ಮಧುಗಿರಿ : ಆನ್ ಲೈನ್ ನಲ್ಲಿ ಲರ್ನಿಂಗ್ ಲೈಸೆನ್ಸ್ ಪಡೆಯಲು ಅರ್ಜಿ ಸಲ್ಲಿಸಿದವರು ಹೆಚ್ಚುವರಿಯಾಗಿ 250 ರೂಗಳನ್ನು ನೀಡಿದರೆ ಮಾತ್ರ ಪರಿಶೀಲನೆ ನಡೆಸುತ್ತಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ.
ಪಟ್ಟಣದ ಎ ಆರ್ ಟಿ ಓ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಲಿಕಾ ಚಾಲನೆಯ ಪ್ರಮಾಣ ಪತ್ರ ವನ್ನು ವಿತರಿಸುವ ಅಧಿಕಾರಿ ಹೆಚ್ಚುವರಿಯಾಗಿ ಹಣ ಪಡೆಯುತ್ತಿದ್ದಾರೆಂಬ ಆರೋಪಗಳು ಕೇಳಿ ಬಂದಿವೆ.
ಸರಕಾರವು ಈಗಾಗಲೇ ಸಾರಿಗೆ ಇಲಾಖೆಯ ಸೇವೆಗಳನ್ನು ಡಿಜಿಟಲೀಕರಣ ಹಾಗೂ ಸರಳೀಕರಣ ಗೊಳಿಸಿ ಸಾರ್ವಜನಿಕರ ಕಚೇರಿ ಅಲೆದಾಟ ಹಾಗೂ ಸಮಯದ ಉಳಿತಾಯದ ಉದ್ದೇಶದಿಂದ ಸಾರ್ವಜನಿಕರು ಮನೆಯಲ್ಲಿ ಕುಳಿತು ಕೊಂಡು 350 ರೂಗಳನ್ನು ಆನ್ ಲೈನ್ ಮೂಲಕ ಹಣ ಪಾವತಿ ಮಾಡಿದರೆ 1 ವಾರದೊಳಗೆ ಆಧಾರ್ ಆಫ್ ಡೇಟ್ ಆಗಿದ್ದರೆ ಪ್ರಮಾಣ ಪತ್ರ ದೊರೆಯತ್ತದೆ. ಹಾಗೂ ಆಧಾರ್ ಕಾರ್ಡ್ ಆಫ್ ಡೇಟ್ ಆಗದಿದ್ದರೆ ಅಥವಾ ಏನಾದರೂ ವ್ಯತ್ಯಾಸಗಳೇನಾದರೂ ಇದ್ದರೆ ಅಂತಹ ಅರ್ಜಿಗಳನ್ನು ಅಧಿಕಾರಿಯು ಸರಿಯಿದ್ದರೆ ಪರಿಶೀಲಿಸಿ ಮುಂದಿನ ಕ್ರಮಕ್ಕೆ ಸಲ್ಲಿಸಲಾಗುತ್ತದೆ.
ಆದರೆ ಡಿ ಎಲ್ ರಾಜಣ್ಣ ಎಂಬ ಸರಕಾರಿ ಅಧಿಕಾರಿ ರಾಜ ರೋಷವಾಗಿ ಯಾರೂ ಹೆಚ್ಚುವರಿಯಾಗಿ 250 ರೂ ಗಳನ್ನು ನೀಡುತ್ತಾರೊ ಅಂತಹವರಿಗೆ ಕ್ಷಣಾರ್ಧದಲ್ಲಿ ಪ್ರಥಮ ಹಂತದ ಕಲಿಕಾ ದ್ವಿಚಕ್ರ ಮತ್ತು ಲಘು ಮೋಟಾರು ವಾಹನಗಳ ಚಲನಾ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸಿದ ಒಂದೇ ದಿನದಲ್ಲಿ ಹಣ ಪಡೆದು ನೀಡುತ್ತಿದ್ದಾರೆಂಬ ಆರೋಪಗಳು ಸಾರ್ವಜನಿಕ ರಿಂದ ಕೇಳಿ ಬಂದಿದ್ದು, ಕೂಡಲೇ ಇಂತಹ ಅಧಿಕಾರಿ ವಿರುದ್ಧ ಸಂಭಧಪಟ್ಟವರು ಕ್ರಮ ಕೈಗೊಳ್ಳಬೇಕೆಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.