿ ಪ್ರಾರಂಭಗೊಂಡಿತು.ಇಲ್ಲಿ ಹಾಸನ,ರಾಮನಗರ,ತುಮಕೂರು ಇನ್ನಿತರ ಒಟ್ಟು 7 ಜಿಲ್ಲೆಗಳಲ್ಲಿ ಸಂಸ್ಥೆ ಇದೆ.ಎಂದು ತಿಳಿಸಿದರು.
ತಾ.ಪಂಚಾಯ್ತಿಯ ಇಓ ದೊಡ್ಡಸಿದ್ದಯ್ಯ ಮಾತನಾಡಿ ಹೆಣ್ಣು ದೇಶದ ಕಣ್ಣು ಎಂದು ತಿಳಿಸುತ್ತಾ ಮಹಿಳೆಯರಿಗೆ ಸರ್ಕಾರ ವಿವಿಧ ರೀತಿಯ ಸವಲತ್ತುಗಳನ್ನು ನೀಡುತ್ತಿದೆ ಅದನ್ನು ಸದ್ಬಳಕೆ ಮಾಡಿಕೊಳ್ಳಲು ತಿಳಿಸಿದರು.
ಪೋಲೀಸ್ ಇಲಾಖೆಯ ಮಂಜುಳ ಮಾತನಾಡಿ ಬಾಲ್ಯವಿವಾಹದ ಬಗ್ಗೆ ಗ್ರಾಮೀಣ ಪ್ರದೇಶದ ಕೆಲ ಮಹಿಳೆಯರು ಅನಕ್ಷರಸ್ಥರಿದ್ದು ಯಾವುದೇ ರೀತಿಯ ಸರ್ಕಾರಿ ಇಲಾಖೆಯ ಕೆಲಸ ಕಾರ್ಯಗಳಿಗೆ ಮದ್ಯವರ್ತಿಗಳಿಗೆ ಬಲಿಯಾಗದೇ ನೀವುಗಳೇ ಮುಂದಾಗಿ ಎಂದು ತಿಳಿಸಿದರು.ಅನುಮಾನಸ್ಪದವ್ಯಕ್ತಿಗಳು ವ್ಯಾಪಾರ ವ್ಯವಹಾರಕ್ಕೆ ಬಂದವರನ್ನು ನಂಬಬೇಡಿ, ನಿಮ್ಮ ಸಮಸ್ಯೆಗಳಿಗೆ 112 ನಂಬರ್ ಗೆ ಕರೆಮಾಡಿ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಬಿಕಾ ಮಾತನಾಡಿ ಮಹಿಳೆಯರು ಸಾಮಾಜಿಕವಾಗಿ.ಆರ್ಥಿಕವಾಗಿ.ಮಾನಸಿಕವಾಗಿ ಅಭಿವೃದ್ಧಿ ಹೊಂದಿರುವುದನ್ನು ಮಹಿಳಾ ಸಬಲೀಕರಣ ಎನ್ನಬಹುದು ಮಹಿಳೆಯರ ಮೇಲೆ ಇತ್ತೀಚಿನ ದಿನಗಳಲ್ಲಿ ದೌರ್ಜನ್ಯಗಳು ಅತೀ ಹೆಚ್ಚಾಗಿ ನಡೆಯುತ್ತಿವೆ.ಭ್ರೂಣ ಹತ್ಯೆ ನಿಷೇಧ ಕಾಯಿದೆ,ಪೋಕ್ಸೋ ಕಾಯಿದೆ,ಬಾಲ್ಯವಿವಾಹ ಕಾಯಿದೆ,ಮಹಿಳೆ ವಿರುದ್ದ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ,ವರದಕ್ಷಿಣೆ ನಿಷೇದ ಕಾಯಿದೆ,ಮಹಿಳೆಯರಲ್ಲಿ ಶಿಕ್ಷಣದ ಜೊತೆಗೆ ಆತ್ಮವಿಶ್ವಾಸ ಇರಬೇಕು ,ಮುಖ್ಯವಾಗಿ ತಾಯಿಯ ಪಾತ್ರ ಮಕ್ಕಳ ಮೇಲೆ ಬಹಳ ಮುಖ್ಯವಾಗಿ ಇರಬೇಕು ಏಕೆಂದರೆ ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚಾಗಿ ಬಾಲ್ಯವಿವಾಹಗಳು ಹಾಗೂ ಪೋಕ್ಸೋ ಕಾಯಿದೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ಆರ್ಯುವೇದಿಕ್ ತಜ್ಞರಾದ ಭವ್ಯ ಹಾಗೂ ಸಾರ್ವಜನಿಕ ಆಸ್ಪತ್ರೆಯ ದೀಪಾಲಿಯವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ನವನೀತ್,ಬಜ್ ಸಂಸ್ಥೆ ಲಿಂಗದೇವರು ರಾಜೇಶ್,ಶೋಭಾ,ಪುಷ್ಪಾಂಜಲಿ,ರೋಜಾ ಮತ್ತಿತರರು ಹಾಜರಿದ್ದರು.

ವರದಿ- ಕೆ.ಎಸ್.ಲಕ್ಷ್ಮೀಕಾಂತ

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker