ಕುಣಿಗಲ್
ಪುರಸಭೆ ನೂತನ ಅಧ್ಯಕ್ಷ ರಂಗಸ್ವಾಮಿ ಪೂರ್ಣಾವಧಿ ಅಧ್ಯಕ್ಷರಾಗಲಿ : ಡಿ.ನಾಗರಾಜಯ್ಯ
ಕುಣಿಗಲ್ : ಪುರಸಭೆ ನೂತನ ಅಧ್ಯಕ್ಷ ರಂಗಸ್ವಾಮಿಯನ್ನು ಪೂರ್ಣಾವಧಿ ಅಧ್ಯಕ್ಷರನ್ನಾಗಿ ಮುಂದುವರಿಸಬೇಕೆಂದು ಮಾಜಿ ಸಚಿವ ಡಿ.ನಾಗರಾಜಯ್ಯ ಶಾಸಕ ಡಾ ರಂಗನಾಥ್ ಅವರನ್ನು ಒತ್ತಾಯಿಸಿದ್ದಾರೆ.
ಪಟ್ಟಣದ ನಕ್ಷತ್ರ ಪ್ಯಾಲೆಸ್ ನಲ್ಲಿ ಅಹಿಂದ ವರ್ಗಗಳ ಒಕ್ಕೂಟದ ವತಿಯಿಂದ ನೂತನ ಅಧ್ಯಕ್ಷ ರಂಗಸ್ವಾಮಿ ಗೆ ಸಾರ್ವಜನಿಕ ಸನ್ಮಾನವನ್ನು ಏರ್ಪಡಿಸಿದ್ದ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವರು ಪುರಸಭೆ ಅಧ್ಯಕ್ಷ ನಾಗಿ ಕೆಲವು ತಿಂಗಳುಗಳು ಮಾತ್ರ ಅಧಿಕಾರ ನೀಡಿದರೆ ಪಟ್ಟಣದ ಅಭಿವೃದ್ಧಿಯನ್ನು ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿ ಶಾಸಕ ರಂಗನಾಥ್ ಹಾಗೂ ಸಂಸದ ಡಿಕೆ ಸುರೇಶ್ ಪಟ್ಟಣದ ಅಭಿವೃದ್ಧಿಯನ್ನು ಮನಸ್ಸಿನಲ್ಲಿಟ್ಟುಕೊಂಡು ರಂಗಸ್ವಾಮಿಯನ್ನು ಪೂರ್ಣಾವಧಿ ಅಧ್ಯಕ್ಷರನ್ನಾಗಿ ಮುಂದುವರೆಸಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕೆಂದು ಸಲಹೆ ನೀಡಿದರು ಡಾ॥ ರಾಜ್ ಕುಮಾರ್ ಸಂಘದ ರಾಜ್ಯಾಧ್ಯಕ್ಷರಾದ ಸಾ ರಾ ಗೋವಿಂದ್ ಮಾತನಾಡಿ ರಂಗಸ್ವಾಮಯ್ಯ ಕಾರ್ಯಚಟುವಟಿಕೆಯನ್ನು ಡಾ, ರಾಜ್ ಕುಮಾರ್ ಸಂಘದ ತಾಲ್ಲೂಕು ಅಧ್ಯಕ್ಷ ನಾಗಿದ್ದ ವೇಳೆಯಿಂದಲೂ ನಾನು ನೋಡಿದ್ದೇನೆ ಡಾ, ರಾಜ್ ಕುಮಾರ್ ರವರಿಗೆ ಫಾಲ್ಕೆ ಪ್ರಶಸ್ತಿ ಬಂದಂತಹ ಸಂದರ್ಭದಲ್ಲಿ ಈಗಿನ ಪುರಸಭೆಯ ನೂತನ ಅಧ್ಯಕ್ಷ ರಂಗಸ್ವಾಮಿ ರಾಜ್ ಕುಮಾರ್ ರವರನ್ನು ಕುಣಿಗಲ್ಗೆ ಕರೆಸಿ ಭಾರಿ ಬಹಿರಂಗ ಸಭೆಯನ್ನು ಏರ್ಪಡಿಸಿ ಸನ್ಮಾನಿಸಿದ ಕ್ಷಣ ನನ್ನ ಕಣ್ಣು ಕಟ್ಟಿದಂತಿದೆ ಆ ಸಂದರ್ಭದಲ್ಲಿ ಡಾಕ್ಟರ್ ರಾಜ್ ಕುಮಾರ್ ರವರು ರಂಗಸ್ವಾಮಿಯ ಕಾರ್ಯಚಟುವಟಿಕೆಯನ್ನು ಅವರದೇ ಆದ ಮಾತುಗಳಲ್ಲಿ ಬಣ್ಣಿಸಿದ್ದರು. ಆದ್ದರಿಂದ ಪುರಸಭೆ ಅಧ್ಯಕ್ಷನಾದ ರಂಗಸ್ವಾಮಿಗೆ ಅಭಿವೃದ್ದಿ ಚಿಂತನೆಗಳು ಜಾಸ್ತಿ ಇವೆ ಆದ್ದರಿಂದ ನಾನು ಕುಣಿಗಲ್ ಶಾಸಕ ರಂಗನಾಥ್ ಹಾಗೂ ಸಂಸದ ಡಿಕೆ ಸುರೇಶ್ ರವರಲ್ಲಿ ರಂಗಸ್ವಾಮಿಯನ್ನು ಈ ಬಾರಿ ಪುರಸಭೆ ಅಧ್ಯಕ್ಷ ರನ್ನಾಗಿ ಆಯ್ಕೆ ಮಾಡಲೇ ಬೇಕೆಂದು ಮನವಿ ಮಾಡಿಕೊಂಡಿದ್ದನು ರಂಗಸ್ವಾಮಿಯನ್ನು ಪುರಸಭೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಅವರೀರ್ವರಿಗೂ ನಾನು ಚಿರಋಣಿ ಎಂದ ಅವರು ಪಟ್ಟಣದಲ್ಲಿ ರಂಗಸ್ವಾಮಿ ನಾಗರಿಕರ ಸಮಸ್ಯೆಯನ್ನು ಆಲಿಸಲು ಶಾಸಕರ ಜತೆಗೂಡಿ ಮನೆ ಮನೆ ಭೇಟಿ ಕಾರ್ಯಕ್ರಮ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನಿಜಕ್ಕೂ ಶ್ಲಾಘನೀಯ ಎಂದರು. ಸಭೆಯಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್
ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವೈ ಎಚ್ ಹುಚ್ಚಯ್ಯ ಒಳಗೊಂಡಂತೆ ಮತ್ತಿತರರು ನೂತನ ಪುರಸಭೆ ಅಧ್ಯಕ್ಷ ರಂಗಸ್ವಾಮಿಯ ಕಾರ್ಯವೈಖರಿಯನ್ನು ಕೊಂಡಾಡಿದರು ಒಕ್ಕೂಟದ ವತಿಯಿಂದ ಹಾಗೂ ನಾಗರಿಕರಿಂದ ನೂತನ ಅಧ್ಯಕ್ಷ ರಂಗಸ್ವಾಮಿ ಗೆ ಸನ್ಮಾನ ಜರುಗಿತು. ಈ ಸಂದರ್ಭದಲ್ಲಿ ಅನೇಕ ಗಣ್ಯಾತಿಗಣ್ಯರು ಕುಣಿಗಲ್ ನಾಗರೀಕ ಬಂಧುಗಳು ಉಪಸ್ಥಿತರಿದ್ದರು.