ತುರುವೇಕೆರೆಸುದ್ದಿ
Trending

ಜೆ.ಡಿ.ಎಸ್. ಭದ್ರ ಕೋಟೆ ತುಮಕೂರನ್ನು ಬಿಟ್ಟು ಕೊಡುವುದಿಲ್ಲ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ದಬ್ಬೇಘಟ್ಟ ಹೋಬಳಿ ಗೂರಲಮಠ ಗ್ರಾಮದ ಸೋಮೇಶ್ವರ ಸ್ವಾಮಿ ದೇವಾಲಯ ಉದ್ಘಾಟನೆ

ತುರುವೇಕೆರೆ : ಜೆ.ಡಿ.ಎಸ್. ಭದ್ರ ಕೋಟೆಯಾದ ತುಮಕೂರನ್ನು ಬಿಟ್ಟು ಕೊಡುವುದಿಲ್ಲ, ನಾನಿನ್ನೂ ಬದುಕಿದ್ದೇನೆ ರಾಜ್ಯದಲ್ಲಿ ಮತ್ತೆ ಜೆ.ಡಿಎಸ್.ನ್ನು ಅಧಿಕಾರಕ್ಕೆ ತರುವುದು ಶತ ಸಿದ್ದ, ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದರು.
ತಾಲೂಕಿನ ದಬ್ಬೇಘಟ್ಟ ಹೋಬಳಿ ಗೂರಲಮಠ ಗ್ರಾಮದ ಸೋಮೇಶ್ವರ ಸ್ವಾಮಿ ದೇಗುಲದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ತುಮಕೂರು ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೂ ಬೇಟಿ ಕೊಡುತ್ತೇನೆ. ಒಂದಲ್ಲಾ ಎರಡೆರಡು ಬಾರಿ ತುಮಕೂರು ಜಿಲ್ಲೆಯಾದ್ಯಂತ ಪ್ರವಾಸ ಮಾಡುತ್ತೇನೆ. ರಾಜ್ಯದ ಉಳಿವಿಗಾಗಿ ಜೆ.ಡಿ.ಎಸ್. ನ್ನು ಅಧಿಕಾರಕ್ಕೆ ತರುವ ಅಗತ್ಯವಿದೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತೇನೆ. ನಮ್ಮನ್ನು ಅಧಿಕಾರದಿಂದ ದೂರವಿಡಬೇಕೆಂಬ ನಿಟ್ಟಿನಲ್ಲಿ ರಾಷ್ಟಿçÃಯ ಪಕ್ಷಗಳು ಆಡುತ್ತಿರುವ ಆಟವನ್ನು ನೋಡುತ್ತಿದ್ದೇನೆ. ಸಮಯ ಬಂದಾಗ ಉತ್ತರ ನೀಡುತ್ತೇನೆ, ಪ್ರತಿ ಕ್ವಿಂಟಾಲ್ ರಾಗಿಗೆ 4 ಸಾವಿರ ರೂ ನಿಗದಿಪಡಿಸುವಂತೆ ಸಂಸತ್ತಿನಲ್ಲಿ ಧ್ವನಿ ಮಾಡುತ್ತೇನೆ. ರಾಜ್ಯದ ಹಿತ ಕಾಯುವ ನಿಟ್ಟಿನಲ್ಲಿ ನನ್ನ ಹೋರಾಟ ನಿಲ್ಲದು ಎಂದರು.
ಅಹಿAದಕ್ಕೆ ರಾಜಕೀಯ ಶಕ್ತಿ ನೀಡಿದ್ದು ನಾವು.
ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಪರಿಶಿಷ್ಟ ಜಾತಿ, ವರ್ಗ ಮುಸ್ಲಿಂ ಹಾಗೂ ಹಿಂದುಳಿದ ವರ್ಗಗಳಿಗೆ ಪಂಚಾಯಿತಿ ಮಟ್ಟದಲ್ಲಿ ರಾಜಕೀಯ ಶಕ್ತಿ ನೀಡಬೇಕೆಂಬ ನಿಟ್ಟಿನಲ್ಲಿ ಮೀಸಲಾತಿ ಜಾರಿಗೆ ತಂದಿದ್ದೆ. ಆನಂತರ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರಕಾರ ಇದನ್ನು ಉಳಿಸಿಕೊಳ್ಳುವ ಮನಸ್ಸು ಮಾಡಲಿಲ್ಲ. ದೇವೇಗೌಡರು ಅಹಿಂದಾ ವರ್ಗಕ್ಕೆ ರಾಜಕೀಯ ಶಕ್ತಿಯನ್ನು ನೀಡುವುದನ್ನು ಸಹಿಸದೇ ಅಸೂಯೆಪಟ್ಟರು. ಹೆಸರಿಗೆ ನಾನು ಅಹಿಂದ ನಾಯಕರೆಂದು ಹೇಳಿಕೊಳ್ಳುವವರು ಅಹಿಂದ ವರ್ಗಕ್ಕೆ ರಾಜಕೀಯ ಮೀಸಲಾತಿ ಜಾರಿಗೆ ತಂದಿರಲಿಲ್ಲ, ಅಹಿಂದಕ್ಕೆ ರಾಜಕೀಯ ಶಕ್ತಿ ನೀಡಿದ್ದು ನಮ್ಮ ತಪ್ಪಾ, ನಮ್ಮನ್ನು ಸೋಲಿಸಿದ್ದಾದರೂ ಏಕೆ ಎಂದು ಪ್ರಶ್ನಿಸಿದರು.

ವೇದಿಕೆಯ ಮೇಲಿದ್ದ ಗಣ್ಯರನ್ನು ಹೆಸರಿಸುವ ವೇಳೆ ಎಂ.ಟಿ.ಕೃಷ್ಣಪ್ಪನವರ ಹೆಸರನ್ನು ದೇವೇಗೌಡರು ಭಾವಿ ಶಾಸಕರು ಎಂದು ಸಂಬೋದಿಸಿದರು. ಈ ಮೂಲಕ 2023 ರ ಚುನಾವಣೆಯ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪನವರಲ್ಲಿ ಆತ್ಮವಿಶ್ವಾಸ ತುಂಬಿದರು. ಮತ್ತೆ ತುರುವೇಕೆರೆಯಲ್ಲಿ ಜೆ.ಡಿ.ಎಸ್. ಪಕ್ಷ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದರು.ಇದಕ್ಕೆ ಉತ್ತರವಾಗಿ ಸಭಿಕರಿಂದ ಚಪ್ಪಾಳೆಗಳ ಸುರಿಮಳೆಯ ಬೆಂಬಲ ತೇಲಿ ಬಂತು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಮಾಜಿ ಪ್ರಧಾನಿ ದೇವೇಗೌಡರಿಗೆ ಬಹಳ ಪ್ರೀತಿ, ಈ ರಾಜ್ಯದ ರೈತರು ಉಳಿದಿದ್ದಾರೆಂದರೇ ಅದು ದೇವೇಗೌಡರಿಂದ ಮಾತ್ರ. ಬುಡುಬುಡಿಕೆ ರಾಜಕಾರಣಿಗಳ ರೈತ ಹಿತ ಕಾಯುವ ನಾಟಕವಾಡುವರಿಂದಲ್ಲ. ಬುಡುಬುಡಿಕೆ ರಾಜಕೀಯದ ಮೇಕೆದಾಟು ಪಾದಯಾತ್ರೆಯಿಂದ ಪ್ರಯೋಜನವಾಗದು. ತುಮಕೂರು ಜಿಲ್ಲೆಗೆ ದೇವೇಗೌಡರು ಹೇಮೆಯನ್ನು ತರಲು ಶ್ರಮಿಸದಿದ್ದರೇ ತುಮಕೂರು ಜಿಲ್ಲೆ ಬಳ್ಳಾರಿಯಾಗುತ್ತಿತ್ತು. ನೀರಾವರಿ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಕೊಡುಗೆ ಅನನ್ಯವಾದುದು ಎಂದರು.
ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ ವಹಿಸಿದ್ದರು. ನಾಗಮಂಗಲ ಶಾಸಕರಾದ ಸುರೇಶ್‌ಗೌಡ, ರಾಜ್ಯ ಜೆ.ಡಿ.ಎಸ್. ಯುವ ಘಟಕದ ಚಂದ್ರೇಶ್, ಎ.ಪಿ.ಎಂ.ಸಿ ನಿರ್ದೇಶಕ ವಿಜಯೇಂದ್ರ, ಒಕ್ಕಲಿಗರ ಸಂಘದ ಹೆಚ್.ಟಿ.ಕೃಷ್ಣಪ್ಪ, ಗ್ರಾ.ಪಂ. ಸದಸ್ಯರುಗಳಾದ ಈಶ್ವರ್, ಮಂಜುನಾಥ್, ದೇಗುಲ ಸಮಿತಿಯ ಪದಾದಿಕಾರಿಗಳು ಹಾಗೂ ಭಕ್ತವೃಂದ ಇದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker