ಪಾವಗಡ
ಅಕೌಂಟೆಂಟ್ ಶಿವಕುಮಾರ್ ಎಸಿಬಿ ಬಲೆಗೆ
ಪಾವಗಡ: ಐದು ಸಾವಿರ ರೂಪಾಯಿ ಹಣ ಲಂಚ ಪಡೆಯುತ್ತಿದ್ದ ವೇಳೆ ಪಟ್ಟಣದ ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯ ಅಕೌಂಟೆಂಟ್ ಶಿವಕುಮಾರ್ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ತಾಲೂಕಿನ ಕಡಪಲಕೆರೆ ಗ್ರಾಮದ ಪಿ.ಹರೀಶ್ ದಂಪತಿಗೆ ಅಂತರ್ಜಾತಿ ವಿವಾಹದ ಸೌಲಭ್ಯ ಹಣ ಮಂಜೂರು ಮಾಡಲು ಅಕೌಂಟೆಂಟ್ ಶಿವಕುಮಾರ್ ಹನ್ನೆರಡು ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು, ಅದರ ಬಾಬ್ತು ಐದು ಸಾವಿರ ಹಣ ಪಡೆಯುವ ಸಂದರ್ಭದಲ್ಲಿ ತುಮಕೂರು ಎಸಿಬಿ ಅಧಿಕಾರಿಗಳು ಧಾಳಿ ನಡೆಸಿ ಹಣ ಮತ್ತು ಮಹತ್ತರದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.